More

    ವರ್ತೂರ್​ ಪ್ರಕಾಶ್​, ಮಂಜುನಾಥಗೌಡ ಬಿಜೆಪಿ ಸೇರ್ಪಡೆ : ಹಲವು ಮುಖಂಡರ ವಿರೋಧ, ಬಿಜೆಪಿ ಬಲವರ್ಧನೆಗೆ ಪಣ

    ಕೋಲಾರ: ಕೋಲಾರದ ಒಂದಿಬ್ಬರು ವರ್ತೂರ್​ ಪ್ರಕಾಶ್​ ಸೇರ್ಪಡೆಗೆ ಅೇಪಣೆ ವ್ಯಕ್ತಪಡಿಸಿದ್ದರಾದರೂ ಕೋಲಾರ ಜಿಲ್ಲೆಗೆ ಶಕ್ತಿ ತುಂಬಲು ಬಿಜೆಪಿ ವರಿಷ್ಠರು ವರ್ತೂರ್​ ಪ್ರಕಾಶ್​ ಕಮಲ ಧರಿಸಲು ಅವಕಾಶ ಕಲ್ಪಿಸಿದ್ದಾರೆ.
    ಅದೇ ರೀತಿ ಮಾಲೂರಿನ ಹಲವು ಬಿಜೆಪಿ ಮುಖಂಡರು, ಕಾರ್ಯಕರ್ತರು ಮಾಜಿ ಶಾಸಕ ಕೆ.ಎಸ್​.ಮಂಜುನಾಥಗೌಡ ಬಿಜೆಪಿ ಸೇರುವುದಕ್ಕೆ ತೀವ್ರ ವಿರೋಧ ವ್ತಕ್ಯಪಡಿಸಿ ಪ್ರತಿಭಟನೆ ನಡೆಸಿದ್ದರಾದರೂ 2023ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಗಟ್ಟಿ ವೇದಿಕೆ ಮಾಡಿಕೊಳ್ಳಲು ಮಂಜುನಾಥಗೌಡ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಅತೃಪ್ತರ ಆಸೆಗೆ ತಣ್ಣಿರು ಎರಚಿದ್ದಾರೆ.
    ರಾಜ್ಯದ ಅಹಿಂದ ವರ್ಗದ ನಾಯಕರಲ್ಲಿ ಒಬ್ಬರಾದ ವರ್ತೂರ್​ ಪ್ರಕಾಶ್​ ಬಿಜೆಪಿ ಸೇರುವುದರಿಂದ ಕೋಲಾರ ಸೇರಿ ಇತರ ಜಿಲ್ಲೆಗಳಲ್ಲಿ ಪಕ್ಷಕ್ಕೆ ಲಾಭವಾಗಬಹುದೆಂಬುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿದೆ. 2008 ಮತ್ತು 2013ರಲ್ಲಿ ಕೋಲಾರ ೇತ್ರದಿಂದ ಪೇತರರಾಗಿ ಸ್ಪರ್ಧಿಸಿ ಜಯ ಸಾಧಿಸಿದ ವರ್ತೂರ್​ ಪ್ರಕಾಶ್​ ಬಿಜೆಪಿ ಸರ್ಕಾರದಲ್ಲಿ ಜಲ ಮಂಡಳಿ ಅಧ್ಯಕ್ಷರಾಗಿ ಹಾಗೂ ಸಚಿವರಾಗುವ ಅವಕಾಶ ಗಿಟ್ಟಿಸಿಕೊಂಡಿದ್ದರು.
    ಯಡಿಯೂರಪ್ಪ, ಸದಾನಂದಗೌಡ, ಜಗದೀಶ ಶೆಟ್ಟರ್​ ಸಿಎಂ ಆಗಿದ್ದಾಗ 300 ಕೋಟಿ ರೂ.ಗಿಂತ ಹೆಚ್ಚು ಅನುದಾನ ತಂದಿದ್ದರು. ಆದರೆ 2018ರ ಚುನಾವಣೆಯಲ್ಲಿ ಸ್ವಯಂ ತಪ್ಪುಗಳಿಂದಾಗಿ ಸೋಲು ಕಾಣಬೇಕಾಯಿತು. ವರ್ತೂರ್​ ಮೂಲತ ಕಾಂಗ್ರೆಸ್ಸಿಗರಾಗಿದ್ದು ಈ ಪಕ್ಷಕ್ಕೆ ಸೇರಲು ಅನೇಕ ಬಾರಿ ಪ್ರಯತ್ನಿಸಿದ್ದರು. ಆದರೆ ಇವರ ಸೇರ್ಪಡೆಗೆ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಕೇಂದ್ರ ಸಚಿವ ಕೆ.ಎಚ್​.ಮುನಿಯಪ್ಪ ಹಾಗೂ ಜಿಲ್ಲೆಯ ಅನೇಕ ಕಾಂಗ್ರೆಸ್​ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಸಚಿವ ಮುನಿರತ್ನ ಅವರ ಸಹಾಯದಿಂದ ಬಿಜೆಪಿ ಸೇರುವಲ್ಲಿ ಯಶಸ್ವಿಯಾಗಿದ್ದಾರೆ.
    ವರ್ತೂರ್​ ಬಿಜೆಪಿ ಸೇರ್ಪಡೆಗೆ ಕೊನೆ ಕ್ಷಣದವರೆಗೂ ವಿರೋಧಿಸಿದ್ದ ಕೂಡಾ ಅಧ್ಯಕ್ಷ ಓಂಶಕ್ತಿ ಚಲಪತಿ ಹಾಗೂ ಆರ್​ಎಸ್​ಎಸ್​ನ ಕೆಲವರು ಪಕ್ಷಕ್ಕೆ ಲಾಭವಾಗುವ ಉದ್ದೇಶದಿಂದ ಬೇಷರತ್​ ಮೇಲೆ ವರ್ತೂರ್​ ಸೇರ್ಪಡೆ ಮಾಡಿಕೊಂಡಿರುವುದರಿಂದ ಮೌನಕ್ಕೆ ಶರಣಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts