More

    ವಿಜಯಾನಂದ ಚಿತ್ರದ ಮೆರವಣಿಗೆ ಇಂದು

    ಬೆಳಗಾವಿ: ಅತ್ಯಂತ ಕುತೂಹಲ ಕೆರಳಿಸಿರುವ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರ ಜೀವನಾಧಾರಿತ(ಬಯೋಪಿಕ್) ಕಥೆಯನ್ನು ಹೊಂದಿರುವ ವಿಆರ್‌ಎಲ್ ಪ್ರೊಡಕ್ಷನ್ ವತಿಯಿಂದ ನಿರ್ಮಾಣವಾಗಿರುವ ಮೊಟ್ಟಮೊದಲ ಚಿತ್ರ ‘ವಿಜಯಾನಂದ’ ಶುಕ್ರವಾರ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

    ಸಿನಿಮಾ ಪ್ರಚಾರಾರ್ಥವಾಗಿ ನಗರದಲ್ಲಿ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಕ್ಯಾಂಪ್ ಪ್ರದೇಶದಲ್ಲಿರುವ ದಂಡು ಮಂಡಳಿ ಕಚೇರಿ ಮುಂಭಾಗದಿಂದ ಐನಾಕ್ಸ್ ಚಿತ್ರ ಮಂದಿರದವರೆಗೆ ಮೆರವಣಿಗೆ ನಡೆಯಲಿದೆ. ನಮ್ಮ ದೇಶದಲ್ಲಿ ಬಯೋಪಿಕ್‌ಗೆ ವಿಶೇಷ ಸ್ಥಾನಮಾನವಿದ್ದು, ಕ್ರೀಡಾಪಟುಗಳು, ಸ್ವಾತಂತ್ರ್ಯ ಹೋರಾಟಗಾರರ ಜೀವನಾಧಾರಿತ ಹಲವಾರು ಯಶಸ್ವಿ ಚಿತ್ರಗಳು ತೆರೆ ಮೇಲೆ ಮೂಡಿ ಬಂದಿವೆ. ಆದರೆ ಉದ್ಯಮದಲ್ಲಿ ಸಾಧನೆ ಮಾಡಿ ಸಮಾಜಕ್ಕೆ ಮತ್ತು ದೇಶದ ಆರ್ಥಿಕತೆಗೆ ತಮ್ಮದೇ ಆದ ಕೊಡುಗೆ ನೀಡಿರುವ ಸಾಧಕರ ಬಯೋಪಿಕ್‌ಗಳು ತೀರಾ ವಿರಳ. ಅಂತಹ ಸಾಲಿನಲ್ಲಿ ನಿಲ್ಲುವ ‘ವಿಜಯಾನಂದ’ಚಿತ್ರವನ್ನು ಇಂದು ಸಿನಿ ಪ್ರಿಯರು ಕಣ್ತುಂಬಿಕೊಳ್ಳಲಿದ್ದಾರೆ. ಡಾ. ವಿಜಯ ಸಂಕೇಶ್ವರ ಅವರು ಪತ್ರಿಕೋದ್ಯಮಿಯಾಗಿ ಯಶಸ್ವಿಯಾಗಿದ್ದಾರೆ ವಿಜಯಕಾಂತ ಡೈರಿ ಹಾಗೂ ಆದಿತ್ಯ ಮಿಲ್ಕ್‌ನ ವ್ಯವಸ್ಥಾಪಕ ನಿರ್ದೇಶಕ ಶಿವಕಾಂತ ಸಿದ್ನಾಳ, ಉಪಾಧ್ಯಕ್ಷ ವಿಜಯಕಾಂತ ಸಿದ್ನಾಳ, ನಿರ್ದೇಶಕರಾದ ದೀಪಾ ಸಿದ್ನಾಳ, ಪುತ್ರಿ ನಿವೇದಿತಾ ಸಿದ್ನಾಳ, ಅವರು ಮೆರವಣಿಗೆ ನೇತೃತ್ವ ವಹಿಸಲಿದ್ದಾರೆ. ಮೆರವಣಿಗೆಯಲ್ಲಿ ಡಾ.ವಿಜಯ ಸಂಕೇಶ್ವರ ಹಾಗೂ ಡಾ.ಆನಂದ ಸಂಕೇಶ್ವರ ಅವರ ಅಭಿಮಾನಿಗಳು, ಸಾರ್ವಜನಿಕರು ಸೇರಿ 500ಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದಾರೆ.

    ಬಿ.ಎಸ್.ಚನ್ನಬಸಪ್ಪ ಆ್ಯಂಡ್ ಸನ್ಸ್ ಜವಳಿ ಮಳಿಗೆ ಮಾಲೀಕ ಬಿ.ಸಿ.ಶೇಖರ, ಆದಿತ್ಯ ಮಿಲ್ಕ್‌ನ ಸಿಇಓ ನಿಯಾಜ್ ಸೈಯದ್, ವಿಜಯವಾಣಿ ಬಳಗದ ಸದಸ್ಯರು ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ. ವಿಜಯಾನಂದ ಚಲನಚಿತ್ರವು ಬೆಳಗಾವಿಯ ಚಿತ್ರಾ, ಐನಾಕ್ಸ್, ಕಪಿಲ, ಹಾರೂಗೇರಿಯ ಚಂದ್ರಮಾ, ರಾಯಬಾಗದ ದತ್ತ, ಅಥಣಿಯ ದುರ್ಗಾಲಕ್ಷ್ಮೀ, ಬೈಲಹೊಂಗಲದ ಸಂಗಮ, ಸಂಕೇಶ್ವರದ ಸಾಯಿನಾಥ, ರಾಮದುರ್ಗದ ವೆಂಕಟೇಶ್, ಗೋಕಾಕಿನ ಲಕ್ಷ್ಮೀ, ಯಾದವಾಡದ ಬಸವೇಶ್ವರ, ಚಿಕ್ಕೋಡಿ ತಾಲೂಕಿನ ಅಂಕಲಿ ಮಯೂರ ಚಿತ್ರಮಂದಿರದಲ್ಲಿ ತೆರೆ ಕಾಣಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts