More

    16 ಅಬಕಾರಿ ಅಧಿಕಾರಿಗಳ ವರ್ಗಾವಣೆ: ಆದೇಶ ಹೊರಡಿಸಿದ ಸರ್ಕಾರ

    ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ನಿಯಮಬಾಹಿರವಾಗಿ ವರ್ಗಾವಣೆ ಕುರಿತು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಹಾಗೂ ಜಾರಿ ನಿರ್ದೇಶನಾಲಯಕ್ಕೆ(ಇಡಿ) ದೂರು ಕೊಟ್ಟ ಬೆನ್ನಲ್ಲೇ ಅಬಕಾರಿ ಉಪ ಆಯುಕ್ತರು ಸೇರಿ ವಿವಿಧ ವೃಂದದ 16 ಅಧಿಕಾರಿಗಳನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಅಬಕಾರಿ ಅಧೀಕ್ಷಕ ಎಂ.ರಂಗಪ್ಪಗೆ ಮುಂಬಡ್ತಿ ಕೊಟ್ಟು ಬೆಂಗಳೂರು ನಗರ ಜಿಲ್ಲೆ(ಬಿಯುಡಿ-6) ಅಬಕಾರಿ ಉಪ ಆಯುಕ್ತರ ಹುದ್ದೆಗೆ ವರ್ಗಾ ಮಾಡಲಾಗಿದೆ. ಅದೇರೀತಿ, ಬೆಂಗಳೂರು ನಗರ ಜಿಲ್ಲೆಯ ಬಿಯುಡಿ-2ನಲ್ಲಿ ಉಪ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಶಶಿಕಲಾ ಎಸ್.ಒಡೆಯರ್ ಅವರನ್ನು ಇದೇ ಜಿಲ್ಲೆಯ ಬಿಯುಡಿ-7ನ ಉಪ ಆಯುಕ್ತ ಹುದ್ದೆಗೆ ಎತ್ತಂಗಡಿ ಮಾಡಲಾಗಿದೆ. ಅಬಕಾರಿ ಅಧೀಕ್ಷಕರಾದ ಪಿ.ರಮೇಶ್, ಎಂ.ಮಹದೇವ್, ಅಬಕಾರಿ ಉಪ ಅಧೀಕ್ಷಕರಾದ ಎನ್. ದಶರಥ ನಾಯ್ಕ, ಕೆ.ಸಿ.ಸಿದ್ದಲಿಂಗಸ್ವಾಮಿ, ಎಂ.ಎಚ್.ರಘು, ತುಕರಾಂ ನಾಯಕ್, ಎಸ್. ರವಿಕುಮಾರ್, ಅಬಕಾರಿ ನಿರೀಕ್ಷಕರಾದ ಎಂ.ಎನ್.ಸುರೇಶ್, ಲಕ್ಷ್ಮಣ ದೊಡ್ಡಪ್ಪ ಶಿವನಗಿ, ಕೆ.ಸಿ. ರಾಮು, ಜ್ಯೋತಿಬಾಯಿ, ಎನ್.ಶೀಲಾ, ಕೆ.ಎನ್.ಭರತ್, ಅನುಮಂತ್ ಸಿಂಗ್ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲಾಗಿದೆ. ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದರೂ ಆಡಳಿತಾತ್ಮಕ ಕಾರಣ ಕೊಟ್ಟು ಇವರೆಲ್ಲರನ್ನೂ ವರ್ಗಾಗೊಳಿಸಲಾಗಿದೆ.

    ಹೃತಿಕ್ ರೋಷನ್-ದೀಪಿಕಾ ಚುಂಬನ: ‘ಫೈಟರ್’ ವಿರುದ್ಧ ಪ್ರಕರಣ ದಾಖಲಿಸಿದ ಅಧಿಕಾರಿ
    ಇತ್ತೀಚಿಗಷ್ಟೇ ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ನಿಯಮಬಾಹಿರವಾಗಿ ವರ್ಗಾವಣೆ ಕುರಿತು ಅಜಿತ್ ಎಂಬುವರು,ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರಿಗೆ ದೂರು ಕೊಟ್ಟಿದ್ದರು. ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಕಚೇರಿಯಲ್ಲಿ ವಿವಿಧ ವೃಂದದ ಅಧಿಕಾರಗಳಿಂದ ಬರೋಬ್ಬರಿ 16 ಕೋಟಿ ರೂ.ಹಣ ಸಂಗ್ರಹಿಸಿದ್ದಾರೆ. 3 ಅಬಕಾರಿ ಉಪಆಯುಕ್ತರು, 9 ಸೂಪರಿಡೆಂಟ್, 13 ಡ್ಯೊಟಿ ಸೂಪರಿಡೆಂಟ್,20 ಅಬಕಾರಿ ಇನ್‌ಸ್ಪೆಕ್ಟರ್ ಅಧಿಕಾರಿಗಳಿಂದ ಇಂತಿಷ್ಟು ನಿಗದಿಗೊಳಿಸಿ ಹಣವನ್ನು ಬೆಂಗಳೂರಿನ ಸಚಿವ ಕಚೇರಿಯಲ್ಲಿ ಹಣ ಸಂಗ್ರಹಿಸಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಥಾವರ್‌ಚಂದ್ ಗೆಹಲೋತ್ ಅವರಿಗೆ ಬರೆದಿರುವ ಪತ್ರದಲ್ಲಿ ದೂರುದಾರರು ಕೋರಿದ್ದರು. ಕಳೆದ ವರ್ಷ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದರೂ ಇಲಾಖೆಯಲ್ಲಿ ವಿವಿಧ ವೃಂದದ ಒಟ್ಟು 400 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಇದರಲ್ಲಿ ಅಂದಾಜು 200 ಅಧಿಕಾರಿಗಳು ಪ್ರಿ ಮಚ್ಯೂರ್( ಅವಧಿ ಪೂರ್ವ ಮುನ್ನ) ಕಾರಣ ಕೊಟ್ಟು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts