More

    3 ತಿಂಗಳು ಸಾಲ ಕಂತು ವಸೂಲಿ ನಿಲ್ಲಿಸುವಂತೆ ಒತ್ತಾಯಿಸಿ ರೈತರಿಂದ ಮನವಿ ಸಲ್ಲಿಕೆ


    ರಾಣೆಬೆನ್ನೂರ: ಜಿಲ್ಲೆಯಲ್ಲಿ ಬರಗಾಲದಿಂದ ರೈತರು ಹಾಗೂ ಮಹಿಳೆಯರು ದುಡಿಮೆ ಇಲ್ಲದೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ಬ್ಯಾಂಕ್, ಸ್ವಸಹಾಯ ಸಂಘ ಸೇರಿ ಇತರ ಫೈನಾನ್ಸ್‌ನವರು ಸಾಲದ ಕಂತುಗಳನ್ನು 3 ತಿಂಗಳ ಕಾಲ ವಸೂಲಿ ಮಾಡುವುದನ್ನು ತಡೆಯಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ತಹಸೀಲ್ದಾರ್ ಗುರುಬಸವರಾಜ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
    ನೇತೃತ್ವ ವಹಿಸಿದ್ದ ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಒಂದೊಂದು ಕುಟುಂಬದಲ್ಲಿ 3-4 ಸಂಘಗಳಲ್ಲಿ ಸಾಲ ತೆಗೆದುಕೊಂಡು ಒಂದೊಂದು ಕುಟುಂಬದಲ್ಲಿ ಒಂದು ತಿಂಗಳಿಗೆ 25 ರಿಂದ 50 ಸಾವಿರ ರೂ.ವರೆಗೂ ಕಂತು ಕಟ್ಟುವ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡಿದ್ದಾರೆ.
    ಈವರೆಗೂ ಎಲ್ಲರೂ ಸಾಲದ ಕಂತುಗಳನ್ನು ಕಟ್ಟುತ್ತ ಬಂದಿದ್ದಾರೆ. ಆದರೀಗ ಬರಗಾಲದಿಂದ ತತ್ತರಿಸಿ ಹೋಗಿದ್ದು, ಜೀವನ ನಡೆಸುವುದೆ ದುಸ್ಥರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಆದ್ದರಿಂದ ಸ್ತ್ರೀ ಶಕ್ತಿ ಸಂಘಗಳಿಂದ ಮತ್ತು ಧರ್ಮಸ್ಥಳ ಸಂಘ ಹಾಗೂ ಫೈನಾನ್ಸ್‌ಗಳಲ್ಲಿ 3 ತಿಂಗಳ ಯಾವುದೇ ರೀತಿ ಒತ್ತಡ ಹಾಕಿ ಹಣ ವಸೂಲಿ ಮಾಡದಂತೆ ಜಿಲ್ಲಾಡಳಿತ ಆದೇಶ ಮಾಡಬೇಕು.
    ಧರ್ಮಸ್ಥಳ ಸಂಘದ ಧರ್ಮಾಧಿಕಾರಿಗಳು ಸಾಲ ಮನ್ನಾ ಮಾಡಲಿಕ್ಕೆ ಸಾರ್ವಜನಿಕರ ಪರವಾಗಿ ನೊಂದ ಬಡ ಕುಟುಂಬಗಳ ಮಹಿಳೆಯರ ಪರವಾಗಿ ಪತ್ರವನ್ನು ಬರೆದು ಸಾಲ ಮನ್ನಾ ಮಾಡಲು ಜಿಲ್ಲಾಡಳಿತ ಮನವಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
    ಪ್ರಮುಖರಾದ ಲಲಿತವ್ವ ಲಮಾಣಿ, ಮಂಜುಳಾ ಆರ್.ಸಿ., ಗಂಗವ್ವ ಲಮಾಣಿ, ಲಕ್ಷ್ಮವ್ವ ಲಮಾಣಿ, ಬಸಮ್ಮ ಮಾಳಮ್ಮನವರ, ಗಜೇಂದ್ರ ಬಾಲಬಸವರ, ಸುರೇಶ ಕುಲಕುಂಟಗಿ, ನಾರಾಯಣ ಲಮಾಣಿ, ಬಸಪ್ಪ ಬಾರ್ಕಿ, ಶಿವಾನಂದ ಕೆಳಗಿನಮನಿ, ನಾಗರಾಜ ಕೆಳಗಿನಮನಿ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts