More

    ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ವೃದ್ಧಿಸಲಿ

    ಯಳಂದೂರು: ವಿದ್ಯಾರ್ಥಿಗಳು ಹೆಚ್ಚಿನ ಕ್ರೀಡಾಸಕ್ತರಾದರೆ ಉತ್ತಮ ಕಲಿಕೆಯ ಜತೆಗೆ ಆರೋಗ್ಯವಂತ ಜೀವನ ನಡೆಸಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಕಾಂತರಾಜು ಸಲಹೆ ನೀಡಿದರು.


    ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ಜೆಎಸ್‌ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು.


    ಕ್ರೀಡೆ ಮನಸ್ಸು ಹಾಗೂ ದೇಹವನ್ನು ಪ್ರಫುಲ್ಲಗೊಳಿಸುತ್ತದೆ. ಕ್ರೀಡೆಯಿಂದ ಏಕಾಗ್ರತೆ ಮೂಡುತ್ತದೆ. ಇದರಿಂದ ಸಾಧನೆ ಸುಲಭವಾಗುತ್ತದೆ. ಇತ್ತೀಚೆಗೆ ಆರೋಗ್ಯ ಸಮಸ್ಯೆಗಳು ವಿಶ್ವವ್ಯಾಪಿಯಾಗಿದ್ದು, ಭಾರತವೂ ಇದರಿಂದ ಹೊರತಾಗಿಲ್ಲ. ನಮ್ಮಲ್ಲಿ ಹೆಚ್ಚು ಮಂದಿ ಯುವಕರಿದ್ದರೂ ಕ್ರೀಡಾ ಕ್ಷೇತ್ರದಲ್ಲಿ ವಿಶ್ವ ಮಟ್ಟದ ಸಾಧನೆಯಲ್ಲಿ ಹಿಂದುಳಿದಿದ್ದೇವೆ. ಇದಕ್ಕೆ ಕಠಿಣ ಶ್ರಮದ ಅಗತ್ಯತೆ ಇದ್ದು, ಪ್ರತಿಯೊಬ್ಬರೂ ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು. ಉನ್ನತ ಮಟ್ಟದ ಸಾಧನೆಗೆ ಬೇಕಾದಂತೆ ನಮ್ಮ ದೇಹವನ್ನು ಒಗ್ಗಿಸಿಕೊಳ್ಳಲು ಯತ್ನಿಸಬೇಕು ಎಂದು ಸಲಹೆ ನೀಡಿದರು.


    ಇದೇ ಸಂದರ್ಭದಲ್ಲಿ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲರಾದ ಎಚ್.ಎಸ್.ಚಂದ್ರಶೇಖರ, ಉಮೇಶ್, ನಂಜುಂಡಯ್ಯ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮುರಳಿ, ಉಪನ್ಯಾಸಕರಾದ ಅಕ್ಕಮಹಾದೇವಮ್ಮ, ಪಂಕಜ, ರೂಪಾ, ಶೀಲಾ, ಎಚ್.ಡಿ.ಬಿಂದು, ನಾಗರತ್ನ, ಚೈತ್ರಾ, ಕೆ.ಸಿ.ಸಂತೋಷ, ಕಾವ್ಯ, ಉಮೇಶ್, ಮಹದೇವಸ್ವಾಮಿ, ಶಂಕರ, ರಂಗೇಗೌಡ, ಮಹದೇವಸ್ವಾಮಿ ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts