More

    ವಲಸೆ ಕಾರ್ವಿುಕರು, ವಿದ್ಯಾರ್ಥಿಗಳಿಗೆ ಆಶ್ರಯ

    ಹುಬ್ಬಳ್ಳಿ: ಹೊರ ರಾಜ್ಯಗಳಿಗೆ ದುಡಿಯಲು ವಲಸೆ ಹೋದವರು ಹಾಗೂ ವ್ಯಾಸಂಗಕ್ಕಾಗಿ ಹೋದವರು ಮರಳಿ ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ. ಧಾರವಾಡ ಜಿಲ್ಲೆ ಪ್ರವೇಶಿಸಿರುವ ಇಂತಹ ಜನರಿಗೆ ಅವರು ಇರುವ ಸ್ಥಳದಲ್ಲಿಯೇ ಊಟ, ಉಪಾಹಾರ ಹಾಗೂ ವಾಸ್ತವ್ಯದ ಏರ್ಪಾಟು ಮಾಡಲು ಜಿಲ್ಲೆಯಲ್ಲಿ 9 ಕಡೆ ಹಾಸ್ಟೆಲ್​ಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.

    ಈ ಕುರಿತು ಪ್ರಕಟಣೆ ನೀಡಿರುವ ಅವರು, ಕರೊನಾ ಸೋಂಕು ಹರಡುವುದನ್ನು ತಡೆಯಲು ಘೋಷಿಸಿರುವ ಲಾಕ್ ಡೌನ್​ನಿಂದ ವಲಸೆ ಕಾರ್ವಿುಕರು ಹಾಗೂ ವಿದ್ಯಾರ್ಥಿಗಳಿಗೆ ಎದುರಾಗುವ ಸಮಸ್ಯೆ ಮನಗಂಡು ಪರಿಹಾರಕ್ಕೆ ಜಿಲ್ಲಾ ಹಂತದ ಸಮಿತಿ ರಚಿಸಲಾಗಿದೆ. ಊಟ, ಉಪಾಹಾರ ಹಾಗೂ ವಸತಿ ವ್ಯವಸ್ಥೆಗಳಿಗಾಗಿ ಸಮಿತಿ ಜಿಲ್ಲೆಯ 9 ಹಾಸ್ಟೆಲ್ ಗುರುತಿಸಿದೆ. ಪ್ರತಿ ಹಾಸ್ಟೆಲ್​ಗೆ ಇಬ್ಬರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

    ಧಾರವಾಡದ ಸಪ್ತಾಪುರ ಹಾಗೂ ದೊಡ್ಡನಾಯಕನಕೊಪ್ಪದಲ್ಲಿರುವ ಮೆಟ್ರಿಕ್ ನಂತರದ ವಸತಿ ನಿಲಯಗಳು, ಅಳ್ನಾವರದ ಕಸ್ತೂರಬಾ ಗಾಂಧಿ ವಸತಿ ಶಾಲೆ, ಹುಬ್ಬಳ್ಳಿಯ ಶಿರಡಿನಗರ ಹಾಗೂ ತಾರಿಹಾಳದಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಗಳು, ಕಲಘಟಗಿ ಮಿಶ್ರಿಕೋಟಿಯಲ್ಲಿರುವ ಮೆಟ್ರಿಕ್ ನಂತರದ ವಸತಿ ನಿಲಯ, ಕುಂದಗೋಳದ ಎಸ್.ಟಿ. ಬಾಲಕಿಯರ ವಸತಿ ನಿಲಯ, ನವಲಗುಂದ ಪಟ್ಟಣ ಹಾಗೂ ಜಾವೂರು ಗ್ರಾಮದಲ್ಲಿರುವ ಮೆಟ್ರಿಕ್ ಪೂರ್ವ ಹಾಸ್ಟೆಲ್​ಗಳಲ್ಲಿ ವಲಸಿಗರ ವಾಸ್ತವ್ಯಕ್ಕೆ ಅನುಕೂಲ ಕಲ್ಪಿಸಿಕೊಡಲಾಗಿದೆ. ನಿಯೋಜಿಸಿದ ಅಧಿಕಾರಿಗಳು ಕಾರ್ವಿುಕರನ್ನು ಗುರುತಿಸಿ, ಅವಶ್ಯಕ ಸೌಲಭ್ಯಗಳನ್ನು ಒದಗಿಸಲಿದ್ದಾರೆ. ಸರ್ಕಾರ ಕೂಲಿಕಾರ್ವಿುಕರಿಗಾಗಿ ಪ್ರತ್ಯೇಕ ಆಹಾರ ಸಹಾಯವಾಣಿ ಕೂಡ ಸ್ಥಾಪಿಸಿದೆ. 155214 ಸಹಾಯವಾಣಿ ಮೂಲಕ ಅವರು ತಮ್ಮ ಸ್ಥಳದ ಮಾಹಿತಿ ನೀಡಬಹುದು. ಧಾರವಾಡ ಜಿಲ್ಲೆಯಲ್ಲಿ; 0836- 448250 ದೂರವಾಣಿ ಸಂಖ್ಯೆ ಪ್ರತ್ಯೇಕವಾಗಿ ಮೀಸಲಿಡಲಾಗಿದೆ. ಜಿಲ್ಲೆಯಲ್ಲಿ ಕೂಲಿ ಕಾರ್ವಿುಕರು, ಹೊರ ರಾಜ್ಯಗಳ ಅಥವಾ ಸ್ಥಳೀಯ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದರೆ ಈ ಸಹಾಯವಾಣಿ ಮೂಲಕ ಸಂರ್ಪಸಿದರೆ, ಸರ್ಕಾರ ಅವರ ನೆರವಿಗೆ ಧಾವಿಸುತ್ತದೆ ಎಂದು ತಿಳಿಸಿದ್ದಾರೆ.

    ಸಾವಧಾನದಿಂದ ವರ್ತಿಸಿ: ಸಾರ್ವಜನಿಕರು ಈ ಲಾಕ್ ಡೌನ್ ಅವಧಿಯಲ್ಲಿ ವ್ಯವಧಾನದಿಂದ ವರ್ತಿಸಬೇಕು. ಈಗಾಗಲೇ ಅವಳಿ ನಗರದ ಎಲ್ಲ ವಾರ್ಡ್​ಗಳಲ್ಲಿ ಆಟೋ, ತಳ್ಳು ಗಾಡಿಗಳಲ್ಲಿ ಸಂಚರಿಸಿ ತರಕಾರಿ ಪೂರೈಸುವ ವ್ಯಾಪಾರಸ್ಥರನ್ನು ಗುರುತಿಸಿ ಪಟ್ಟಿ ಮಾಡಲಾಗಿದೆ. ಅವರು ಈಗಾಗಲೇ ಬಡಾವಣೆಗಳಿಗೆ ತೆರಳಿ ಗ್ರಾಹಕರಿಗೆ ಅಗತ್ಯ ವಸ್ತು ಒದಗಿಸುತ್ತಿದ್ದಾರೆ. ನಾಗರಿಕರು ಈ ಸಂದರ್ಭದ ಗಂಭೀರತೆ ಅರಿತುಕೊಂಡು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಸಚಿವ ಶೆಟ್ಟರ್ ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts