More

    ರೈತರ ಹಿತ ಕಾಪಾಡುವಲ್ಲಿ ಸಹಕಾರಿ ಮುಂಚೂಣಿ

    ಯಾದಗಿರಿ: ಸಾರ್ವಜನಿಕ ರಂಗದಲ್ಲಿ ಸಹಕಾರಿ ಬ್ಯಾಂಕ್‌ಗಳ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ದೇಶದ ಬೆನ್ನೆಲುಬಾಗಿರುವ ರೈತರ ಹಿತ ಕಾಪಾಡುವಲ್ಲಿ ಸಹ ಸಹಕಾರಿಗಳು ಮುಂಚೂಣಿಯಲ್ಲಿವೆ ಎಂದು ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ರಾಯಚೂರು-ಯಾದಗಿರಿ ಜಿಲ್ಲಾ ನಿರ್ದೇಶಕ ರಾಯಪ್ಪಗೌಡ ದರ್ಶನಾಪುರ ಹೇಳಿದರು.

    ಇಲ್ಲಿನ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‌ನ (ಪಿಎಲ್‌ಡಿ) ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ೭೦ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆಯ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಅನ್ನದಾತರಿಗೆ ಸಕಾಲಕ್ಕೆ ಸಾಲದ ನೆರವನ್ನು ನೀಡುವ ಮೂಲಕ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಗಳು ಶ್ರಮಿಸುತ್ತ ಬರುತ್ತಿವೆ. ಇದರ ಜತೆಗೆ ಸಣ್ಣಪುಟ್ಟ ಉದ್ಯಮಗಳಿಗೂ ನೆರವಾಗುತ್ತಿವೆ ಎಂದರು.

    ಬ್ಯಾಂಕ್ ಅಧ್ಯಕ್ಷ ಮಲ್ಲನಗೌಡ ಪಾಟೀಲ್ ಹತ್ತಿಕುಣಿ ಮಾತನಾಡಿ, ಸದಸ್ಯರ ಹಾಗೂ ಸಾರ್ವಜನಿಕರ ಸಹಕಾರದಿಂದ ನಮ್ಮ ಬ್ಯಾಂಕ್ ಆರ್ಥಿಕ ವ್ಯವಹಾರದಲ್ಲಿ ಮುಂದಿದೆ. ಪ್ರಸಕ್ತ ವರ್ಷ ಹೊಸ ಕಟ್ಟಡ ನಿರ್ಮಿಸಲಾಗಿದ್ದು, ಅದರಿಂದಲೂ ಆದಾಯದ ನಿರೀಕ್ಷೆಯಲ್ಲಿz್ದೆÃವೆ ಎಂದು ತಿಳಿಸಿದರು.
    ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಸಿದ್ದಪ್ಪ ಹೊಟ್ಟಿ, ಪಂಚವಾರ್ಷಿಕ ಯೋಜನೆಗಳಲ್ಲಿ ಸಹಕಾರ ಸಂಘಕ್ಕೆ ಹೆಚ್ಚಿನ ಅದ್ಯತೆ ನೀಡಿದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಆದಿಯಾಗಿ ಸಹಕಾರ ಸಂಘದ ಪ್ರಗತಿಗೆ ಸಾಕಷ್ಟು ಜನರು ಶ್ರಮಿಸಿದ್ದಾರೆ. ಹೀಗಾಗಿ ಪ್ರತಿ ವರ್ಷದ ನೆಹರೂ ಅವರ ಹುಟ್ಟು ಹಬ್ಬದಂದು ಸಹಕಾರ ದಿನ ಆಚರಿಸಲಾಗುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts