More

    ವಿಐಎಸ್‌ಎಲ್ ಸ್ಥಗಿತ ವಿರೋಧಿಸಿ ಹೋರಾಟ: ತಾಲೂಕು ಒಕ್ಕಲಿಗರ ಸಂಘ ಬೆಂಬಲ

    ಭದ್ರಾವತಿ: ನಗರದ ಪ್ರತಿಷ್ಠಿತ ವಿಶ್ವೇಶ್ವರಾಯ ಉಕ್ಕು ಮತ್ತು ಕಬ್ಬಿನ ಕಾರ್ಖಾನೆ ಸಂಪೂರ್ಣ ಮುಚ್ಚುವ ಆದೇಶವೊಂದು ಸೈಲ್ ಬೋರ್ಡ್ ಮೀಟಿಂಗ್‌ನಿಂದ ದೃಢಪಟ್ಟ ಹಿನ್ನ್ನೆಲೆಯಲ್ಲಿ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರು ಹಾಗೂ ಕಾಯಂ ನೌಕರರು ಕಾರ್ಖಾನೆ ಮುಂಭಾಗ ಮತ್ತೊಮ್ಮೆ ಪ್ರತಿಭಟನೆ ಆರಂಭಿಸಿದ್ದಾರೆ.
    ವಿಐಎಸ್‌ಎಲ್ ಕಾರ್ಖಾನೆ ಮುಚ್ಚಲು ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದಕ್ಕೆ ಅವಕಾಶ ನೀಡಬಾರದು. ಕಾರ್ಖಾನೆಗೆ ಬೇಕಾದ ಅಗತ್ಯ ಬಂಡವಾಳವನ್ನು ಸೈಲ್ ಮೂಲಕ ತೊಡಗಿಸಲು ಮುಂದಾಗಬೇಕು ಎಂದು ಒತ್ತಾಯಿಸಿ ಕಾರ್ಮಿಕರು ಗುರುವಾರದಿಂದ ಆರಂಭಿಸಿರುವ ಪ್ರತಿಭಟನೆಗೆ ತಾಲೂಕು ಒಕ್ಕಲಿಗರ ಸಂಘ ಶುಕ್ರವಾರ ಬೆಂಬಲ ಸೂಚಿಸಿದೆ.
    ಇಲ್ಲಿನ ವಿಐಎಸ್‌ಎಲ್ ಕಾರ್ಖಾನೆ ಶತಮಾನೋತ್ಸವ ಆಚರಿಸಿಕೊಳ್ಳಬೇಕಾದ ಸಂದರ್ಭದಲ್ಲಿ ಶೋಕಾಚರಣೆ ಆಚರಿಸುವಂತಾಗಿದೆ. ಕಾರ್ಖಾನೆ ಸಾವಿರಾರು ಕುಟುಂಬಗಳಿಗೆ ಬದುಕು ಕಟ್ಟಿಕೊಟ್ಟಿದೆ. ಇಂತಹ ಕಾರ್ಖಾನೆಯನ್ನು ಸೈಲ್ ಆಡಳಿತ ಮಂಡಳಿ ಮುಚ್ಚುವ ಪ್ರಕ್ರಿಯೆ ಆರಂಭಿಸಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದ್ದು ಇದನ್ನು ಒಕ್ಕಲಿಗರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ.ರವಿ ಹೇಳಿದರು.
    ಕಾರ್ಖಾನೆ ಉಳಿವಿಗಾಗಿ ಹೋರಾಟ ನಡೆಸಲು ತಾಲೂಕು ಒಕ್ಕಲಿಗರ ಸಂಘ ಸಿದ್ಧವಿದ್ದು ಒಂದು ದಿನದ ಭದ್ರಾವತಿ ಬಂದ್‌ಗೆ ಕರೆ ನೀಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತನಾಡುವಂತೆ ಶ್ರೀ ಆದಿಚುಂಚನಗಿರಿ ಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಒತ್ತಾಯಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ದೇವೇಗೌಡರ ಮಾತುಗಳನ್ನು ಎಂದಿಗೂ ತೆಗೆದು ಹಾಕುವುದಿಲ್ಲ. ಅವರ ಮಾತಿಗೆ ಮನ್ನಣೆ ಸಿಗಲಿದೆ ಎಂದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts