More

    ವಾರಾಂತ್ಯ ಸಂಪೂರ್ಣ ಲಾಕ್​ಡೌನ್

    ಹುಬ್ಬಳ್ಳಿ: ಹೆಚ್ಚುತ್ತಿರುವ ಕರೊನಾ ಸೋಂಕು ನಿಯಂತ್ರಣಕ್ಕಾಗಿ ಇದೇ ಶನಿವಾರ ಮತ್ತು ಭಾನುವಾರದಂದು ಧಾರವಾಡ ಜಿಲ್ಲಾದ್ಯಂತ ಸಂಪೂರ್ಣ ಲಾಕ್​ಡೌನ್ ಜಾರಿಗೊಳಿಸಲಾಗಿದೆ.

    ಈ ಕುರಿತು ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಮೇ 22ರ ಬೆಳಗ್ಗೆ 6 ಗಂಟೆಯಿಂದ 24ರ ಬೆಳಗ್ಗೆ 6 ಗಂಟೆಯವರೆಗೆ ಸಂಪೂರ್ಣ ಜಿಲ್ಲೆ ಲಾಕ್​ಡೌನ್ ಮಾಡಿದ್ದಾಗಿ ಘೋಷಿಸಿದ್ದಾರೆ.

    ಶನಿವಾರ ಮತ್ತು ಭಾನುವಾರದಂದು ಬೆಳಗ್ಗೆ 6 ರಿಂದ 8 ಗಂಟೆಯವರೆಗೆ ಹಣ್ಣು, ತರಕಾರಿ, ಹಾಲು ಮಾರಾಟ ಕೇಂದ್ರಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ, ದಿನಸಿ ಅಂಗಡಿಗಳಿಗೆ ಈ ಎರಡೂ ದಿನ ಅವಕಾಶ ನೀಡಿಲ್ಲ.

    ಕೋವಿಡ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

    ಏನಿರುತ್ತೆ?

    ಹಣ್ಣು, ತರಕಾರಿ, ಹಾಲು ಮಾರಾಟ ಕೇಂದ್ರಗಳು (ಬೆಳಗ್ಗೆ 6 ರಿಂದ 8ರವರೆಗೆ ಮಾತ್ರ)

    ತುರ್ತು ವೈದ್ಯಕೀಯ ಸೌಲಭ್ಯ

    ಔಷಧ ಅಂಗಡಿಗಳು

    ಸರ್ಕಾರಿ ವಾಹನ ಮತ್ತು ಕೋವಿಡ್ ಕಾರ್ಯಾಚರಣೆಯಲ್ಲಿ ಕರ್ತವ್ಯನಿರತ ಸಿಬ್ಬಂದಿ ಮತ್ತು ವಾಹನಗಳ ಸಂಚಾರ

    ಅಂತ್ಯಸಂಸ್ಕಾರಕ್ಕೆ 5 ಜನರಿಗೆ ಮಾತ್ರ ಅವಕಾಶ.

    ಏನು ಇರುವುದಿಲ್ಲ?

    ದಿನಸಿ ಅಂಗಡಿ

    ಖಾಸಗಿ ವಾಹನಗಳ ಸಂಚಾರ

    ಆಟೋ ಸಂಚಾರ

    ಅಗತ್ಯ ಕ್ರಮ ಮುಂದುವರಿಸುವುದು ಅನಿವಾರ್ಯ

    ಹುಬ್ಬಳ್ಳಿ: ಕರೊನಾ ಸೋಂಕಿನ ಸರಪಳಿ ತುಂಡರಿಸುವುದಕ್ಕಾಗಿ ಲಾಕ್​ಡೌನ್ ಮುಂದುವರಿಸುವ ಅಗತ್ಯ ಇದೆ ಎನ್ನುವುದಾಗಿ ವರ್ತಕರು, ಎಪಿಎಂಸಿ ಪ್ರತಿನಿಧಿಗಳು, ಉದ್ದಿಮೆದಾರರು, ವಿವಿಧ ವಾಣಿಜ್ಯ ಸಂಘಟನೆಗಳ ಪದಾಧಿಕಾರಿಗಳು ತಿಳಿಸಿದರು.

    ಹೆಚ್ಚುತ್ತಿರುವ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅಧ್ಯಕ್ಷತೆಯಲ್ಲಿ ಗುರುವಾರ ನಗರದಲ್ಲಿ ಸಭೆ ಜರುಗಿತು.

    ಈ ವೇಳೆ ಮಾತನಾಡಿದ ಶೆಟ್ಟರ್ ಅವರು, ಕಳೆದ ಬಾರಿಯ ಕೋವಿಡ್ ಸಂದರ್ಭದಲ್ಲಿ ಜನರಲ್ಲಿ ಆತಂಕ ಇತ್ತು. ಆದರೆ 2ನೇ ಅಲೆಯಲ್ಲಿ ಜನರಲ್ಲಿ ಸೋಂಕಿನ ಬಗ್ಗೆ ಭಯ ಇಲ್ಲ. ಜನರು ಕೋವಿಡ್ ನಿಯಮಗಳನ್ನು ಪಾಲಿಸದ ಕಾರಣ ಸೋಂಕು ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

    ಕರೊನಾ ಸೋಂಕು ನಿಯಂತ್ರಿಸುವುದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಶೀಘ್ರ ಹಿರಿಯ ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

    ಕ್ರೆಡೈ ಕರ್ನಾಟಕ ಚಾಪ್ಟರ್ ನಿಯೋಜಿತ ಅಧ್ಯಕ್ಷ ಪ್ರದೀಪ ರಾಯ್ಕರ ಮಾತನಾಡಿ, ಕಠಿಣ ಲಾಕ್​ಡೌನ್ ಅನುಷ್ಠಾನಗೊಳಿಸಲು ಪೊಲೀಸರಿಗೆ ಮುಕ್ತ ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು.

    ಶಾಸಕರಾದ ಅರವಿಂದ ಬೆಲ್ಲದ, ಶಂಕರ ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಪೊಲೀಸ್ ಆಯುಕ್ತ ಲಾಭೂರಾಮ್ ತಹಸೀಲ್ದಾರ್ ಶಶಿಧರ ಮಾಡ್ಯಾಳ, ಅಮರಗೋಳ ಎಪಿಎಂಸಿ ಅಧ್ಯಕ್ಷ ಸಹದೇವಪ್ಪ ಸುಡಕೇನವರ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಮಹೇಂದ್ರ ಲದ್ದಡ ಹಾಗೂ ಇತರರಿದ್ದರು.

    ರ್ಚಚಿಸಿ ನಾಳೆ ತೀರ್ವನ…

    ಧಾರವಾಡ ಜಿಲ್ಲೆಯಲ್ಲಿ ಸೋಮವಾರದಿಂದ ಯಾವ ರೀತಿಯ ಲಾಕ್​ಡೌನ್ ಮುಂದುವರಿಸಬೇಕೆಂಬ ಕುರಿತು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ರ್ಚಚಿಸಿ ತೀರ್ವನಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಕಠಿಣ ಲಾಕ್​ಡೌನ್ ಜಾರಿ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಬ್ಲಾಕ್ ಫಂಗಸ್ ನಿರ್ವಹಣೆ ಬಗ್ಗೆ ರ್ಚಚಿಸಲಾಗಿದೆ. ಈ ರೋಗ ಮೊದಲು ಸಣ್ಣ ಪ್ರಮಾಣದಲ್ಲಿ ಇತ್ತು. ಇದೀಗ ರೋಗ ಹೆಚ್ಚುತ್ತಿರುವುದರಿಂದ ಔಷಧಗಳ ಕೊರತೆಯಾಗಿದೆ. ಔಷಧ ತಯಾರಿಕೆ ಕಂಪನಿಗಳು ಇಷ್ಟು ಪ್ರಮಾಣದಲ್ಲಿ ರೋಗ ಕಂಡು ಬರುವುದು ಎಂದು ಊಹಿಸಿರಲಿಲ್ಲ. ಅಗತ್ಯ ಔಷಧಗಳನ್ನು ತ್ವರಿತವಾಗಿ ಉತ್ಪಾದಿಸಲು, ವಿದೇಶಗಳಿಂದ ಆಮದು ಮಾಡಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಹಂತ ಹಂತವಾಗಿ ಔಷಧ ಒದಗಿಸಲಾಗುವುದು ಎಂದು ತಿಳಿಸಿದರು.

    955 ಪ್ರಕರಣ ಪತ್ತೆ

    ಧಾರವಾಡ: ಜಿಲ್ಲೆಯಲ್ಲಿ ಗುರುವಾರ 955 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಚೇತರಿಸಿಕೊಂಡ 954 ಜನ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 6468 ಸಕ್ರಿಯ ಪ್ರಕರಣಗಳಿವೆ. 560 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ 10 ಜನ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

    ಹೆಬ್ಬಳ್ಳಿ 3 ದಿನ ಕ್ಲೋಸ್

    ಧಾರವಾಡ: ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಮೇ 22ರಿಂದ 24ರವರೆಗೆ ಸಂಪೂರ್ಣ ಸ್ವಯಂ ಲಾಕ್​ಡೌನ್ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶ ಮತ್ತು ಹೆಬ್ಬಳ್ಳಿ ಗ್ರಾಮದ ಕಾರ್ಯಪಡೆಯ ಸಭೆಯಲ್ಲಿ ರ್ಚಚಿಸಿ ಗುರುವಾರ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಗ್ರಾಮದಲ್ಲಿ ಡಂಗುರ ಸಾರಲಾಗಿದೆ.

    ಹಳ್ಳಿಗರ ತಪ್ಪಿನಿಂದ ಸೋಂಕು ಹೆಚ್ಚಳ

    ಧಾರವಾಡ: ವಲಸೆ ಕಾರ್ವಿುಕರು ಹಾಗೂ ಹಳ್ಳಿಗರ ತಪ್ಪಿನಿಂದ ಕೋವಿಡ್ ಸೋಂಕು ಹರಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

    ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಲಸೆ ಬಂದವರು ಕರೊನಾ ಪೀಡಿತರಾಗಿಯೇ ಗ್ರಾಮೀಣ ಪ್ರದೇಶಗಳಿಗೆ ಬಂದು ಸೇರಿದ್ದಾರೆ. ಮಹಾರಾಷ್ಟ್ರ, ಬೆಂಗಳೂರು, ಗೋವಾ, ಮಂಗಳೂರು, ಇತರ ನಗರಗಳಿಂದ ಬಂದವರಿಂದ ಹಳ್ಳಿಗಳಿಗೆ ಕರೊನಾ ಹಬ್ಬಿದೆ. ಸಾಮರ್ಥ್ಯ ಮೀರಿ ಟೆಸ್ಟಿಂಗ್ ಮಾಡಿಸಲಾಗುತ್ತಿದೆ. ಆದರೂ ತಹಬದಿಗೆ ಬರುತ್ತಿಲ್ಲ. ಸಾಕಷ್ಟು ಜಾಗೃತಿ ಪ್ರಯತ್ನ ಮಾಡಿದರೂ ಮದುವೆಗಳನ್ನು ಮಾಡಿದ್ದಾರೆ. ಮದುವೆಗಳಲ್ಲಿ ಭಾಗಿಯಾದ ಅನೇಕರಲ್ಲಿ ಸೋಂಕು ಕಾಣಿಸಿದೆ. ಅಂತಿಮ ಸಂಸ್ಕಾರಕ್ಕೂ ಸಾವಿರಾರು ಜನ ಸೇರಿದ್ದಾರೆ. ಜಾತ್ರೆ ಮಾಡಬೇಡಿ ಎಂದರೂ ಗುಂಪು ಸೇರಿ ತೇರು, ಪಲ್ಲಕ್ಕಿ ಎಳೆದಿದ್ದಾರೆ. ಇದರಿಂದ ಕರೊನಾ ಪ್ರಮಾಣ ಹೆಚ್ಚಾಗಿದೆ ಎಂದು ತಿಳಿಸಿದರು.

    ರಾಜ್ಯಕ್ಕೆ ಬಿಗಿಯಾದ ಕಠಿಣ ಕ್ರಮ ಅಗತ್ಯ: ರಾಜ್ಯದಲ್ಲಿ ಕೋವಿಡ್​ನಿಂದ ನಿತ್ಯ ಸಾಕಷ್ಟು ಸಾವು- ನೋವು ಸಂಭವಿಸುತ್ತಿವೆ. ಕರೊನಾ ಹಳ್ಳಿ ಹಳ್ಳಿಗೂ ಸಾಕಷ್ಟು ಹಬ್ಬಿದೆ. ಇದನ್ನೆಲ್ಲ ನೋಡಿದಾಗ ಬಿಗಿಯಾದ ಲಾಕ್​ಡೌನ್ ಅವಶ್ಯಕತೆ ಇದೆ

    ನಾವು ಆರ್ಥಿಕ ಸಂಕಷ್ಟದಲ್ಲಿ ಇದ್ದೇವೆ. ಅದರಲ್ಲಿ ಮುಚ್ಚು ಮರೆ ಮಾಡಿಕೊಳ್ಳುವ ಪ್ರಶ್ನೆ ಇಲ್ಲ. ಆದಾಗ್ಯೂ ಕರೊನಾ ನಿಯಂತ್ರಣದಲ್ಲಿ ಸರ್ಕಾರ ಎಲ್ಲಿಯೂ ವಿಫಲವಾಗಿಲ್ಲ. ಅಧಿಕಾರಕ್ಕೆ ಬಂದಾಗಿನಿಂದ ಸಂಕಷ್ಟಗಳ ಸರಮಾಲೆ ಎದುರಾಗಿದೆ. ಮೊದಲಿಗೆ ಪ್ರವಾಹ ಬಂತು, ಬಳಿಕ ಕರೊನಾ ಬಂತು. ಮತ್ತೆ ಪ್ರವಾಹ; ಕರೊನಾ 2ನೇ ಅಲೆ ಬಂತು. 2 ವರ್ಷಗಳ ಅವಧಿಯಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ಸುಮಾರು 60,000 ಕೋಟಿ ರೂಪಾಯಿ ಹಾನಿಯಾಗಿದೆ. ಸರ್ಕಾರಕ್ಕೆ ಬರಬೇಕಾದ ನಿಗದಿತ ಆದಾಯವೂ ಬರುತ್ತಿಲ್ಲ. ಹೀಗಾಗಿ ನಾವು ಆರ್ಥಿಕ ಸಂಕಷ್ಟದಲ್ಲಿ ಇದ್ದೇವೆ. ಅದರ ಮಧ್ಯೆಯೂ ನಿಭಾಯಿಸಿಕೊಂಡು

    ಹೊರಟಿದ್ದೇವೆ ಎಂದರು.

    ಗ್ರಾಮೀಣ ಭಾಗದಲ್ಲಿ ಕರೊನಾ ಪರೀಕ್ಷೆ, ಲಸಿಕೆ ಹೆಚ್ಚಿಸಿ

    ಧಾರವಾಡ: ಗ್ರಾಮೀಣ ಭಾಗದ ಸೋಂಕಿತರು ಕೋವಿಡ್ ಪರೀಕ್ಷೆಗೆ ಒಳಗಾಗಲು ಹಿಂಜರಿಯುತ್ತಿದ್ದಾರೆ. ಈ ಕುರಿತು ಅಧಿಕಾರಿಗಳು ಸೂಕ್ತ ಯೋಜನೆ ರೂಪಿಸಿ ತಪಾಸಣೆಗೆ ಒಳಪಡಿಸಬೇಕು. ಜೊತೆಗೆ ಲಸಿಕೆ ಹಾಕಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು ಎಂದು ಶಾಸಕ ಅಮೃತ ದೇಸಾಯಿ ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ರ್ಸಟ್ ಹೌಸ್​ನಲ್ಲಿ ಗುರುವಾರ ಜರುಗಿದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

    ತಾಲೂಕಿನಲ್ಲಿ ನಿರೀಕ್ಷೆಗೂ ಮೀರಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಪಿಡಿಒ ಹಾಗೂ ನೋಡಲ್ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಗ್ರಾಮೀಣ ಭಾಗದಲ್ಲಿ ಕೋವಿಡ್ ತಡೆಗೆ ಶ್ರಮಿಸಬೇಕು. ಕರೊನಾ ಪೀಡಿತರಿಗಾಗಿ ಕ್ಷೇತ್ರದಲ್ಲಿ ಕೋವಿಡ್ ಕೇರ್ ಸೆಂಟರ್ ಸಿದ್ಧಪಡಿಸಲಾಗಿದ್ದು, ಹೋಂ ಐಸೋಲೇಷನ್ ಹಾಗೂ ಆಸ್ಪತ್ರೆಗಳಲ್ಲೂ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಗ್ರಾಮಿಣ ಭಾಗದ ಜನರು ಚಿಕಿತ್ಸೆಗೆ ಒಳಗಾಗಲು ಹಿಂಜರಿಯುತ್ತಿದ್ದಾರೆ. ಅವರ ಮನವೊಲಿಸಿ ಕೋವಿಡ್ ಕೇರ್ ಸೆಂಟರ್​ಗೆ ದಾಖಲಿಸಬೇಕು ಎಂದರು.

    ರಾಜ್ಯ ಸರ್ಕಾರವು ಕೃಷಿಕರು, ಹಣ್ಣು ಬೆಳೆಗಾರರು ಹಾಗೂ ಟ್ಯಾಕ್ಸಿ ಚಾಲಕರು ಸೇರಿ ಬಡವರಿಗೆ ಘೋಷಿಸಿರುವ ವಿಶೇಷ ಪ್ಯಾಕೇಜ್ ಪ್ರತಿಯೊಬ್ಬ ಫಲಾನುಭವಿಗೂ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶಾಸಕ ಅಮೃತ ದೇಸಾಯಿ ಸೂಚಿಸಿದರು.

    ತಹಸೀಲ್ದಾರ್ ಸಂತೋಷ ಬಿರಾದಾರ, ಡಿವೈಎಸ್​ಪಿ ಎಂ.ಬಿ. ಸಂಕದ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಪಿಡಿಒಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts