More

    ವರ್ಗಾವಣೆ ಶಿಫಾರಸಿಗೆ ರ್ನಿಣಯ

    ಬೆಳಗಾವಿ: ಪಾಲಿಕೆಯ ಹಳೇ ಕಟ್ಟಡವನ್ನು ಡಾ.ಬಿ.ಆರ್​.ಅಂಬೆಡ್ಕರ್​ ಅವರ ಹೆಸರಲ್ಲಿ ವಸ್ತು ಸಂಗ್ರಹಾಲಯವಾಗಿ ಅಭಿವೃದ್ಧಿ ಪಡಿಸುವುದಕ್ಕೆ ಕ್ರಿಯಾಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸುವುದು, 10&12 ವರ್ಷಗಳಿಂದ ಪಾಲಿಕೆಯಲ್ಲೆ ಠಿಕಾಣಿ ಹೂಡಿರುವ ಅಧಿಕಾರಿಗಳು, ಸಿಬ್ಬಂದಿ ವರ್ಗಾವಣೆಗೆ ವರದಿ ಸಲ್ಲಿಸುವಂತೆ ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಮೇಯರ್​ ಶೋಭಾ ಸೋಮನಾಚೆ ಅಧ್ಯತೆಯಲ್ಲಿ ಶುಕ್ರವಾರ ಜರುಗಿದ ಪ್ರಥಮ ಸಾಮಾನ್ಯ ಸಭೆಯಲ್ಲಿ ರ್ನಿಣಯಿಸಲಾಯಿತು.

    ಆಡಳಿತ ಹಾಗೂ ವಿರೋಧ ಪಕ್ಷದ ಎಲ್ಲ ಸದಸ್ಯರೂ ಹಲವು ಅಧಿಕಾರಿಗಳು ಒಂದೇ ಕಡೆ ಬೀಡು ಬಿಟ್ಟಿದ್ದು, ಅವರಲ್ಲಿ ಅಭಿವೃದ್ಧಿಗೆ ಸಹಕರಿಸದವರನ್ನು ಪಟ್ಟಿಮಾಡಿ ವರ್ಗಾವಣೆಗಾಗಿ ಸರ್ಕಾರಕ್ಕೆ ಶಿಫಾರಸು ಮಾಡಲು ಮೂರು ದಿನಗಳ ಒಳಗಾಗಿ ಕ್ರಮ ಜರುಗಿಸಬೇಕು ಎಂಬ ಒಕ್ಕೊರಲಿನ ಒತ್ತಾಯ ಕೇಳಿಬಂದಿತು.

    ಬಿಜೆಪಿ ಸದಸ್ಯ ಶಂಕರಗೌಡ ಪಾಟೀಲ ಮಾತನಾಡಿ, ಪ್ರತಿ 3 ವರ್ಷಕ್ಕೊಮ್ಮೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗಾವಣೆ ಮಾಡಬೇಕೆಂಬ ನಿಯಮವಿದೆ. ಪಾಲಿಕೆ ಆಯುಕ್ತರು ಏಕೆ ಕ್ರಮ ವಹಿಸಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಅಶೋಕ ದುಡಗುಂಟಿ, ನನಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಅಧಿಕಾರವಿಲ್ಲ. ಬೇಕಿದ್ದರೆ ವಿಭಾಗಗಳನ್ನು ಬದಲಿಸಿ, ಆಂತರಿಕ ಹೊಂದಾಣಿಕೆ ಮಾಡಬಹುದಷ್ಟೇ ಎಂದು ತಿಳಿಸಿದರು. ಇದಕ್ಕೆ ಆೇಪಿಸಿದ ಸದಸ್ಯ ರವಿ ದೋತ್ರೆ, ಇತರ ಸದಸ್ಯರು, ಪಾಲಿಕೆ ಆಯುಕ್ತರಿಗೇ ವರ್ಗ ಮಾಡುವ ಅಧಿಕಾರವಿಲ್ಲವೆಂದರೆ ಏನರ್ಥ? ಬೇರೆ ಯಾರು ಮಾಡಬೇಕು ಎನ್ನುವ ಬಗ್ಗೆ ವರದಿ ಕೊಡಿ ಎಂದು ಪಟ್ಟು ಹಿಡಿದರು.

    ಬಹಳ ವರ್ಷದಿಂದ ಇಲ್ಲಿಯೇ ಇರುವ ಅಧಿಕಾರಿಗಳ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದ್ದರಿಂದ ವರ್ಗಾವಣೆಗೆ ಕ್ರಮ ಜರುಗಿಸಬೇಕು ಎಂದು ಮೇಯರ್​ ಶೋಭಾ ಸೋಮನಾಚೆ ರ್ನಿಣಯ ಪಾಸ್​ ಮಾಡಿದರು.

    1939ರಲ್ಲಿ ಡಾ.ಬಿ.ಆರ್​. ಅಂಬೇಡ್ಕರ್​ ಅವರನ್ನು ಮಹಾನಗರ ಪಾಲಿಕೆಯ ಹಳೇ ಕಟ್ಟಡದಲ್ಲಿ ಸನ್ಮಾನಿಸಲಾಗಿತ್ತು. ಆದರೆ, ಇದೀಗ ಕಂದಾಯ ಇಲಾಖೆ ಕಟ್ಟಡವನ್ನು ಬಳಸುತ್ತಿದ್ದು, ಸಮರ್ಪಕ ನಿರ್ವಹಣೆ ಇಲ್ಲದೆ ಶಿಥಿಲಗೊಂಡಿದೆ. ಅಂಬೆಡ್ಕರ್​ ಅವರ ಭೇಟಿಯ ಆ ಐತಿಹಾಸಿಕ ಕ್ಷಣದ ಸ್ಮರಣಾರ್ಥ ಕಟ್ಟಡವನ್ನು ಅಭಿವೃದ್ಧಿಪಡಿಸಿ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಬೇಕು ಎಂದು ಬಿಜೆಪಿಯ ಶಂಕರಗೌಡ ಪಾಟೀಲ ಆಗ್ರಹಿಸಿದರು. ಇದಕ್ಕೆ ಕಾಂಗ್ರೆಸ್​ನ ಅಜೀಮ್​ ಪಟವೇಗಾರ ಸೇರಿ ಎಲ್ಲ ಸದಸ್ಯರೂ ಇದಕ್ಕೆ ಮೇಜು ಕುಟ್ಟಿ ಸಹಮತ ವ್ಯಕ್ತಪಡಿಸಿದರು.
    ಆಯುಕ್ತ ದುಡಗುಂಟಿ ಈ ಬಗ್ಗೆ ಕ್ರಿಯಾಯೋಜನೆ ರೂಪಿಸಿ, ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಭೆಗೆ ತಿಳಿಸಿದರು.

    ಪಾಲಿಕೆ ನಡಾವಳಿಗಳ ಮಾಹಿತಿಯನ್ನು ಮರಾಠಿಯಲ್ಲೂ ನೀಡಬೇಕು ಎಂದು ಕಾಂಗ್ರೆಸ್​ನ ಸದಸ್ಯರು ಆಗ್ರಹಿಸಿದರು. ಮಧ್ಯ ಪ್ರವೇಶಿಸಿದ ಮೇಯರ್​ ಕನ್ನಡ, ಮರಾಠಿ, ಇಂಗ್ಲಿಷ್​ ಮೂರೂ ಭಾಷೆಗಳಲ್ಲಿ ನೀಡಲು ನಿರ್ಧರಿಸಲಾಗಿದೆ ಎಂದರು. ಇದಕ್ಕೆ ಉಳಿದೆಲ್ಲ ಸದಸ್ಯರೂ ಮೇಜು ಕುಟ್ಟಿ ಸಹಮತ ವ್ಯಕ್ತಪಡಿಸಿದರು.

    ಪಾಲಿಕೆ ನಿಯಮಗಳ ಬಗ್ಗೆ ಅಧಿಕಾರಿ ಕನ್ನಡದಲ್ಲಿ ಓದಿ ಹೇಳಿದರು. ಇದಕ್ಕೆ ಆೇಪಿಸಿದ ಸದಸ್ಯ ರವಿ ಸಾಳುಂಕೆ, ಕನ್ನಡ ತಿಳಿಯುವುದಿಲ್ಲ. ಮರಾಠಿ ಅಥವಾ ಹಿಂದಿಯೊಳಗೆ ವಿವರಿಸಿ ಎಂದು ಕನ್ನಡದಲ್ಲೆ ಕೇಳಿದರು. ಮಧ್ಯಪ್ರವೇಶಿದ ರವಿ ದೋತ್ರೆ, ಪಾಪ ಅವರು ಕನ್ನಡ ಮಾತಾಡ್ತಾರೆ, ಆದರೆ, ಅರ್ಥ ಆಗುವುದಿಲ್ಲವಂತೆ, ನಿಮಗೆ ಮರಾಠಿ ಬರುವುದಿಲ್ಲ ಎನಿಸುತ್ತದೆ, ಇಂಗ್ಲಿಷ್​ನಲ್ಲೇ ಹೇಳಿ ಎಂದು ತಿವಿದರು.

    ಕೈಕೊಟ್ಟ ಕರೆಂಟ್​
    ಸಭೆಯಲ್ಲಿ ಅಧಿಕಾರಿಗಳ ವರ್ಗಾವಣೆ ವಿಷಯ ತಾರಕಕ್ಕೇರಿದಾಗ ಸಭಾಂಗಣದಲ್ಲಿ ವಿದ್ಯುತ್​ ಸಂಪರ್ಕ ಕಡಿಗೊಂಡಿತು. ಈ ಸಂದರ್ಭದಲ್ಲಿ ಅಧಿಕಾರಿಗಳ ವರ್ಗಾವಣೆ ಎಂದಾಕ್ಷಣ ಹೀಗಾಗುತ್ತದೆ ನೋಡಿ ಎಂದು ಮಹಾಪೌರರಿಗೆ ಸದಸ್ಯರ ಅಳಲುತೋಡಿಕೊಂಡರು.

    ಒತ್ತಡದ ಜಟಾಪಟಿ!
    ಕಾಂಗ್ರೆಸ್​ನ ರಾಜಶೇಖರ ದೋಣಿ, ಒಳ್ಳೆಯ ಕೆಲಸ ಮಾಡಿದವರನ್ನೂ ವರ್ಗ ಮಾಡಬೇಕಿಲ್ಲ ಎಂದಿದ್ದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ರವಿ ದೋತ್ರೆ ಅವರು, ನಿಮ್ಮ ಮೇಲೆ ಯಾರೋ ಒತ್ತಡ ಹಾಕಿದ್ದರಿಂದ ಹೀಗೆ ಅವರ ಪರವಾಗಿ ಮಾತನಾಡುತ್ತಿದ್ದೀರಿ. ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ. ಸರ್ಕಾರಿ ನಿಯಮಗಳನ್ನು ಪಾಲಿಸಲು ಬಿಡಿ’ ಎಂದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸೋಹೆಲ್​ ಸಂಗೊಳ್ಳಿ, ಚುನಾಯಿತ ಸದಸ್ಯರ ಮೇಲೆ ಯಾರು ಒತ್ತಡ ತರುತ್ತಾರೆ? ಯಾವ ಆಧಾರದ ಮೇಲೆ ಇಂಥ ಆರೋಪ ಮಾಡುತ್ತೀರಿ ಎಂದು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ದೋತ್ರೆ ಅವರು, ಎಲ್ಲವನ್ನು ಬಹಿರಂಗವಾಗಿ ತಿಳಿಸಲು ಆಗಲ್ಲ, ಸಭೆ ಬಳಿಕ ವಿವರಿಸುವೆ ಎಂದರು.

    ಸ್ಮಾರ್ಟ್​ಸಿಟಿ ಕಾಮಗಾರಿ ಪರಿಶೀಲಿಸಿ:
    ಸದಸ್ಯೆ ವಾಣಿ ವಿಲಾಸ ಜೋಶಿ ಮಾತನಾಡಿ, ಸ್ಮಾರ್ಟ್​ಸಿಟಿ ಕಾಮಗಾರಿಗಳನ್ನು ಥರ್ಡ್​ಪಾರ್ಟಿ ಹಾಗೂ ಪಾಲಿಕೆ ಸದಸ್ಯರು ಪರಿಶೀಲಿಸಿದ ಬಳಿಕವೇ ಪಾಲಿಕೆ ಸುಪರ್ದಿಗೆ ಪಡೆಯಬೇಕು ಎಂದು ಅಧೀಕ ಇಂಜಿನಿಯರ್​ ಲಕ್ಷಿ$್ಮ ನಿಪ್ಪಾಣಿಕರಿಗೆ ಒತ್ತಾಯಿಸಿದರು. ಕಾಮಗಾರಿ ಹಾಳಾಗಿದ್ದರೆ ದುರಸ್ತಿಗೆ ಕ್ರಮವಹಿಸಬೇಕು. ಅವುಗಳ ನಿರ್ವಹಣೆಗೆ ತಕ್ಕಂತೆ ಅದರ ಹಣವನ್ನು ಪಾಲಿಕೆಗೆ ಜಮೆ ಮಾಡಿಸಿಕೊಳ್ಳಬೇಕು ಎಂದು ಬಿಜೆಪಿಯ ಸದಸ್ಯರು ಆಗ್ರಹಿಸಿದರು. ಪ್ರತ್ಯೇಕ ಸಭೆ ನಡೆಸಿ ಈ ಸಮಸ್ಯೆ ಕುರಿತು ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಒತ್ತಾಯಿಸಿದರು.
    ಸ್ಮಾರ್ಟ್​ಸಿಟಿ ಅಧಿಕಾರಿಗಳು ಸದಸ್ಯರಿಗೆ ಬೆಲೆ ಕೊಡುತ್ತಿಲ್ಲ. ಚೆನ್ನಾಗಿ ಮಾಡಿದ ರಸ್ತೆಗಳನ್ನೇ ಎಲ್ಲೆಂದರಲ್ಲಿ ಅಗೆದು ಹಾಳು ಮಾಡಿದ್ದಾರೆ. ಪಾಲಿಕೆ ಅಧಿಕಾರಿಗಳಿಗೂ ಸ್ಮಾರ್ಟ್​ಸಿಟಿ ಅಧಿಕಾರಿಗಳಿಗೂ ಹೊಂದಾಣಿಕೆಯೇ ಇಲ್ಲ ಎಂದು ಕೆಲವರು ಆೇಪಿಸಿದರು. ಕಾಮಗಾರಿ ಕುರಿತು ಕೇಳಿರುವ ಮಾಹಿತಿಯನ್ನು 15 ದಿನಗಳ ಒಳಗೆ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಆಯುಕ್ತ ದುಡಗುಂಡಿ ಉತ್ತರಿಸಿದರು.

    ಗೌರವ ಕೊಡದ ಗುತ್ತಿಗೆದಾರ ಕಪ್ಪುಪಟ್ಟಿಗೆ?:
    ನಗರದಲ್ಲಿನ ಎಲ್​ಇಡಿ ಬಲ್ಬ್​ ಅಳವಡಿಸುವ ಕಾಮಗರಿಗೆೆ ಎಷ್ಟು ವ್ಯಯಿಸಿದ್ದೀರಿ, ಗುಣಮಟ್ಟ ಏನು ಎಂದು ಪ್ರಶ್ನಿಸಲು ಹೋದ ಪಾಲಿಕೆ ಸದಸ್ಯರಿಗೆ ಗುತ್ತಿಗೆದಾರ ರಾಹುಲ್​ ಚಕ್ರವರ್ತಿ, ನಿಮ್ಮ ಶಿಣ ಎಷ್ಟು? ನಿಮಗೇನು ತಿಳಿಯುತ್ತದೆ? ಎಂದು ಅವಹೇಳನಕಾರಿಯಾಗಿ ಕೇಳಿದ್ದು, ಅವರನ್ನು ಸಭೆಗೆ ಕರೆಯಿಸಿ ಮೆ ಕೇಳಿಸಬೇಕು, ಇಲ್ಲವೆ ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಕೆಲವರು ಪಟ್ಟು ಹಿಡಿದರು. ಹೀಗಾಗಿ ಮುಂದಿನ ಸಭೆಯಲ್ಲಿ ಗುತ್ತಿಗೆದಾರರನ್ನು ಕರೆಸಿ ವಿಚಾರಿಸಲಾಗುವುದು ಎಂದು ಮೇಯರ್​ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts