More

    ಶುದ್ಧ ನೀರಿಗಾಗಿ ಹೋರಾಟ ಅಗತ್ಯ

    ಕೋಲಾರ: ಜಿಲ್ಲೆಯಲ್ಲಿ ಬರ ಆವರಿಸಿದ್ದು, ಸರ್ಕಾರ ಬರಪಿಡಿತ ಜಿಲ್ಲೆಯನ್ನಾಗಿ ಘೋಷಿಸಬೇಕಿದೆ. ಇದಕ್ಕೆ ಹೋರಾಟ ತೀವ್ರಗೊಳಿಸಬೇಕಿದೆ ಎಂದು ರೈತಸಂಘ(ಪ್ರೊ.ಎಂಡಿಎನ್ ಬಣ) ರಾಜ್ಯ ಯುವ ಘಟಕ ಅಧ್ಯಕ್ಷ ಕಲ್ವಮಂಜಲಿರಾಮುಶಿವಣ್ಣ ತಿಳಿಸಿದರು.
    ನಗರದ ಕನಕಮಂದಿರ ಬಳಿ ರೈತಸಂಘದ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಿಸುವ ಸಲುವಾಗಿ ಕೆಸಿ ವ್ಯಾಲಿ ಯೋಜನೆ ಜಾರಿಗೊಳಿಸಿದ್ದು, ೩ನೇ ಹಂತದ ಶುದ್ಧೀಕರಣ ಮಾಡದ ಕಾರಣ ಈ ನೀರಿನಿಂದ ಕೆರೆಗಳು ಕಲುಷಿತಗೊಂಡಿವೆ. ಜಿಲ್ಲೆಯನ್ನೇ ಮೂಲ ಗುರಿಯಾಗಿಸಿ ಜಾರಿಗೊಳಿಸಲಾದ ಎತ್ತಿನ ಹೊಳೆ ಯೋಜನೆಗೆ ಪೈಪ್‌ಲೈನ್ ಮಾರ್ಗದ ಉದ್ದಕ್ಕೂ ಬರುವ ಜಿಲ್ಲೆಗಳನ್ನು ಸೇರಿಸಿ ಕಡೆಯ ನಮ್ಮ ಜಿಲ್ಲೆಗೆ ನೀರು ಹರಿಸುತ್ತಾರೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಇನ್ನು ಮೇಕೆದಾಟು ಯೋಜನೆ ಏನಾಗುತ್ತದೆಯೋ ಗೊತ್ತಿಲ್ಲ, ಇಂತಹ ಸಂದರ್ಭದಲ್ಲಿ ಶುದ್ಧ ನೀರಿಗಾಗಿ ಹೋರಾಟ ನಡೆಸುವುದು ಅತ್ಯಗತ್ಯವಗಿದೆ ಎಂದರು.
    ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಗಿದ್ದಾಗ ರೂಪಿಸಿದ್ದ ನದಿಜೋಡಣೆ ಯೋಜನೆ ಅತ್ಯುಪಯುಕ್ತವಾಗಿದ್ದು, ಉತ್ತರದ ನದಿಗಳನ್ನು ದಕ್ಷಿಣಕ್ಕೆ ಅದರಲ್ಲೂ ರಾಜ್ಯದ ಬಯಲು ಸೀಮೆಯನ್ನು ಗುರಿಯಾಗಿಸಿಕೊಂಡು ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಬೇಕಿದೆ ಎದರು.
    ರಾಜ್ಯ ಉಪಾಧ್ಯಕ್ಷ ಕೊಲದೇವಿ ಗೋಪಾಲಕೃಷ್ಣ ಮೂರ್ತಿ, ಜಿಲ್ಲಾಧ್ಯಕ್ಷ ಕೊತ್ತಮೀರಿ ಮಂಜುನಾಥ್, ತಾಲೂಕು ಘಟಕಗಳ ಅಧ್ಯಕ್ಷರಾದ ಮಾಲೂರಿನ ತಿಪ್ಪಸಂದ್ರ ಹರೀಶ್, ಕೋಲಾರದ ಜಗನ್ನಾಥ್ ರೆಡ್ಡಿ, ಶ್ರೀನಿವಾಸಪುರದ ದೊಡ್ಡ ಕುರುಬರಲ್ಲಿ ಶಂಕರೇಗೌಡ, ಮುಳಬಾಗಿಲಿನ ಕಾಡುಕಚ್ಚಿನಳ್ಳಿ ವಿಶ್ವನಾಥ್ ಗೌಡ, ಬಂಗಾರಪೇಟೆಯ ಕದರೆನಹಳ್ಳಿ ಶ್ರೀನಿವಾಸ್, ಮಹಿಳಾ ಘಟಕದ ಎಲ್.ಸುಕನ್ಯಾ, ಕೆ.ಶೋಭಾ, ಮುಖಂಡರಾದ ಎಲ್.ಎನ್.ಬಾಬು, ಲಕ್ಷ್ಮಿನಾರಾಯಣ ಶೆಟ್ಟಿ, ಧನರಾಜ್, ಹನುಮಪ್ಪ, ಸತೀಶ್, ರೂಪಶ್ರೀ, ಹುಣಸಿಕೋಟೆ ಶ್ರೀನಿವಾಸ್, ಮಾದಾಪುರ ನಾಗಭೂಷಣ್, ಕರಡುಗುರ್ಕಿ ಪ್ರಕಾಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts