More

    ರೈತರ ಸಂಕಷ್ಟದಲ್ಲಿ ಕೈ ಹಿಡಿದ ಹೈನುಗಾರಿಕೆ : ಕೋಚಿಮುಲ್​ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಅಭಿಮತ, ಬಿಎಂಸಿ ಕೇಂದ್ರ ಉದ್ಘಾಟನೆ

    ಬೂದಿಕೋಟೆ: ವ್ಯವಸಾಯದಿಂದ ಆದಾಯ ಕುಂಠಿತಗೊಂಡಿದ್ದು, ಹೆಚ್ಚಿನ ರೈತರು ಹೈನುಗಾರಿಕೆಯತ್ತ ಮುಖ ಮಾಡುತ್ತಿರುವುದರಿಂದ ಹಾಲು ಉತ್ಪಾದನೆ ಪ್ರಮಾಣ ಹೆಚ್ಚಳ ಕಂಡಿದೆ ಎಂದು ಕೋಚಿಮುಲ್​ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಹೇಳಿದರು.
    ಬೂದಿಕೋಟೆ ಹೋಬಳಿ ಕಾರಮಾನಹಳ್ಳಿಯಲ್ಲಿ ಶುಕ್ರವಾರ ಹಾಲು ಉತ್ಪಾದಕರ ಸಹಕಾರ ಸಂದ ಕಟ್ಟಡ ಹಾಗೂ ಬಿಎಂಸಿ ಕೇಂದ್ರದ ಉದ್ಘಾಟಿಸಿ ಮಾತನಾಡಿದರು.
    ಅಧಿಕಾರ ಇದ್ದಾಗ ಜನರಿಗೆ ಏನಾದರೂ ಉತ್ತಮ ಕೆಲಸ ಮಾಡಿದರೆ ಅದು ಜನರ ಮನಸ್ಸಿನಲ್ಲಿ ಉಳಿಯುತ್ತದೆ. ಕೇವಲ ಆರು ತಿಂಗಳಲ್ಲೇ ತಾಲೂಕಿನಾದ್ಯಾಂತ ಬಿಎಂಸಿ ಟಕಗಳನ್ನು ತೆರೆಯಲಾಗಿದ್ದು, ಕ್ಯಾನ್​ ರೂಟ್​ಗಳನ್ನು ನಿಲ್ಲಿಸಲಾಗಿದೆ. ಎಂವಿ ಕೃಷ್ಣಪ್ಪ ಅವರ ಜನ್ಮ ದಿನದಂದು 4 ಲ ಹಾಲಿನ ಪ್ಯಾಕೇಟ್​ಗಳು ಮಾರಾಟವಾಗಿದ್ದು, ಪ್ರತಿ ದಿನ 11 ರಿಂದ 12 ಲ ಲೀಟರ್​ ಹಾಲು ಸರಬರಾಜಾಗುತ್ತಿದೆ. ರೈತರಿಗೆ ದಿನಕ್ಕೆ 3 ಕೋಟಿ ರೂ. ಬಟವಾಡೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಾಲು ಉತ್ಪಾದನೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
    ರೈತರು ಲಾಂತರ ರೂ. ಖರ್ಚು ಮಾಡಿ ಟೊಮ್ಯಾಟೊ ಸೇರಿ ಹಲವು ಬೆಳೆಗಳನ್ನು ಬೆಳೆಯುತ್ತಿದ್ದು, ಬೆಳೆಗೆ ಸರಿಯಾದ ಬೆಲೆ ಸಿಗದೆ ಸಂಕಷ್ಟದಲ್ಲಿದ್ದ ರೈತರಿಗೆ ಉಪಕಸುಬಾದ ಹೈನುಗಾರಿಕೆ ಕೈ ಹಿಡಿದಿದೆ ಎಂದರು.
    ಸರ್ಕಾರ ಹಾಲಿನ ದರವನ್ನು ಏರಿಕೆ ಮಾಡುತ್ತಿಲ್ಲ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ ಪ್ರತಿ ಲೀಟರ್​ಗೆೆ 4 ರೂ. ಹಾಗೂ ಯಡಿಯೂರಪ್ಪ ಸಿಎಂ ಆಗಿದ್ದಾಗ 5 ರೂ. ಏರಿಕೆ ಮಾಡಿದ್ದರು. ಆದರೆ ಇಂದಿನ ಸರ್ಕಾರ ಹಾಲಿನ ಬೆಲೆ ಏರಿಕೆ ಮಾಡಲು ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.
    ಬಂಗಾರಪೇಟೆಯಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಬೃಹತ್​ ಶಿಬಿರದ ಕಟ್ಟಡ ನಿರ್ಮಿಸಲಾಗುತ್ತಿದ್ದು, ಟೆಂಡರ್​ ಸಹ ಕರೆಯಲಾಗಿದೆ. ಮುಂದಿನ ಒಂದು ವರ್ಷದೊಳಗೆ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
    ತಾಲೂಕಿನಲ್ಲಿ 22 ಲ ರೂ. ಹಣವನ್ನು ಮ್ಯಾಟ್ಗಳಿಗೆ ಮಾತ್ರ ನೀಡಲಾಗುತ್ತಿದೆ. ಕಾರಮಾನಹಳ್ಳಿಯ ಡೇರಿಯಲ್ಲಿ ಹಾಲಿನ ಗುಣಮಟ್ಟ ಕಡಿಮೆ ಇದ್ದು, ಗುಣಮಟ್ಟ ಹೆಚ್ಚಿಸಿಕೊಂಡರೆ ಡೇರಿ ಬೆಳವಣಿಗೆ ಕಾಣಲಿದೆ ಎಂದರು.
    ಉಪವ್ಯವಸ್ಥಾಪಕ ಡಾ.ಕೆ.ವೆಂಕಟರಮಣಪ್ಪ ಮಾತನಾಡಿ, ಖಾಸಗಿ ಡೇರಿಗಳಿಂದ ಬಹಳಷ್ಟು ತೊಂದರೆಯಾಗಿತ್ತು. ಕಾರಮಾನಹಳ್ಳಿ ಸಂದ ಹಾಲು ಉತ್ಪಾದಕರ ಸಹಕಾರ ಸಂ ತಾಲೂಕಿನಲ್ಲಿ 44ನೇ ಬಿಎಂಸಿ ಕೇಂದ್ರವಾಗಿ ಉದ್ಘಾಟನೆಗೊಂಡಿದೆ. ಜಿಲ್ಲೆಯ ಹಾಲು ಉತ್ಪಾದನೆಯಲ್ಲಿ ಬಂಗಾರಪೇಟೆ ತಾಲೂಕು ಎರಡನೆಯ ಸ್ಥಾನದಲ್ಲಿದ್ದು, ಸತತ ಆರು ವರ್ಷಗಳಿಂದ ಗುಣಮಟ್ಟದ ಹಾಲು ಪೂರೈಕೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದರು.
    ಸಂದ ಅಧ್ಯ ಕೆ.ಎಂ.ಮುನಿಶ್ಯಾಮಪ್ಪ, ಉಪಾಧ್ಯ ಅಂಗಡಿ ಕೃಷ್ಣಪ್ಪ, ತಾಪಂ ಮಾಜಿ ಅಧ್ಯ ಮಹದೇವ್​, ಮಾಜಿ ಸದಸ್ಯ ವಿ.ಮಾರ್ಕಂಡೇಗೌಡ, ಸಹಾಯಕ ವ್ಯವಸ್ಥಾಪಕ ಮೋಹನ್​ ಬಾಬು, ವಿಸ್ತರಣಾಧಿಕಾರಿ ಭಾನುಪ್ರಕಾಶ್​, ಸಂದ ಮುಖ್ಯ ಕಾರ್ಯನಿರ್ವಾಹಕ ಎನ್​.ವೆಂಕಟೇಶ್​, ಮೇಲ್ವಿಚಾರಕ ತಿಪ್ಪಾರೆಡ್ಡಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts