More

    ವಿಶ್ವದ ಉನ್ನತ ವಿಜ್ಞಾನಿಗಳ ಶ್ರೇಯಾಂಕದಲ್ಲಿ ಸಿಯುಕೆ ಅಧ್ಯಾಪಕ

    ಕಲಬುರಗಿ: ಅಮೆರಿಕದ ಸ್ಟ್ಯಾನ್ಫೋರ್ಡ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವು ಜಾನ್ ಪಿಎ ಐಯೊನಿಡಿಸ್ ನಾಯಕತ್ವದಲ್ಲಿ ನಡೆಸಿದ ವಿಷಯವಾರು ವಿಶ್ಲೇಷಣೆಯ ಪ್ರಕಾರ ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಲಯದ ಗಣಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎನ್.ಸಂದೀಪ್ ಅವರು ವಿಶ್ವದ ಅಗ್ರ ಶೇ.2ರ ವಿಜ್ಞಾನಿಗಳಲ್ಲಿ ಸ್ಥಾನ ಪಡೆದಿದ್ದಾರೆ.
    ಸ್ಟ್ಯಾನ್ಫೋರ್ಡ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಎಚ್-ಸೂಚ್ಯಂಕ, ಸಹ-ಕತೃತ್ವ ಮತ್ತು ಸಂಯೋಜಿತ ಸೂಚಕದಂತಹ ಪ್ರಮಾಣೀಕೃತ ಉಲ್ಲೇಖದ ಸೂಚಕಗಳ ಆಧಾರದ ಮೇಲೆ ವಿಶ್ವದ 1,00,000 ಕ್ಕೂ ಹೆಚ್ಚು ಉನ್ನತ ವಿಜ್ಞಾನಿಗಳ ಡೇಟಾಬೇಸ್ ಅನ್ನು ರಚಿಸಿದ್ದಾರೆ. ಪ್ಲಾಸ್ ಬಯಾಲಜಿ ಜರ್ನಲ್ ಈ ಡೇಟಾಬೇಸ್ ಪ್ರಕಟಿಸಿದೆ.
    ಎಲ್ಲಾ ವಿಜ್ಞಾನಿಗಳನ್ನು 22 ವೈಜ್ಞಾನಿಕ ಕ್ಷೇತ್ರಗಳು ಮತ್ತು 176 ಉಪ ಕ್ಷೇತ್ರಗಳಾಗಿ ವರ್ಗೀಕರಿಸಲಾಗಿದೆ. ಉಲ್ಲೇಖಗಳು ಮತ್ತು ಸಂಯೋಜಿತ ಸೂಚಕಗಳ ವಿಶ್ಲೇಷಣೆಗಾಗಿ, ಎಲ್ಸೆವಿಯರ್ ಒದಗಿಸಿದ ದತ್ತಾಂಶವನ್ನು ಮೇ 6 ರ ಹೊತ್ತಿಗೆ ಡೇಟಾ ಫ್ರೀಜ್ನೊಂದಿಗೆ ಬಳಸಲಾಗಿದೆ. ಅವರ ಸಂಶೋಧನಾ ಪ್ರದೇಶವೆಂದರೆ ದ್ರವ ಯಂತ್ರಶಾಸ್ತ್ರ, ಪ್ಲಾಸ್ ಬಯಾಲಜಿ ಜರ್ನಲ್. ಈ ಡೇಟಾಬೇಸ್ ಪ್ರಕಾರ 160 ಸಂಶೋಧನಾ ಪ್ರಬಂಧ ಪ್ರಕಟಿಸಿದ್ದಾರೆ. ಅವರ ವಿಷಯ ಕ್ಷೇತ್ರದಲ್ಲಿ 731 ವಿಶ್ವ ಶ್ರೇಯಾಂಕ ಪಡೆದುಕೊಂಡಿದ್ದಾರೆ ಮತ್ತು ವಿಶ್ವದ 0.78% ಉನ್ನತ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದಾರೆ.
    ಡಾ.ಸಂದೀಪ್ ಸಾಧನೆಗೆ ಕುಲಪತಿ ಪ್ರೊ.ಎಚ್.ಎಂ.ಮಹೇಶ್ವರಯ್ಯ ಸಂತಸ ವ್ಯಕ್ತಪಡಿಸಿ, ನಮ್ಮ ಶಿಕ್ಷಕರ ಸಾಧನೆಗಾಗಿ ನಾವು ತುಂಬಾ ಹೆಮ್ಮೆಪಡುತ್ತೇವೆ. ವಿಶ್ವ ದಜರ್ೆಯ ಸಂಶೋಧನೆ ಮಾಡಲು ಅಧ್ಯಾಪಕರಿಗೆ ನಾವು ಅಂತಹ ವಾತಾವರಣ ಒದಗಿಸಲು ಪ್ರಯತ್ನಿಸುತ್ತಿದ್ದೇವೆ. ನನ್ನ ಅಧಿಕಾರಾವಧಿಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಎಲ್ಲ ವಿಜ್ಞಾನ ವಿಭಾಗಗಳಿಗೆ ಲ್ಯಾಬ್ ನಿಮರ್ಿಸಲು ಹೆಚ್ಚಿನ ಆದ್ಯತೆ ನೀಡಿದ್ದೇನೆ. ಹೆಚ್ಚು ಹೆಚ್ಚು ಅಧ್ಯಾಪಕರು ಆಯಾ ವಿಷಯಗಳಲ್ಲಿ ಮೈಲಿಗಲ್ಲುಗಳನ್ನು ಸಾಧಿಸಬೇಕೆಂಬುದು ನನ್ನ ಬಯಕೆ ಎಂದಿದ್ದಾರೆ.
    ಸಮಕುಲಪತಿ ಪ್ರೊ.ಜಿ.ಆರ್.ನಾಯಕ್, ರಿಜಿಸ್ಟ್ರಾರ್ ಪ್ರೊ. ಮುಷ್ತಾಕ್ ಅಹ್ಮದ್ ಐ ಪಟೇಲ್ ಮತ್ತು ಸ್ಕೂಲ್ ಆಫ್ ಫಿಸಿಕಲ್ ಸೈನ್ಸೆಸ್ನ ಡೀನ್ ಡಾ. ಡೀಪಕ್ ಸ್ಯಾಮುಯೆಲ್ ಸಂತಸ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts