More

    ರೋಹಿಣಿ ಮಳೆಗೆ ಓಣಿ ತುಂಬ ಕಾಳು…

    ಧಾರವಾಡ/ಹುಬ್ಬಳ್ಳಿ: ರೋಹಿಣಿ ಮಳೆಗೆ ಓಣಿ ತುಂಬ ಕಾಳು… ಎಂಬ ಮಾತು ಗ್ರಾಮೀಣ ಪ್ರದೇಶದಲ್ಲಿ ಜನಜನಿತ. ರೋಹಿಣಿ ಮಳೆ ಉತ್ತಮವಾದರೆ ರೈತರ ಬಿತ್ತನೆ ಚಟುವಟಿಕೆ ಬಿರುಸಿನಿಂದ ಸಾಗುತ್ತವೆ. ಈ ಬಾರಿ ರಾಜ್ಯಕ್ಕೆ ಮುಂಗಾರು ಪ್ರವೇಶ ಜೂ. 5ಕ್ಕೆ ಎಂದು ನಿರೀಕ್ಷಿಸಿದ್ದರೂ 5 ದಿನ ಮೊದಲೇ ಉತ್ತಮ ಮಳೆ ಆರಂಭವಾಗಿರುವುದು ರೈತ ಸಂಕುಲದ ಹರ್ಷವನ್ನು ಇಮ್ಮಡಿಗೊಳಿಸಿದೆ.

    ಬುಧವಾರ ಬೆಳಗ್ಗೆಯಿಂದ ಮೋಡ ಮುಸುಕಿದ ವಾತಾವರಣ ಕಂಡುಬಂತು. ಬಿಸಿಲಿನ ಹೊಡೆತಕ್ಕೆ ಬೆಂಡಾಗಿದ್ದ ಜನರಿಗೆ ಇಡೀ ದಿನ ಚಳಿಯ ಅನುಭವವಾಯಿತು. ಇಡೀ ದಿನ ಆಗೊಮ್ಮೆ ಈಗೊಮ್ಮೆ ಮಳೆಯ ಸಿಂಚನವಾಯಿತು. ಗ್ರಾಮೀಣ ಪ್ರದೇಶದ ಜನ ಬೆಳಗ್ಗೆ ಬಿತ್ತನೆ ಕಾರ್ಯಕ್ಕೆ ತೆರಳಿದ್ದರು. ಬಿತ್ತನೆ ಕಾರ್ಯ ಆರಂಭಿಸುವ ಹೊತ್ತಿಗೆ ಮಳೆಯಾಗಿದ್ದರಿಂದ ಹದ ಬಾರದ ಹಿನ್ನೆಲೆಯಲ್ಲಿ ಮನೆಗಳಿಗೆ ಮರಳಬೇಕಾಯಿತು. ರೋಹಿಣಿ ಮಳೆಯ ಅವಧಿ ಜೂ. 6ರವರೆಗೆ ಇದ್ದು, ಇನ್ನಷ್ಟು ಸುರಿಯುವ ಸಾಧ್ಯತೆ ಇದೆ. ಜೂ. 7ರಿಂದ ಮೃಗಶಿರ ಮಳೆ ಕೂಡಿಕೊಳ್ಳಲಿದ್ದು, ಜಿಟಿಜಿಟಿ ಮಳೆಯ ಅನುಭವವಾಗುವುದು; ಒಂದೆರಡು ದಿನದಲ್ಲಿ ಜಿಲ್ಲೆಯ ಪೂರ್ವ ಮತ್ತು ಈಶಾನ್ಯ ಭಾಗದಲ್ಲೂ ಮಳೆ ಪ್ರಮಾಣ ಹೆಚ್ಚುವ ನಿರೀಕ್ಷೆಯಿದೆ. ಮಳೆಯಿಂದಾಗಿ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿ ಇಡೀ ಜಿಲ್ಲೆಯಲ್ಲಿ ಜನಜೀವನದಲ್ಲಿ ಅಲ್ಪಸ್ವಲ್ಪ ವ್ಯತ್ಯಯ ಉಂಟಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts