More

    ಚೀನೀ ಗ್ಯಾರಂಟಿ VS ಭಾರತೀಯ ಗ್ಯಾರಂಟಿ

    ಲೋಕಸಭಾ ಚುನಾವಣೆ ಬಗ್ಗೆ ಷಾ ವ್ಯಾಖ್ಯಾನ | ತೆಲಂಗಾಣದಲ್ಲಿ ಬಿಜೆಪಿ ಮತ ಯಾಚನೆ

    ಭೋಂಗಿರ್, ತೆಲಂಗಾಣ: ಹಾಲಿ ಲೋಕಸಭೆ ಚುನಾವಣೆ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ, ಭಾರತೀಯ ಗ್ಯಾರಂಟಿ ಹಾಗೂ ರಾಹುಲ್ ಗಾಂಧಿಯವರ ಜಿಹಾದ್​ಗಾಗಿ ಮತ ಮತ್ತು ಚೀನೀ ಗ್ಯಾರಂಟಿ ನಡುವಿನ ಚುನಾವಣೆಯಾಗಿದೆ ಎಂದು ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ.

    ತೆಲಂಗಾಣದ ಭೋಂಗಿರ್ ಕ್ಷೇತ್ರದಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್, ಬಿಆರ್​ಎಸ್ ಮತ್ತು ಎಐಎಂಐಎಂ ಪಕ್ಷಗಳು ತುಷ್ಟೀಕರಣವನ್ನೇ ನಂಬಿಕೊಂಡಿದ್ದು, ಈ ಪಕ್ಷಗಳು ರಾಮನವಮಿ ಮೆರವಣಿಗೆಯನ್ನು ಕೂಡ ನಡೆಸಲು ಬಿಡುವುದಿಲ್ಲ. ಮೇಲಾಗಿ, ಕೇಂದ್ರ ಸರ್ಕಾರದ ಸಿಎಎ ಕಾನೂನನ್ನೂ ವಿರೋಧಿಸುತ್ತಾರೆ. ಇವರು ಹೈದರಾಬಾದ್ ವಿಮೋಚನಾ ದಿನ (ಸೆಪ್ಟೆಂಬರ್ 17) ಆಚರಿಸಲು ಅನುಮತಿಸುವುದಿಲ್ಲ. ಷರಿಯಾ ಮತ್ತು ಕುರಾನ್ ಆಧಾರದ ಮೇಲೆ ತೆಲಂಗಾಣದಲ್ಲಿ ಆಡಳಿತ ನಡೆಸಲು ಬಯಸುತ್ತಾರೆ ಎಂದು ಕಿಡಿಕಾರಿದರು.

    ಇದುವರೆಗೆ ಪೂರ್ಣಗೊಂಡ ಮೂರು ಹಂತಗಳ ಮತದಾನದಲ್ಲಿ ಬಿಜೆಪಿ ಸುಮಾರು 200 ಸ್ಥಾನಗಳನ್ನು ಗೆಲ್ಲಲಿದೆ. 2019ರಲ್ಲಿ ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಗೆದ್ದಿತ್ತು. ಈ ಚುನಾವಣೆ ಯಲ್ಲಿ 10ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂಬುದನ್ನು ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅರಿತುಕೊಳ್ಳಬೇಕು ಎಂದು ಸೂಚ್ಯವಾಗಿ ತಿಳಿಸಿದರು.

    ರಾಹುಲ್ ಹೇಳಿದ್ಯಾವುದೂ ಆಗಿಲ್ಲ: ತೆಲಂಗಾಣ ವಿಧಾನಸಭಾ ಚುನಾ ವಣೆ ವೇಳೆ ರಾಹುಲ್ ಗಾಂಧಿ 2 ಲಕ್ಷ ರೂ. ಕೃಷಿ ಸಾಲ ಮನ್ನಾ, ರೈತರಿಗೆ ಪ್ರತಿ ವರ್ಷ 15 ಸಾವಿರ ರೂ., ಕೃಷಿ ಕಾರ್ವಿುಕರಿಗೆ ವಾರ್ಷಿಕ -ಠಿ;12 ಸಾವಿರ, ಭತ್ತದ ಎಂಎಸ್​ಪಿ ಮೇಲೆ 500 ರೂ. ಬೋನಸ್, ವಿದ್ಯಾರ್ಥಿಗಳಿಗೆ ಖಾತರಿ ಇಲ್ಲದೆ 5 ಲಕ್ಷ ರೂ. ಸಾಲ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಅವ್ಯಾವುವೂ ಕಾರ್ಯಗತಗೊಂಡಿಲ್ಲ ಎಂದು ಆರೋಪಿಸಿದರು.

    ತೆಲಂಗಾಣವನ್ನೇ ಎಟಿಎಂ ಮಾಡಿಕೊಂಡ ಕಾಂಗ್ರೆಸ್

    ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜಸ್ಥಾನ ಮತ್ತು ತೆಲಂಗಾಣದ ಜನರಿಗೆ ಕಾಶ್ಮೀರದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದಿರಬಹುದು. ಆದರೆ ಭೋಂಗಿರ್ ಜನರು ಕಾಶ್ಮೀರಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧರಿರುತ್ತಾರೆ ಎಂದು ಆರ್ಟಿಕಲ್ 370 ರದ್ದತಿ ಸಮರ್ಥಿಸಿದ ಸಚಿವ ಶಾ, ಮೋದಿಯವರು ಭಯೋತ್ಪಾದನೆ, ನಕ್ಸಲಿಸಂ ಕೊನೆಗೊಳಿಸಿದ್ದಾರೆ. ತ್ರಿವಳಿ ತಲಾಖ್ ತೆಗೆದುಹಾಕಲಾಗಿದೆ. ಆದರೆ ಕಾಂಗ್ರೆಸ್, ಬಿಆರ್​ಎಸ್ ಮತ್ತು ಎಐಎಂಐಎಂ ಅದನ್ನು ಮರುಸ್ಥಾಪಿಸುವ ಉದ್ದೇಶ ಹೊಂದಿವೆ. ಸಿಎಂ ರೇವಂತ್ ರೆಡ್ಡಿ ತೆಲಂಗಾಣವನ್ನು ಕಾಂಗ್ರೆಸ್​ನ ಎಟಿಎಂ ಮಾಡಿದ್ದಾರೆ ಎಂದು ಕಿಡಿಕಾರಿದರು.

    ಸುಳ್ಳುಗಳ ಮೂಲಕವೇ ವಿಪಕ್ಷದ ಹೋರಾಟ

    ಬಿಜೆಪಿಯವರು ಸಂವಿಧಾನ ಬದಲಾಯಿಸುತ್ತಾರೆ, ಮೀಸಲಾತಿ ರದ್ದುಗೊಳಿಸುತ್ತಾರೆ ಎಂಬ ಕಾಂಗ್ರೆಸ್ ಆರೋಪ ಉಲ್ಲೇಖಿಸಿದ ಅವರು, ಕಾಂಗ್ರೆಸ್ ಸುಳ್ಳುಗಳನ್ನು ಹೇಳುವ ಮೂಲಕ ಚುನಾವಣೆಯಲ್ಲಿ ಹೋರಾಡಲು ಬಯಸುತ್ತಿದೆ. ಕಳೆದ 10 ವರ್ಷಗಳಿಂದ ಪೂರ್ಣ ಬಹುಮತದೊಂದಿಗೆ ಅಧಿಕಾರದಲ್ಲಿದ್ದರೂ ನಾವು ಇಂಥ ಕ್ರಮಗಳನ್ನು ಕೈಗೊಂಡಿಲ್ಲ. ತೆಲಂಗಾಣದಲ್ಲಿ ಕಾಂಗ್ರೆಸ್ ಮುಸ್ಲಿಮರಿಗೆ ಶೇ.4 ಮೀಸಲಾತಿ ನೀಡುವ ಮೂಲಕ ಎಸ್​ಸಿ-ಎಸ್​ಟಿ ಮತ್ತು ಒಬಿಸಿಗಳ ಮೀಸಲಾತಿ ಕಸಿದುಕೊಂಡಿದೆ ಆಕ್ರೋಶ ಹೊರಹಾಕಿದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ಕೊನೆಗೊಳಿಸಿ ಎಸ್​ಸಿ-ಎಸ್​ಟಿ ಮತ್ತು ಒಬಿಸಿ ಕೋಟಾಗಳನ್ನು ಹೆಚ್ಚಿಸಲಿದೆ ಎಂದರು.

    ಹರಿಯಾಣದಲ್ಲಿ ವಿಶ್ವಾಸಮತಕ್ಕೆ ಒತ್ತಾಯ

    ಚಂಡೀಗಢ: ಹರಿಯಾಣದಲ್ಲಿ ನಯಾಬ್ ಸಿಂಗ್ ಸೈನಿ ಸರ್ಕಾರ ಬಹುಮತ ಹೊಂದಿಲ್ಲ ಎಂದು ಆರೋಪಿಸಿರುವ ಜೆಜೆಪಿ ನಾಯಕ, ಮಾಜಿ ಡಿಸಿಎಂ ದುಷ್ಯಂತ್ ಚೌಟಾಲ, ವಿಶ್ವಾಸಮತ ನಿರ್ಣಯಕ್ಕೆ ಕ್ರಮಕೈಗೊಳ್ಳುವಂತೆ ಕೋರಿ ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರಿಗೆ ಬುಧವಾರ ಪತ್ರ ಬರೆದಿದ್ದಾರೆ. ಮೂವರು ಪಕ್ಷೇತರ ಶಾಸಕರು ಮಂಗಳವಾರ ಬೆಂಬಲ ಹಿಂಪಡೆದಿದ್ದನ್ನು ಉಲ್ಲೇಖಿಸಿ ಅವರು ವಿಶ್ವಾಸಮತ ಸಾಬೀತಿಗೆ ಒತ್ತಾಯಿಸಿದ್ದಾರೆ. ಹರಿಯಾಣದಲ್ಲಿ ಬಿಜೆಪಿ ಸರ್ಕಾರ ಉರುಳಿಸಲು ಕಾಂಗ್ರೆಸ್​ಗೆ ಬೆಂಬಲ ನೀಡಲು ಸಿದ್ಧ ಎಂದು ಜೆಜೆಪಿ ನಾಯಕರು ಹೇಳಿಕೆ ನೀಡಿದ್ದರು. ಮತ್ತೊಂದೆಡೆ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದು ಸಿಎಂ ಸೈನಿ ಹೇಳಿದ್ದಾರೆ. ಪಕ್ಷೇತರ ಶಾಸಕರಾದ ಸೊಂಬಿರ್ ಸಂಗ್ವಾನ್, ರಣಧೀರ್ ಸಿಂಗ್ ಗೊಲ್ಲೆನ್, ಧರಂಪಾಲ್ ಗೊಂಡರ್ ಬೆಂಬಲ ಹಿಂಪಡೆದವರಾಗಿದ್ದು, ಕಾಂಗ್ರೆಸ್​ಗೆ ಬೆಂಬಲ ನೀಡುವುದಾಗಿಯೂ ಹೇಳಿಕೊಂಡಿದ್ದಾರೆ.

    ರಾಯ್ಬರೇಲಿಯಲ್ಲಿ ರಾಹುಲ್​ಗೆ ಹೀನಾಯ ಸೋಲು ಖಚಿತ

    ರಾಯ್ ಬರೇಲಿ: ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಥಳೀಯ ನಾಯಕರನ್ನು ಕಣಕ್ಕಿಳಿಸುವ ಬದಲು ಪ್ರಿಯಾಂಕಾ ಗಾಂಧಿಯ ಗುಮಾಸ್ತರನ್ನು ಸ್ಪರ್ಧೆಗಿಳಿಸಿದ್ದೇಕೆ? ಎಂದು ರಾಯ್ ಬರೇಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನೇಶ್ ಪ್ರತಾಪ್ ಸಿಂಗ್ ವ್ಯಂಗ್ಯವಾಡಿದ್ದಾರೆ. ಜತೆಗೆ ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ಹೀನಾಯವಾಗಿ ಸೋಲಲಿದ್ದಾರೆ ಎಂದೂ ಹೇಳಿದ್ದಾರೆ. ಅಮೇಠಿ, ರಾಯ್ ಬರೇಲಿ ಎರಡೂ ಕಾಂಗ್ರೆಸ್ ಭದ್ರಕೋಟೆ ಆಗಿದ್ದು, ರಾಯ್ ಬರೇಲಿಯಲ್ಲಿ ಕಾಂಗ್ರೆಸ್​ನ ರಾಹುಲ್​ಗೆ ಎದುರಾಳಿ ಆಗಿ ಬಿಜೆಪಿಯಿಂದ ಕಣಕ್ಕಿಳಿದಿರುವ ದಿನೇಶ್ ಪ್ರತಾಪ್ ಸಿಂಗ್, ಗುರುವಾರ ತಮ್ಮ ಕ್ಷೇತ್ರದಲ್ಲಿ ನಡೆದ ಚುನಾ ವಣಾ ರ್ಯಾಲಿಯಲ್ಲಿ ಈ ವಾಗ್ದಾಳಿ ನಡೆಸಿದರು.

    ರಾಹುಲ್ ಗಾಂಧಿ ‘ಮೊಹಬ್ಬತ್ ಕಿ ದುಕಾನ್’ (ಪ್ರೀತಿಯ ಅಂಗಡಿ) ತೆರೆದಿದ್ದಾಗಿ ಹೇಳುತ್ತಾರೆ. ಆದರೆ ಕಾಂಗ್ರೆಸ್​ಗೆ ರಾಯ್ ಬರೇಲಿ, ಅಮೇಠಿ ಬಗ್ಗೆ ಎಂಥ ದ್ವೇಷ ಇದೆ ಎಂದರೆ ರಾಯ್ ಬರೇಲಿ ಮತ್ತು ಅಮೇಠಿಯಿಂದ 1952ರಿಂದಲೂ ಒಬ್ಬ ಸ್ಥಳೀಯರನ್ನೂ ರಾಜ್ಯಸಭೆಗೆ ಕಳುಹಿಸಿಲ್ಲ, ರಾಯ್ ಬರೇಲಿಯ ಒಬ್ಬರನ್ನೂ ಲೋಕಸಭೆಗೆ ಕಣಕ್ಕಿಳಿಸಿಲ್ಲ. ಅಮೇಠಿ ಲೋಕಸಭೆ ಅಭ್ಯರ್ಥಿ ಕೂಡ ಹೊರಗಿನಿಂದ ಬಂದವರೇ ಆಗಿದ್ದಾರೆ. ಪ್ರಿಯಾಂಕಾ ಗಾಂಧಿ ಗುಮಾಸ್ತ, ಲುಧಿಯಾನದ ಕಿಶೋರಿಲಾಲ್ ಶರ್ಮಾ ಸ್ಪರ್ಧಿಸುತ್ತಿದ್ದಾರೆ. ಅಲ್ಲಿಯೂ ಸ್ಥಳೀಯ ಕಾಂಗ್ರೆಸ್ ನಾಯಕರಿಲ್ಲವೇ? ಎಂದು ಪ್ರಶ್ನಿಸಿದ ದಿನೇಶ್, ಈ ಸಲ ಅಮೇಠಿ-ರಾಯ್ ಬರೇಲಿಯ ಜನರು ಕಾಂಗ್ರೆಸ್​ಗೆ ತಕ್ಕ ಉತ್ತರವನ್ನೇ ನೀಡಲಿದ್ದಾರೆ ಎಂದರು.

    ರಾಯ್ ಬರೇಲಿಯಲ್ಲಿ 2019ರಲ್ಲಿ ಇಲ್ಲಿ ಸ್ಪರ್ಧಿಸಿದ್ದ ಸೋನಿಯಾ ಗಾಂಧಿ ಗೆದ್ದಿದ್ದ ಮತಗಳಿಗಿಂತಲೂ ಹೆಚ್ಚಿನ ಅಂತರದಿಂದ ರಾಹುಲ್ ಗಾಂಧಿ ಈ ಸಲ ಸೋಲಲಿದ್ದಾರೆ ಎಂದಿದ್ದಾರೆ. ಸೋನಿಯಾ ಗಾಂಧಿ 2019ರಲ್ಲಿ ಸಿಂಗ್ ಅವರನ್ನು 1.67 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದರು. ಅದಾಗ್ಯೂ ಇದು ಆಕೆಯ ಹಿಂದಿನ ಐದು ಚುನಾವಣೆಗಳಲ್ಲೇ (ಉಪ ಚುನಾವಣೆಯೂ ಸೇರಿ) ಅತಿ ಕಡಿಮೆ ಅಂತರದ ಜಯವಾಗಿತ್ತು.

    ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅಯೋಧ್ಯೆ ಯಾತ್ರೆ ಉಚಿತ

    ಮಲ್ಕಂಗಿರಿ(ಒಡಿಶಾ): ಈಶಾನ್ಯ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಒಡಿಶಾದ ಐದು ಲಕ್ಷ ಜನರಿಗೆ ಅಯೋಧ್ಯೆ ಶ್ರೀರಾಮಮಂದಿರಕ್ಕೆ ಉಚಿತ ಧಾರ್ವಿುಕ ಯಾತ್ರೆ ಮಾಡಿಸಲಾಗುವುದು ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವ ಸರ್ವ ಭರವಸೆ ನೀಡಿದ್ದಾರೆ. ಮಲ್ಕಂಗಿರಿ ಜಿಲ್ಲೆಯ ಕಲಿಮೆಲದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಅಸ್ಸಾಮ್ಲ್ಲಿ ನಾನು ಒಂದು ಲಕ್ಷ ಜನರನ್ನು ಅಯೋಧ್ಯೆಗೆ ಕರೆದೊಯ್ಯಲು ನಿರ್ಧರಿಸಿದ್ದು, ಅದರ ಖರ್ಚನ್ನು ರಾಜ್ಯವೇ ಭರಿಸಲಿದೆ. ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಿಜೆಪಿ ಸಿಎಂ ಇದಕ್ಕೆ ವ್ಯವಸ್ಥೆ ಮಾಡಲಿದ್ದಾರೆ ಎಂದರು.

    ನಯನತಾರ ಸೇರಿದಂತೆ ಟಾಪ್​​ ನಟಿಯರೊಂದಿಗೆ ಲವ್ವಿ-ಡವ್ವಿ​! ಈ ವದಂತಿಗಳಲ್ಲಿ ಸಿಲುಕಿದ್ದ ಸ್ಟಾರ್​ ನಟ ಈತ

    ಅಶ್ಲೀಲ ವಿಡಿಯೋ ವಿವಾದ: ನಟಿ ಜ್ಯೋತಿ ರೈ ಪರ ಫ್ಯಾನ್ಸ್​ ಮಾಡಿಕೊಂಡ ಮನವಿ ಇದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts