More

    ವಲಸೆ ಕಾರ್ವಿುಕರಿಗೆ ತಾತ್ಕಾಲಿಕ ನೆಲೆ

    ವಿಜಯವಾಣಿ ಸುದ್ದಿಜಾಲ ಹಳಿಯಾಳ: ಲಾಕ್​ಡೌನ್​ನಿಂದ ತಾಲೂಕಿನಲ್ಲಿಯೇ ಉಳಿದಿರುವ ವಲಸೆ ಕಾರ್ವಿುಕರಿಗೆ ತಾತ್ಕಾಲಿಕ ನೆಲೆ ಕಲ್ಪಿಸುವುದನ್ನು ತಾಲೂಕು ಆಡಳಿತ ಸವಾಲಾಗಿ ಸ್ವೀಕರಿಸಿದೆ.

    ಸದ್ಯ ತಾಲೂಕಿನಲ್ಲಿ ಬೇರೆ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ವಲಸೆ ಬಂದು ಮರಳದಿರುವ 294 ಕಾರ್ವಿುಕರಿದ್ದಾರೆ. ಅವರಲ್ಲಿ ಒಳಚರಂಡಿ ಯೋಜನೆ ಕಾಮಗಾರಿ, ವಿದ್ಯುತ್ ಲೈನ್ ಬದಲಾವಣೆ ಕಾರ್ಯ, ಸರ್ಕಾರಿ ಕಟ್ಟಡಗಳ ನಿರ್ವಣ, ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗಾಗಿ ಬಂದು ನೆಲೆಸಿರುವ ಕಾರ್ವಿುಕರಿಗೆ ಗುತ್ತಿಗೆದಾರರಿಂದ ಆಹಾರ ಮತ್ತು ವಸತಿ ವ್ಯವಸ್ಥೆಯನ್ನು ತಾಲೂಕಾಡಳಿತ ಕಲ್ಪಿಸಿದೆ. ಇನ್ನು, ಕಬ್ಬು ಕಟಾವು ಮಾಡಲು ಬಂದು ಮರಳಿ ಹೋಗದೆ ತೇರಗಾಂವ ಬಳಿ ಗದ್ದೆಯಲ್ಲಿ ನೆಲೆಸಿರುವ ಮಹಾರಾಷ್ಟ್ರ ಮತ್ತು ಮದ್ಯಪ್ರದೇಶದ 18 ಕಾರ್ವಿುಕರಿಗೆ, ಅಲ್ಲೋಳ್ಳಿ ಬಳಿ ಇಟ್ಟಂಗಿ ನಿರ್ವಿುಸಲು ಬಂದ 3 ಹಾಗೂ ರಟ್ಟಿನ ಕೈಗಾರಿಕೆಯಲ್ಲಿ ಉಳಿದಿರುವ ಹೊರ ರಾಜ್ಯದ 25 ಕಾರ್ವಿುಕರಿಗೆ ರೇಷನ್ ವ್ಯವಸ್ಥೆಯನ್ನು ತಾಲೂಕಾಡಳಿತ ಮಾಡುತ್ತಿದೆ.

    ತವರಿನ ಕಾರ್ವಿುಕರು: ಹಳಿಯಾಳ ತಾಲೂಕಿನಿಂದ ಉದ್ಯೋಗವನ್ನರಿಸಿ ನೆರೆಯ ಮಹಾರಾಷ್ಟ್ರ ಗೋವಾ ರಾಜ್ಯಕ್ಕೆ ಹೋದವರ ಸಂಖ್ಯೆಯು ಅಪರಿಮಿತವಾಗಿದೆ. ಲಾಕ್​ಡೌನದಿಂದ ತಾಲೂಕಿಗೆ ಮರಳಿರುವ ಬಹುತೇಕ ಕಾರ್ವಿುಕರ ಹೆಸರು ಪಡಿತರ ಚೀಟಿಯಲ್ಲಿ ಇಲ್ಲವೆಂದು ತಿಳಿದುಬಂದಿದೆ. ಇದರಿಂದ ಬಿಪಿಎಲ್ ಪಡಿತರಿಗೆ ಪೂರೈಸಿರುವ ರೇಷನ್ ಸಾಕಾಗುತ್ತಿಲ್ಲವೆಂದು ಹೇಳಲಾಗುತ್ತಿದೆ.

    ಇನ್ನು, ಮನೆ ನಿರ್ವಣದ ಕಾರ್ಯ ಮಾಡುವ ತಾಲೂಕಿನ ಸಾಕಷ್ಟು ಕಾರ್ವಿುಕರು ಕಾರ್ವಿುಕ ಚೀಟಿಯನ್ನು ಮಾಡದೇ ಇರುವುದರಿಂದ ಸರ್ಕಾರದಿಂದ ದೊರೆಯುವ ನೆರವಿನಿಂದ ವಂಚಿತರಾಗುವ ಭಯದಲ್ಲಿದ್ದಾರೆ. ಪಟ್ಟಣದಲ್ಲಿನ ಸಿದ್ಧರಾಮೇಶ್ವರ ಗಲ್ಲಿ ಹಾಗೂ ಇತರೆ

    ವಾರ್ಡ್​ಗಳಲ್ಲಿದ್ದ 400ಕ್ಕೂ ಹೆಚ್ಚು ಕಾರ್ವಿುಕರು ಸಹಾಯ ಕೋರಿ ಜಿಲ್ಲಾಡಳಿತಕ್ಕೆ ಮನವಿಯನ್ನು ಸಲ್ಲಿಸಿ ನೆರವಿನ ನಿರೀಕ್ಷೆಯಲ್ಲಿದ್ದಾರೆ.

    ದಾಂಡೇಲಿಯಲ್ಲಿನ ಕಾಗದ ಕಾರ್ಖಾನೆ, ಮಿಶಾಳೆ ಕಾರ್ಖಾನೆ ಕಾರ್ವಿುಕರು, ಮಹಾರಾಷ್ಟ್ರ, ಗೋವಾದಿಂದ ಹಳಿಯಾಳ ತಾಲೂಕಿಗೆ ಮರಳಿರುವ ಕಟ್ಟಡ ಕಾರ್ವಿುಕರ ಸಂಖ್ಯೆಯು 20 ಸಾವಿರಕ್ಕೂ ಅಧಿಕವಾಗಿದೆ. ಅವರಿಗೆಲ್ಲರಿಗೂ ರಾಜ್ಯ ಸರ್ಕಾರ ನೀಡಲು ಮುಂದಾಗಿರುವ ಸೌಲಭ್ಯಗಳು ದೊರೆಯಬೇಕು. ಈ ನಿಟ್ಟಿಲ್ಲಿ ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಕಾರ್ಯಪ್ರವೃತ್ತವಾಗಬೇಕು. | ಸುನೀಲ ಹೆಗಡೆ ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts