More

    ವಿಚಾರಧಾರೆ ಉತ್ಕರ್ಷಕ್ಕೆ ಉತ್ಸವ ಅಗತ್ಯ

    ಹೊನ್ನಾವರ: ಮನುಕುಲದ ಉದ್ದಾರಕ್ಕೆ ನಮ್ಮ ವಿಚಾರಧಾರೆಗಳು ಪುಟಿಯಲು ಸಾಂಸ್ಕೃತಿಕ ಉತ್ಸವಗಳು ಬೇಕು ಎಂದು ಉದ್ಯಮಿ ಎನ್.ಆರ್. ಹೆಗಡೆ ರಾಘೊಣ ಹೇಳಿದರು.

    ಪಟ್ಟಣದ ಸೇಂಟ್ ಅಂಥೋನಿ ಮೈದಾನದಲ್ಲಿ ಶರಾವತಿ ಸಾಂಸ್ಕೃತಿಕ ವೇದಿಕೆ ಶನಿವಾರ ಆಯೋಜಿಸಿದ್ದ 14ನೇ ವರ್ಷದ ಶರಾವತಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

    ಪಂಚಭೂತಗಳಲ್ಲಿ ನೀರು ಪ್ರಮುಖವಾದುದು. ಅದನ್ನು ಗೌರವಿಸುವ ಕಾರ್ಯ ನಡೆದಿದೆ. ಕನ್ನಡ ನಾಡಿನ ವಿಚಾರ, ಕಲೆ, ಕಲಾವಿದರನ್ನು ಗುರುತಿಸಿ ಪೋ›ತ್ಸಾಹಿಸಲು ಈ ವೇದಿಕೆ ಕಾರ್ಯೋನ್ಮುಖವಾಗಿದೆ ಎಂದರು.

    ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಿವೃತ್ತ ಇಂಜಿನಿಯರ್ ಆರ್.ಜಿ. ಭಟ್, ಶಿಕ್ಷಣ ತಜ್ಞ ಅರುಣ ಉಭಯಕರ, ಸಮಾಜ ಸೇವಕಿ ಛಾಯಾ ಉಭಯಕರ, ಛಾಯಾಗ್ರಾಹಕ ಪಿ.ಕೆ. ಹೆಗಡೆ, ಮರಳು ಶಿಲ್ಪಿ ವೆಂಕಟ್ರಮಣ ಆಚಾರ್ಯ, ಸಂಗೀತ ಶಿಕ್ಷಕಿ ಲಕ್ಷ್ಮೀ ಹೆಗಡೆ ಹೊಸಾಕುಳಿ ಅವರನ್ನು ಸನ್ಮಾನಿಸಲಾಯಿತು.

    ಶ್ರೀಕಾಂತ ಭಟ್ ಕುಮಟಾ, ವೇದಿಕೆಯ ಅಧ್ಯಕ್ಷ ವೆಂಕಟ್ರಮಣ ಹೆಗಡೆ ಕವಲಕ್ಕಿ ಉಪಸ್ಥಿತರಿದ್ದರು. ವೇದಿಕೆಯ ಗೌರವಾಧ್ಯಕ್ಷ ಪಿ.ಎಸ್. ಭಟ್ ಉಪ್ಪೋಣಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಶಂಭು ಹೆಗಡೆ ಸಂತನ್ ಇದ್ದರು. ಪ್ರಾಚಾರ್ಯ ಎಸ್.ಜಿ. ಭಟ್ ಮತ್ತು ಕಲ್ಪನಾ ಹೆಗಡೆ ನಿರ್ವಹಿಸಿದರು.

    ನಂತರ ಪೂಜಾ ಹೆಗಡೆ, ಸಾನ್ವಿ ರಾವ್, ಅನ್ವಿತಾ ಹರೀಶ ನಾಯ್ಕ ಮತ್ತು ಸಂಗಡಿಗರಿಂದ ಭರತನಾಟ್ಯ, ರಿಷಿ ಸಾಯಿದಾಸ ಅವರಿಂದ ಗಾಯನ. ಲತಾ ಗುರುರಾಜ ಹಾಗೂ ಗುರುರಾಜ ಹೆಗಡೆ ಆಡುಕಳ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts