More

    ವಿದೇಶಿಯರನ್ನೂ ಆಕರ್ಷಿಸುತ್ತಿದೆ ವಚನ ಸಾಹಿತ್ಯ

    ಮೈಸೂರು: ವಚನ ಸಾಹಿತ್ಯ ವಿದೇಶಿಯರನ್ನೂ ಆಕರ್ಷಿಸುತ್ತಿದೆ ಎಂದು ಓಮನ್ ದೇಶದ ಮಸ್ಕತ್‌ನ ಹಿರಿಯ ತಾಂತ್ರಿಕ ಅಭಿಯಂತರ ಭೀಮ ನೀಲಕಂಠರಾವ್ ಹಂಗರಗೆ ಹೇಳಿದರು.
    ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಅಂತರ್ಜಾಲದಲ್ಲಿ ‘ವಚನ ಮಾಧುರ್ಯ’ ಸರಣಿ ಕಾರ್ಯಕ್ರಮದಲ್ಲಿ 18ನೇ  ಅಭಿಯಂತರರಿಂದ ವಚನ ಮಾಧುರ್ಯವನ್ನು ಉದ್ಘಾಟಿಸಿ ಮಾತನಾಡಿದರು
    ಕನ್ನಡ ನಾಡು ಶರಣರು ನಡೆದಾಡಿದಂತಹ ಪುಣ್ಯ ಸ್ಥಳ. ಶರಣರು ರಚಿಸಿದಂತಹ ವಚನ ಸಾಹಿತ್ಯ ಕರ್ನಾಟಕ, ಭಾರತ ಮಾತ್ರವಲ್ಲದೆ ವಿಶ್ವದಲ್ಲೇ ಅತ್ಯಂತ ಶ್ರೀಮಂತವಾದುದು. ಮಹಿಳೆಯರೆನ್ನದೆ, ಯಾವುದೇ ಜಾತಿಯವರೆನ್ನದೆ, ಧರ್ಮ ಭೇದವಿಲ್ಲದೆ, ಲಿಂಗಭೇದವಿಲ್ಲದೆ ಪ್ರತಿಯೊಬ್ಬರನ್ನೂ ಅಪ್ಪಿಕೊಂಡ ಸಾಹಿತ್ಯ ಯಾವುದಾದರೂ ಇದ್ದರೆ ಅದು ವಚನ ಸಾಹಿತ್ಯ. ಏಕೆಂದರೆ ವಚನ ಸಾಹಿತ್ಯ 12ನೇ ಶತಮಾನದಲ್ಲಿ ಜನರ ಆಡುಭಾಷೆಯಾದಂತಹ ನಡುಗನ್ನಡದಲ್ಲಿ ರಚನೆಯಾಯಿತು. ಆ ಸಂದಭದಲ್ಲಿ 200ಕ್ಕೂ ಹೆಚ್ಚು ವಚನಕಾರರು ಸಾಹಿತ್ಯವನ್ನು ರಚಿಸಿದರು ಎಂದರೆ ಬಸವಣ್ಣವರು ಕೈಗೊಂಡ ಕಾಯಕ, ವಚನಕ್ರಾಂತಿ ಎಲ್ಲರ ಮೇಲೆ ಪರಿಣಾಮ ಬೀರಿತ್ತು ಎಂದರು.
    ವಚನಗಳು ನಾಡಿನ ಸಾಂಸ್ಕೃತಿಕ ಮಹತ್ವವನ್ನು ಕೂಡ ತಿಳಿಸುವುದರಿಂದ ಅನೇಕ ವಿದೇಶಿಗರು ವಚನ ಸಾಹಿತ್ಯವನ್ನು ಅಧ್ಯಯನ ಮಾಡಲು ತೊಡಗುತ್ತಿರುವುದು ಹೆಮ್ಮೆಯ ವಿಷಯ ಎಂದರು.
    ನಂತರ ನಡೆದ ವಚನ ಮಾಧುರ್ಯ ಕಾರ್ಯಕ್ರಮದಲ್ಲಿ ಮೈಸೂರಿನ ವಿಶ್ರಾಂತ ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ವಿ ನಾಗರಾಜು, ಮೈಸೂರಿನ ತಾಂತ್ರಿಕ ಅಭಿಯಂತರ ಸೌರಭ, ಫೌಂಡೇಷನ್ ಅಂತಾರಾಷ್ಟ್ರೀಯ ಅಂತರ್ಜಾಲ ಸಂಚಾಲಕ ಪಿ.ವಿ.ರುದ್ರೇಶ್ ವಚನ ವಾಚನ ಮತ್ತು ಗಾಯನ ಮಾಡಿದರು.
    ಲಾಳನಹಳ್ಳಿ ಮಠದ ಜಯದೇವಿತಾಯಿ, ಫೌಂಡೇಷನ್ ಸಂಸ್ಥಾಪಕರಾದ ಡಾ.ವಚನ ಕುಮಾರಸ್ವಾಮಿ, ರೂಪಾ ಕುಮಾರಸ್ವಾಮಿ, ಸುಧಾ ಮೃತ್ಯುಂಜಯಪ್ಪ, ಅನಿಲ್ ಕುಮಾರ್ ವಾಜಂತ್ರಿ, ಲಿಂಗಣ್ಣ, ಸೀಮಾ ಮೋಹನ್, ಉಮಾ ಪ್ರತಾಪ್, ಮಸ್ಕತ್‌ನ ನಂದೀಶ್ವರ್ ನಂದು ದಾವಣಗೆರೆ, ಪ್ರಕಾಶ್ ಉಳ್ಳಾಗಡ್ಡಿ, ನೀಲಾಂಬಿಕೆ ದೇವಿ, ಉಮಾಪತಿ ಕೆ.ಎಸ್.ಗಿರಿಜಾಂಬ, ಸಂಗಮೇಶ್, ಸ್ಮಿತಾ ದಿನೇಶ್, ಸರಸ್ವತಿ ರಾಮಣ್ಣ, ಡಾ.ಸುಮಂಗಳಾ ಉಪಸ್ಥಿತರಿದ್ದರು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts