More

    ಕಾರ್ಗಲ್ ಪೊಲೀಸ್ ಠಾಣೆ ಜೋಗಕ್ಕೆ ಶಿಫ್ಟ್

    ಕಾರ್ಗಲ್: ಹಳೆಯ ಕಟ್ಟಡವನ್ನು ಕೆಡವಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಕಾರ್ಗಲ್ ಪೊಲೀಸ್ ಠಾಣೆಯನ್ನು ತಾತ್ಕಾಲಿಕವಾಗಿ ಜೋಗದ ಹಳೆಯ ಪೊಲೀಸ್ ಠಾಣೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹೊಳೆಬಸಪ್ಪ ಹೊಳಿ ತಿಳಿಸಿದರು.

    ಕಾರ್ಗಲ್ ಪೊಲೀಸ್ ಠಾಣೆಯ ನೂತನ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ಸುಮಾರು ಒಂದು ವರ್ಷ ಬೇಕು. ಅಲ್ಲಿಯವರೆಗೂ ಜೋಗದ ಠಾಣೆಯಲ್ಲೇ ಕಾರ್ಯ ನಿರ್ವಹಿಸಲಿದೆ. ಶುಕ್ರವಾರದಿಂದ ಠಾಣೆಯ ಕಚೇರಿಯಲ್ಲಿ ಕಾರ್ಯಾರಂಭ ಮಾಡಲಾಗಿದೆ ಎಂದು ತಿಳಿಸಿದರು.
    ಕಾರ್ಗಲ್ ಪೊಲೀಸ್ ಠಾಣೆ ಕಟ್ಟಡವು ಶರಾವತಿ ಯೋಜನಾ ಪ್ರದೇಶದ ಸಂದರ್ಭದಲ್ಲಿ ನಿರ್ಮಾಣವಾಗಿದ್ದು, ತೀರಾ ಹಳೆಯದಾಗಿತ್ತು. ಕಾರ್ಗಲ್ ಠಾಣೆಯನ್ನು ಹೊಸದಾಗಿ ನವೀಕರಿಸಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಇದೀಗ ಕಾರ್ಗಲ್ ಹೊರವಲಯದಲ್ಲಿ ಪೊಲೀಸ್ ಸಿಬಂದಿ ವಸತಿಗೃಹಗಳು ನಿರ್ಮಾಣ ಹಂತದಲ್ಲಿದ್ದು ಜತೆಯಲ್ಲಿಯೇ ಠಾಣೆಯ ನೂತನ ಕಟ್ಟಡದ ನಿರ್ಮಾಣಕ್ಕೂ ಹಸಿರು ನಿಶಾನೆ ದೊರೆತಿದೆ. ಈ ಹಿಂದೆ ಜೋಗದಲ್ಲಿದ್ದ ಠಾಣೆಯನ್ನು ಆನಂದಪುರಕ್ಕೆ ವರ್ಗಾಯಿಸಿದ ಕಾರಣ ಜೋಗದ ಠಾಣಾ ವ್ಯಾಪ್ತಿಯನ್ನು ಕಾರ್ಗಲ್ ಠಾಣೆಗೆ ವಿಸ್ತರಿಸಿ ಕಟ್ಟಡವನ್ನು ಖಾಲಿ ಮಾಡಲಾಗಿತ್ತು. ಇದೀಗ ಸದರಿ ಕಟ್ಟಡಕ್ಕೆ ತಾತ್ಕಾಲಿಕವಾಗಿ ಕಾರ್ಗಲ್ ಠಾಣೆಯನ್ನು ಶಿಫ್ಟ್ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts