More

    ಲಾಠಿಪ್ರಹಾರ ಖಂಡಿಸಿ ದಲಿತರ ಪ್ರತಿಭಟನೆ 

    ದಾವಣಗೆರೆ: ಒಳಮೀಸಲು ಜಾರಿಗಾಗಿ ಬೆಂಗಳೂರಲ್ಲಿ ಹೋರಾಟನಿರತ ಚಳವಳಿಗಾರರ ಬಂಧನ ಹಾಗೂ ಲಾಠಿಪ್ರಹಾರ ಖಂಡಿಸಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
    ನ್ಯಾಯಮೂರ್ತಿ ಎ.ಜೆ.ಸದಾಶಿವ ವಿಚಾರಣಾ ಆಯೋಗದ ವರದಿ ಜಾರಿಗಾಗಿ ಹರಿಹರದ ಮೈತ್ರಿವನದಿಂದ ನ.28ರಿಂದ ಆರಂಭವಾದ ಪಾದಯಾತ್ರೆ ಬೆಂಗಳೂರು ತಲುಪಿದ್ದು, ಮನವಿ ಸ್ವೀಕಾರಕ್ಕೆ ಮುಖ್ಯಮಂತ್ರಿ ಬರಲಿಲ್ಲ. ಸಮಾವೇಶಗೊಂಡ ಸ್ಥಳದಲ್ಲಿ, ಸರ್ಕಾರ ಪೊಲೀಸರ ಮೂಲಕ ಚಳವಳಿಗಾರರ ಮೇಲೆ ದೌರ್ಜನ್ಯ ಎಸಗಿದ್ದು ಖಂಡನೀಯ ಎಂದು ದಸಂಸ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಎಚ್.ಮಲ್ಲೇಶ್ ವಿಷಾದಿಸಿದರು.
    ಲಾಠಿಪ್ರಹಾರ, ದೌರ್ಜನ್ಯ ಎಸಗಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ರಾಜ್ಯಪಾಲರು ಸರ್ಕಾರವನ್ನು ವಜಾಗೊಳಿಸಬೇಕು. ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಆಗ್ರಹಿಸಿದರು.
    ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿದ ಮುಖಂಡರು, ಎಸಿ ದುರ್ಗಾಶ್ರೀ ಅವರ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಿದರು.
    ಬಿ. ದುಗ್ಗಪ್ಪ, ಪ್ರೊ.ಬಿ.ಕೃಷ್ಣಪ್ಪ ಬಣದ ಟಿ.ರವಿಕುಮಾರ್, ಸೋಮಶೇಖರ ಬಣದ ಆಂಜಿನಪ್ಪ ಹೂವಿನಮಡು, ಎನ್.ಮೂರ್ತಿ ಬಣದ ಜಿಲ್ಲಾಧ್ಯಕ್ಷ ಅಣ್ಣಪ್ಪ ತಣಿಗೆರೆ, ಭೀಮವಾದದ ಚಂದ್ರಪ್ಪ ಕಂದಗಲ್ಲು, ತಿಪ್ಪೇರುದ್ರಪ್ಪ, ಎಚ್. ನಿಂಗಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts