More

    ರೋಮಾಂಚನಗೊಳಿಸಿದ ಮಲ್ಲಗಂಬ ಪ್ರದರ್ಶನ

    ಕೊಡೇಕಲ್; ಆಧುನಿಕ ಕ್ರೀಡೆಯಲ್ಲಿ ಮರೆಯಾಗುತ್ತಿರುವ ವಿಶಿಷ್ಟ ಸಾಹಸಮಯ ಕ್ರೀಡೆಯಾದ ಮಲ್ಲಗಂಬ ಪ್ರದರ್ಶನ ನೋಡುಗರಿಗೆ ರೋಮಾಂಚನಗೊಳಿಸಿತು.

    ಶುಕ್ರವಾರ ಸಂಜೆ ಶ್ರೀಮಠದ ಆವರಣದಲ್ಲಿ ಹಮ್ಮಿಕೊಂಡ ಶ್ರೀ ಗುರು ದುರದುಂಡೇಶ್ವರ ವಿರಕ್ತಮಠದ 21ನೇ ಕಾರ್ತಿಕೋತ್ಸವ ನಿಮಿತ್ತ ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ಬಾಲಕ ಮತ್ತು ಬಾಲಕಿಯರು ಮಾಡಿದ ಸ್ಥಿರ ಮಲ್ಲಗಂಬ ಮತ್ತು ಹಗ್ಗದ ಮೇಲೆ ಸಾಹಸ ಪ್ರದರ್ಶನ ನಡೆಯಿತು.

    ಪೀಠಾಧಿಪತಿ ಶ್ರೀ ಶಿವಕುಮಾರ ಸ್ವಾಮೀಜಿ, ಗಡಿಗೌಡಗಾಂವನ ಹಾವಗಿಮಠದ ಶ್ರೀ ಡಾ.ಶಾಂತವೀರ ಶಿವಾಚಾರ್ಯರು, ಡಾ. ಬಿ.ಬಿ.ಬಿರಾದಾರ, ಭೀಮನಗೌಡ ಮಾಲಿಪಾಟೀಲ್, ಅಯ್ಯಪ್ಪ ಪಡಶೆಟ್ಟಿ, ಎನ್.ಆರ್.ಜಾಲಿಬೆಂಚಿ, ಸಂಗಪ್ಪ ಶಿವಪುರ, ವಿರೇಶ ಜೈನಾಪುರ, ಶಂಕರ್ ದಾಸಣ್ಣನವರ, ಬಸವರಾಜ ಹೊಸಪೂಜಾರಿ, ಶಿವರಾಜ ಹೋಕ್ರಾಣಿ, ಸಂಗು ಪಾಟೀಲ್ ಇತರರಿದ್ದರು.

    ಚಾಂಪಿಯನ್ ಹಿರೇಉಪ್ಪೇರಿ ತಂಡ: ಶುಕ್ರವಾರ ಬೆಳಗ್ಗೆ ನಡೆದ ಕಬಡ್ಡಿ ಪಂದ್ಯಾವಳಿಯ್ಲಲಿ ಒಟ್ಟು 26 ತಂಡಗಳು ಭಾಗವಹಿಸಿದ್ದವು. ಹಿರೇಉಪ್ಪೇರಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಒಂದು ಟ್ರೋಫಿ ಮತ್ತು 20 ಸಾವಿರ ನಗದು ಪಡೆದುಕೊಂಡಿದೆ. ತೋಳದಿನ್ನಿ ತಂಡ ದ್ವಿತೀಯ ಸ್ಥಾನಪಡೆದು 15 ಸಾವಿರ ನಗದು ಮತ್ತು ಟ್ರೋಫಿ ಮತ್ತು ತೃತೀಯ ಸ್ಥಾನ ಹಾಲಬಾವಿ, ನಾಲ್ಕನೇ ಸ್ಥಾನ ಆರ್ವಿಜೆ ಕೊಡೇಕಲ್ ತಂಡ ಪಡೆದುಕೊಂಡಿದೆ.

    ಬಿಜೆಪಿ ಯುವ ಮುಖಂಡ ಹನುಮಂತ ನಾಯಕ ಗೆದ್ದ ತಂಡಕ್ಕೆ ಟ್ರೋಫಿ ವಿತರಿಸಿದರು. ರಾಜಾ ಜೀತೇಂದ್ರ ನಾಯಕ ಜಹಾಗೀರದಾರ, ಕರವೇ ವಲಯಾಧ್ಯಕ್ಷ ರಮೇಶ ಬಿರಾದಾರ, ಬಸವರಾಜ ಜಿರಾಳ, ಯಲ್ಲು ಜಿರಾಳ, ಪರಶುರಾಮ ದೊರಿ ಇತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts