More

    ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಲಭ್ಯ; ಉತ್ತಮ ಮಳೆಯಿಂದ ಉಳುಮೆ ಕಾರ್ಯ ಆರಂಭ

    ಪ್ರದೀಪ್ ಕುಮಾರ್ ಆರ್. ದೊಡ್ಡಬಳ್ಳಾಪುರ: ಮೂರು ವಾರಗಳಿಂದ ಉತ್ತಮ ಮಳೆಯಾಗುತ್ತಿದ್ದು, ರೈತರು ಮುಂಗಾರು ಕೃಷಿ ಚಟುವಟಿಕೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

    ಜೂನ್ ಮೊದಲ ವಾರದಲ್ಲಿ ಮುಂಗಾರು ಬಿತ್ತನೆಗೆ ಈಗಾಗಲೇ ಉಳುಮೆ ಆರಂಭಿಸಿದ್ದು, ಸಾಸಲು, ತೂಬಗೆರೆ, ಮಧುರೆ, ದೊಡ್ಡಬೆಳವಂಗಲ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಜನವರಿಯಿಂದ ಇಲ್ಲಿ ತನಕ 180 ಮಿ.ಮೀ. ಮಳೆಯಾಗಿದ್ದು, ರೈತರ ಮೊಗದಲ್ಲಿ ನಗು ತಂದಿದೆ.

    21,850 ಹೆಕ್ಟರ್‌ನಲ್ಲಿ ಬಿತ್ತನೆ: ತಾಲೂಕಿನಾದ್ಯಂತ 21,850 ಹೆಕ್ಟೇರ್‌ನಲ್ಲಿ ಮುಂಗಾರು ಬಿತ್ತನೆ ಬೆಳೆಗಳಾದ ರಾಗಿ, ಜೋಳ, ತೊಗರಿ, ಅಲಸಂದೆ, ನೆಲಗಡಲೆ, ಮೇವಿನ ಜೋಳ, ಹೆಸರಕಾಳು ಬಿತ್ತನೆಗೆ ರೈತರು ಸಿದ್ಧತೆ ನಡೆದಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳು ಲಭ್ಯವಿದ್ದು, ರೈತರು ಆಧಾರ್ ಕಾರ್ಡ್, ಪಹಣಿ ನೀಡಿ ಶೇ.50 ಸಬ್ಸಿಡಿಯಲ್ಲಿ ರಾಗಿ, ಜೋಳ, ಅವರೆ, ತೊಗರಿ, ಅಲಸಂದೆ ಬೀಜ ಪಡೆಯಬಹುದು.

    ಜೋಳದ ಗಿಡಕ್ಕೆ ಹುಳವಿನ ಕಾಟ: ಈಗಾಗಲೇ ತಾಲೂಕಿನಲ್ಲಿ 60 ಹೆಕ್ಟ್ಟೆರ್‌ನಷ್ಟು ಜೋಳ ಬಿತ್ತನೆ ಮಾಡಿದ್ದು, ದೊಡ್ಡಬೆಳವಂಗಲ ವ್ಯಾಪ್ತಿಯ ರೈತರ ಜಮೀನಿನಲ್ಲಿ ಜೋಳದ ಗಿಡಕ್ಕೆ ಹುಳುಗಳ ಕಾಟವಿದೆ. ಔಷಧ ಸಿಂಪಡಿಸಿದರೂ ಹುಳು ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಹೇಳಲಾಗುತ್ತಿದೆ. ತಾಲೂಕಿನಲ್ಲಿ ದೊಡ್ಡ ಪ್ರಮಾಣದಲ್ಲಿ ಹುಳುವಿನ ಬಾಧೆ ಕಾಣಿಸುತ್ತಿಲ್ಲ. ರೈತರು ಆಂತಕಪಡುವ ಅಗತ್ಯವಿಲ್ಲ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

    ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಲಭ್ಯವಿದ್ದು, ರೈತರು ಸಬ್ಸಿಡಿ ದರದಲ್ಲಿ ಪಡೆಯಬಹುದು. ಜೂನ್ ಮೊದಲ ವಾರದಲ್ಲಿ ಮಳೆ ಬಿದ್ದರೆ ಬಿತ್ತನೆ ಕೆಲಸ ಆರಂಭವಾಗಲಿದೆ.

    ಎಸ್.ಪಿ.ನಾರಾಯಣಸ್ವಾಮಿ, ಸಹಾಯಕ ಕೃಷಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts