More

    ವಿಕಲಚೇತನರಿಗೆ ಪ್ರೋತ್ಸಾಹ ನೀಡಿ


    ಯಾದಗಿರಿ: ವಿಕಲಚೇತನರ ಬಗ್ಗೆ ಸಮಾಜದ ಅನುಕಂಪ ತೋರದೆ ಅವರಿಗೆ ಸೂಕ್ತ ಪ್ರೋತ್ಸಾಹ ಮತ್ತು ಅವಕಾಶಗಳನ್ನು ನೀಡುವ ಅಗತ್ಯವಿದೆ ಎಂದು ಜಿಪಂ ಸಿಇಒ ಗರೀಮಾ ಪನ್ವಾರ ತಿಳಿಸಿದರು.

    ಜಿಲ್ಲೆಯ ವಿಕಲಚೇತನ ಫಲಾನುಭವಿಗಳಿಗೆ ಪುನಶ್ಚೇತನ ನೀಡುವ ಉದ್ದೇಶದಿಂದ ದಿ ಅಸೋಸಿಯೇಶನ್ ವ್ಹೀಲ್ ಎಂಬ ಸಂಸ್ಥೆಯ ಮೂಲಕ ಆರಂಭಿಸಿದ ಬಸ್ ಸಂಚಾರಕ್ಕೆ ಸೋಮವಾರ ಇಲ್ಲಿನ ಜಿಪಂ ಕಚೇರಿ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿ, ವಿಕಲಚೇತನರಿಗೆ ವ್ಯಾಯಾಮ ಮತ್ತು ಆರೋಗ್ಯ ಸಲಹೆ ಸೇರಿದಂತೆ ಪರಿಶೀಲನೆ ಸಾಧನ ಸಲಕರಣೆಗಳನ್ನು ವಿತರಿಸಿ ಪುನಶ್ಚೇತನ ನೀಡಲಾಗುತ್ತಿದ್ದು, ಜಿಲ್ಲೆಯ ವಿವಿಧ ಹಳ್ಳಿಗಳಲ್ಲಿ ಈ ಬಸ್ ಸಂಚರಿಸಲಿದೆ ಎಂದರು.

    ಆರಂಭಿಕವಾಗಿ ಜಿಲ್ಲೆಯ ಏಳು ಸ್ಥಳಗಳನ್ನು ಇದಕ್ಕಾಗಿ ಆಯ್ಕೆ ಮಾಡಿದ್ದು, ಸೈದಾಪೂರ, ಕೊಂಕಲ, ತುಮಕೂರ, ವನದುರ್ಗ, ಅರಕೇರಾ, ದೇವರಗೋನಾಳ, ಯಾದಗಿರಿ ನಗರ ವ್ಯಾಪ್ತಿಯಲ್ಲಿ ಈ ಬಸ್ ಸಂಚಾರ ಮಾಡಲಿದೆ. ನುರಿತ ಯೋಗಪಟು, ಚಿಕಿತ್ಸಕರು ಹಾಗೂ ಸಾಧನ ಸಲಕರಣಗಳನ್ನು ನೀಡಲಾಗುತ್ತದೆ. ಸಾರ್ವಜನಿಕರು ಇದರ ಸೌಲಭ್ಯ ಪಡೆದುಕೊಳ್ಳುವಂತೆ ಕಿವಿಮಾತು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts