More

    ಲೋಕಾ ತನಿಖೆ ಹಿಂಪಡೆದರೆ ಹೋರಾಟ ನಿಶ್ಚಿತ

    ಶಿವಮೊಗ್ಗ: ಮಲ್ಲಿಗೇನಹಳ್ಳಿ ವಾಜಪೇಯಿ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಕುರಿತು ನಡೆಯುತ್ತಿರುವ ಲೋಕಾಯುಕ್ತ ತನಿಖೆಯನ್ನು ಸರ್ಕಾರ ಹಿಂಪಡೆದರೆ ಹೋರಾಟ ನಡೆಸುವುದಾಗಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಎಚ್ಚರಿಸಿದರು.

    ನಗರಾಭಿವೃದ್ಧಿ ಸಚಿವರು ತನಿಖೆ ಹಿಂಪಡೆಯುವ ಬಗ್ಗೆ ಮಾತನಾಡಿದ್ದಾರೆ. ಅವರು ಈ ನಿರ್ಧಾರ ಕೈಗೊಂಡರೆ ಕಾಂಗ್ರೆಸ್​ನಿಂದ ಕಾನೂನಾತ್ಮಕ ಹಾಗೂ ಪ್ರತಿಭಟನಾತ್ಮಕ ಹೋರಾಟ ನಿಶ್ಚಿತ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಬಡಾವಣೆಯ 142 ನಿವೇಶನಗಳ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ನಿವೃತ್ತ ನ್ಯಾಯಾಧೀಶರ ತನಿಖೆಯಲ್ಲಿ ಬಹಿರಂಗಗೊಂಡಿದೆ. ಈ ನಿವೇಶನಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಮನೆ ನಿರ್ವಣಕ್ಕೆ ಅವಕಾಶ ನೀಡಲಿ. ಅದನ್ನು ಬಿಟ್ಟು ಸಂಪೂರ್ಣ ತನಿಖೆಯನ್ನೇ ಕೈ ಬಿಡುವುದು ಆಕ್ಷೇಪಾರ್ಹ ಎಂದರು.

    ಕೆ.ಎಸ್.ಈಶ್ವರಪ್ಪ ಡಿಸಿಎಂ ಆಗಿದ್ದಾಗ ವಾಜಪೇಯಿ ಬಡಾವಣೆ ನಿರ್ಮಾಣ ಆರಂಭವಾಯಿತು. ಆದರೆ ಎಲ್ಲ ಕಾನೂನು ಚೌಕಟ್ಟನ್ನೂ ಮೀರಿ ಬಡಾವಣೆ ನಿರ್ವಿುಸಲಾಯಿತು. ಅರ್ಜಿ ಹಾಕಿ ಹಲವು ವರ್ಷಗಳಿಂದ ನಿವೇಶನದ ನಿರೀಕ್ಷೆಯಲ್ಲಿದ್ದರನ್ನು ನಿರಾಸೆಗೊಳಿಸಿ, ನಿಯಮ ಗಾಳಿಗೆ ತೂರಿ ನಿವೇಶನ ಹಂಚಿಕೆ ಮಾಡಲಾಗಿತ್ತು ಎಂದು ದೂರಿದರು.

    ಆ ಸಂದರ್ಭದಲ್ಲಿ ಸೂಡಾ ಅಧ್ಯಕ್ಷರಾಗಿದ್ದವರು ತಮ್ಮ ಅಧಿಕಾರವನ್ನೂ ಮೀರಿ ನಿವೇಶನ ಹಂಚಿಕೆ ಮಾಡಿದ್ದರು. ಇದುವರೆಗಿನ ತನಿಖೆಯ ವರದಿ ಪ್ರಕಾರ 142 ನಿವೇಶನಗಳು ನಿಯಮಬಾಹಿರವಾಗಿ ಹಂಚಿಕೆ ಆಗಿವೆ. ಅಂದಿನ ಸೂಡಾ ಅಧ್ಯಕ್ಷರಾಗಿದ್ದ ಜ್ಞಾನೇಶ್ವರ್, ಎಸ್.ದತ್ತಾತ್ರಿ ಮತ್ತು ಆಯುಕ್ತರ ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ. ಈಗ ಪ್ರಕರಣ ಕೈಬಿಡುವಂತೆ ನಗರಾಭಿವೃದ್ಧಿ ಇಲಾಖೆ ಸಚಿವರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದರು.

    ತನಿಖೆಯಲ್ಲಿ ಸಾಬೀತು: ನಿವೇಶನ ಹಂಚಿಕೆ ಕುರಿತು ಸಾರ್ವಜನಿಕರಿಂದ ಆರೋಪಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ ನಡೆಸಲಾಗಿತ್ತು. ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಅಂಶ ತನಿಖೆಯಿಂದ ಸಾಬೀತಾಗಿತ್ತು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಲೋಕಾಯುಕ್ತ ತನಿಖೆಯನ್ನೇ ಸ್ಥಗಿತಗೊಳಿಸಿದರೆ ಶಿವಮೊಗ್ಗದ ಜನತೆಗೆ ರಾಜ್ಯ ಸರ್ಕಾರ ದ್ರೋಹ ಮಾಡಿದಂತಾಗುತ್ತದೆ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಹೇಳಿದರು.

    ಪಾಲಿಕೆ ಸದಸ್ಯರಾದ ಶಾಮೀರ್ ಖಾನ್, ಆರ್.ಸಿ.ನಾಯ್್ಕ ರೇಖಾ ರಂಗನಾಥ್, ಕಾಂಗ್ರೆಸ್ ಮುಖಂಡರಾದ ಇಸ್ಮಾಯಿಲ್ ಖಾನ್, ಚಿನ್ನಪ್ಪ, ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts