More

    ವಂಚಿತ ವರ್ಗಗಳ ಕಲ್ಯಾಣಕ್ಕಾಗಿ ಬದ್ದ

    ಬಾಗಲಕೋಟೆ: ದೇಶದಲ್ಲಿ ವಂಚಿತ ಸಮುದಾಯ, ಹಿಂದುಳಿದ ವರ್ಗ ಹಾಗೂ ಸಫಾಯಿ ಕರ್ಮಚಾರಿಗಳಿಗೆ ಸಾಮಾಜಿಕ ನ್ಯಾಯ ನೀಡುವ ವಾತಾವರಣವನ್ನು ಉತ್ತೇಜಿಸುವ ಮೂಲಕ ಭಾರತ ಸರಕಾರವು ನವರಾಷ್ಟ್ರ ನಿರ್ಮಾಣದ ಕನಸು ಹೊಂದಿದೆ ಎಂದು ರಾಜ್ಯದ ರಾಜ್ಯಪಾಲರಾದ ಥಾವರಚಂದ್ ಗೆಲ್ಹೋಟ್ ಹೇಳಿದರು.

    ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಭವನದಲ್ಲಿ ವಿಡಿಯೋ ವಚ್ರ್ಯೂವಲ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಪಿಎಂ-ಸೂರಜ ನ್ಯಾಷನಲ್ ಪೋರ್ಟಲ್ ಲೋಕಾರ್ಪಣೆ ಕಾರ್ಯಕ್ರದಲ್ಲಿ ಪಾಲ್ಗೊಂಡು ಪರಿಶಿಷ್ಟ ಜಾತಿ, ಹಿಂದುಳಿದ ವರ್ಗಗಳಿಗೆ ಸೌಲ ಸೌಲಭ್ಯಗಳ ಮಂಜೂರಾತಿ ಪತ್ರ ಮತ್ತು ಸಫಾಯಿ ಕರ್ಮಚಾರಿಗಳಿಗೆ ಆರೋಗ್ಯ ಕಾರ್ಡ ವಿತರಿಸಿ ಮಾತನಾಡಿದ ಅವರು ದೇಶ ಅಬಿವೃದ್ದಿ ಹೊಂದಲು ಪ್ರತಿಯೊಬ್ಬ ನಾಗರಿಕನ ಕೊಡುಗೆ ಅಪಾರವಾಗಿದೆ. ಉದ್ದಿಮೆಗಳಿಗೆ ಸಾಲದ ನೆರವು ನೀಡಿ ರಾಷ್ಟ್ರ ವ್ಯಾಪಿ ಔಟ್‍ರೀಚ್ ಕಾಂiÀರ್iಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಿಎಂ-ಸೂರಜ್ ವೆಬ್ ಪೋರ್ಟಲ್ ಅನಾವರಣಗೊಳಿಸಿದ್ದಾರೆ ಎಂದರು.

    ಕೇಂದ್ರ ಸರಕಾರ ಸಮಾಜದ ವಂಚಿತ ವರ್ಗಗಳ ಕಲ್ಯಾಣ ಮತ್ತು ಉನ್ನತಿಗಾಗಿ ತನ್ನ ಭದ್ದತೆಯನ್ನು ಬಲವಾಗಿ ಅನುಸರಿಸುತ್ತಿದೆ. ದೇಶದ ವಂಚಿತ ಸಮುದಾಯಗಳ ಸಬಲೀಕರಣ ಮತ್ತು ಉತ್ತೇಜನಕ್ಕಾಗಿ ಪ್ರಧಾನಮಂತ್ರಿ ಅವರು ದೇಶದಾದ್ಯಂತ 500ಕ್ಕೂ ಹೆಚ್ಚು ಜಿಲ್ಲೆಗಳೊಂದಿಗೆ ನೇರವಾಗಿ ಸಂಪರ್ಕ ಸಾಧಿಸಿದ್ದಾರೆ. ಮತ್ತು ಸಂವಾದ ನಡೆಸಿ ಸಂಪರ್ಕ ಹೊಂದಿರುವುದು ಸಂತೋಷದ ವಿಷಯವಾಗಿದೆ. ಮಹಿಳೆಯರಿಗಾಗಿ ವಯೋಸ್ತ್ರೀ ಯೋಜನೆ ಜಾರಿಗೆ ತಂದು ನಿರ್ಗತಿಕ ಅಶಕ್ತ, ವಯೋವೃದ್ದ ಮಹಿಳೆಯರ ರಕ್ಷಣೆಗಾಗಿ ಪಣತೊಟ್ಟಿದೆ ಎಂದು ತಿಳಿಸಿದರು.

    ಕಳೆದ 10 ವರ್ಷಗಳಲ್ಲಿ 25 ಲಕ್ಷ ಪರಿಶಿಷ್ಟ ಜಾತಿ, ಇತರೆ ಹಿಂದುಳಿದ ವರ್ಗಗಳ ಮತ್ತು ನೈರ್ಮಲ್ಯ ಕಾರ್ಮಿಕರಿಗೆ ಸಚಿವಾಲಯದ ಉನ್ನತ ನಿಗಮಗಳಿಂದ 11437.39 ಕೋಟಿ ರೂ.ಗಳ ಸಾಲದ ನೆರವು ನೀಡಲಾಗಿದೆ. ಈ ಸಾಲದ ನೆರವಿನಿಂದ 25 ಲಕ್ಷ ಜನರು ಮಾತ್ರವಲ್ಲದೇ 25 ಲಕ್ಷ ಕುಟುಂಬಗಳು ಸಹ ಪ್ರಯೋಜನ ಪಡೆದಿವೆ. ಪಿ.ಎಂ ದಕ್ಷ ಯೋಜನೆಯಡಿ ಲಕ್ಷಾಂತರ ಜನರಿಗೆ ಕೌಶಲ್ಯ ತರಬೇತಿ ನೀಡುವ ಕಾರ್ಯ ಮಾಡುತ್ತಿವೆ. ರಾಜ್ಯದಲ್ಲಿ 23 ಜಿಲ್ಲೆಗಳ ಸುಮಾರು 10 ಸಾವಿರ ಫಲಾನುಭವಿಗಳು ಇದರ ಲಾಭ ಪಡೆದಿದ್ದಾರೆ ಎಂದರು.

    ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗದ ಜನರು ಉದ್ದಿಮೆ ಪ್ರಾರಂಭಿಸಲು ಸಾಲ ಸೌಲಭ್ಯದ ನೆರವು ನೀಡುವ ಕಾರ್ಯಕ್ರಮ ಇದಾಗಿದೆ. ಸರಕಾರದ ಪ್ರತಿಯೊಂದು ಯೋಜನೆಗಳ ಲಾಭ ಫಲಾನುಭವಿಗಳಿಗೆ ತಲುಪಬೇಕು. ವಿವಿಧ ವಲಯಗಳಲ್ಲಿ ಕೆಲಸ ಮಾಡಲು ಪ್ರತಿಯೊಬ್ಬರಿಗೂ ಸಾಲಸೌಲಭ್ಯ ದೊರೆತಾದ ಮಾತ್ರ ಅನುಕೂಲವಾಗಲಿದೆ. ಕೇಂದ್ರ ಸರಕಾರದ ಪಿಎಂ ವಿಶ್ವಕರ್ಮ, ಸ್ವನಿಧಿ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದು ಇದರಿಂದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿಯಾಗಲಿದೆ ಎಂದರು.

    ಸಪಾಯಿ ಕರ್ಮಚಾರಿಗಳು ಸೆಪ್ಟಿಕ್ ಟ್ಯಾಂಕರ ಕೆಲಸದಲ್ಲಿ ತೊಡಗಿ ತೊಂದರೆಗೆ ಒಳಗಾಗುತ್ತಿದ್ದಾರೆ ಅವರಿಗೆ ಉತ್ತೇಜನ ನೀಡುವ ಸಲುವಾಗಿ ಆರೋಗ್ಯ ಕಾರ್ಡ ನೀಡಲಾಗುತ್ತಿದೆ. ಸ್ವಾಭಿಮಾನದ ಬದುಕು ಬದುಕಲು ಆರ್ಥಿಕವಾಗಿ ಸಬಲರಾಗಬೇಕು. ಬ್ಯಾಂಕ್‍ಗಳು ಕರ್ತವ್ಯ ಬದ್ದತೆಯಿಂದ ಕೆಲಸ ಮಾಡಿದಾಗ ಮಾತ್ರ ಎಲ್ಲರೂ ಮುಂದೆ ಬರಲು ಸಾದ್ಯವಾಗುತ್ತದೆ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕಿನ ಹುಬ್ಬಳ್ಳಿ ವಿಭಾಗದ ಮಹಾ ಪ್ರಬಂಧಕ ಎಂ.ವಿಜಯಕುಮಾರ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿ.ಪಂ ಸಿಇಓ ಶಶಿಧರ ಕುರೇರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಕೆವಿಜಿ ಬ್ಯಾಂಕ್‍ನ ರಿಜಿನಲ್ ಮ್ಯಾನೇಜರ ಶ್ರೀಧರ, ಲೀಡ್ ಬ್ಯಾಂಕ್ ಮ್ಯಾನೇಜರ ಮಧುಸೂದನ, ಕೆನರಾ ಬ್ಯಾಂಕ್‍ನ ಜನರಲ್ ಮ್ಯಾನೇಜರ ಶೈಲಜಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts