More

    ವಿದ್ಯುತ್ ಪರಿವರ್ತಕಗಳನ್ನು ಬದಲಿಸಲು ಆಗ್ರಹ

    ಅರಸೀಕೆರೆ: ಗ್ರಾಮೀಣ ಭಾಗದ ತೋಟದ ಮನೆಗಳಿಗೆ ಸಂಪರ್ಕ ಕಲ್ಪಿಸಿರುವ ವಿದ್ಯುತ್ ಪರಿವರ್ತಕಗಳು ಸುಟ್ಟುಹೋಗಿದ್ದು ತಕ್ಷಣವೇ ಬದಲಾವಣೆ ಮಾಡುವಂತೆ ಒತ್ತಾಯಿಸಿ ರೈತರು ನಗರದ ಸೆಸ್ಕ್ ಕಚೇರಿ ಎದುರು ಸೋಮವಾರ ಮೌನ ಪ್ರತಿಭಟನೆ ನಡೆಸಿದರು.

    ಮುಖಂಡ ಮಲ್ಲೇನಹಳ್ಳಿ ಜಿ.ಹೊಳಿಯಪ್ಪ ಮಾತನಾಡಿ, ಗಾಳಿ,ಮಳೆ, ಮಿಂಚು, ಗುಡುಗು ಸೇರಿ ಹತ್ತು ಹಲವು ಕಾರಣಗಳಿಂದಾಗಿ ಗೀಜಿಹಳ್ಳಿ, ಮುದ್ದನಹಳ್ಳಿ, ಮಲ್ಲೇನಹಳ್ಳಿ ಸೇರಿ ಹಲವು ಗ್ರಾಮಗಳ ಸರಹದ್ದಿನಲ್ಲಿರುವ ಒಂಟಿ ತೋಟದ ಮನೆಗಳ ವಿದ್ಯುತ್ ಪರಿವರ್ತಕಗಳು ಸುಟ್ಟುಹೋಗಿವೆ. ಇದರಿಂದಾಗಿ ಕತ್ತಲಿನಲ್ಲಿ ಬದುಕು ನಡೆಸುವಂತಾಗಿದ್ದು ಗೋಳು ಹೇಳತೀರದಾಗಿದೆ ಎಂದು ಅಳಲು ತೋಡಿಕೊಂಡರು.

    ಜನ, ಜಾನುವಾರುಗಳಿಗೂ ನೀರಿನ ತತ್ವಾರ ಎದುರಾಗಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ತೀವ್ರ ಅಸಮಾಧಾನವ್ಯಕ್ತಪಡಿಸಿದರು.

    ಸುದ್ದಿತಿಳಿದು ಸ್ಥಳಕ್ಕಾಗಮಿಸಿದ ಸೆಸ್ಕ್ ಇಇ ಪ್ರಿಯಾಂಕ್, ಇನ್ನೆರಡು ದಿನದಲ್ಲಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ ಬಳಿಕ ಹೋರಾಟ ಕೈಬಿಡಲಾಯಿತು. ಮುಖಂಡರಾದ ಗಂಗಾಧರ್, ಸುನೀಲ್ ಕುಮಾರ್, ಕುಮಾರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts