More

    ರೈತರ ನೆರವಿಗೆ ಹಾರ್ವೆಸ್ಟರ್ ಬ್ಯಾಂಕ್

    ಕುಮಟಾ: ಇತ್ತೀಚೆಗೆ ರೈತರು ಕೃಷಿಯಿಂದ ವಿಮುಖರಾಗಿ ಶಹರದೆಡೆಗೆ ಆಕರ್ಷಿತರಾಗುತ್ತಿರುವುದರಿಂದ ಕೃಷಿ ಕ್ಷೇತ್ರ ಹಿಂದುಳಿಯುತ್ತಿದೆ. ಅನ್ನದ ಬೆಳೆಯಾದ ಭತ್ತದ ಕೃಷಿಯೇ ತೀರಾ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಯಾಂತ್ರೀಕರಣ ವಿಭಾಗದ ಪ್ರಾದೇಶಿಕ ನಿರ್ದೇಶಕ ಅಬ್ರಾಹಂ ಹೇಳಿದರು.

    ಇಲ್ಲಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯಡಿ ಜಿಲ್ಲೆಯ ಕೃಷಿ ಉಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರದ ಪ್ರಬಂಧಕರು ಹಾಗೂ ಚಾಲಕರಿಗೆ ಈಶೀ ಲೈಫ್ ಸಂಸ್ಥೆಯಿಂದ ಗುರುವಾರ ಏರ್ಪಡಿಸಿದ್ದ ಗದ್ದೆ ಕಟಾವು ಯಂತ್ರಗಳ ಚಾಲನೆ ಹಾಗೂ ನಿರ್ವಹಣೆ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು. ಕರೊನಾ ಕಾರಣಕ್ಕೆ ಯುವಕರು ಪಟ್ಟಣದಿಂದ ಪುನಃ ಹಳ್ಳಿಯೆಡೆಗೆ ಮರಳಿ ಕೃಷಿಯತ್ತ ವಾಲುತ್ತಿರುವುದು ಆಶಾದಾಯಕ. ಆದರೆ, ಇತ್ತೀಚಿನ ವಾತಾವರಣದ ಏರುಪೇರು, ವಿಷಮಮಳೆ ಹಾಗೂ ದುಬಾರಿ ಕೂಲಿಯಿಂದ ಭತ್ತ ಕೃಷಿಯಲ್ಲಿ ನಷ್ಟ ಉಂಟಾಗುತ್ತಿದೆ. ಹೀಗಾಗಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಭತ್ತದ ಕೃಷಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಹಾರ್ವೆಸ್ಟರ್ ಬ್ಯಾಂಕ್​ಗಳನ್ನು ತೆರೆದಿದ್ದು, ಪ್ರತಿ ತಾಲೂಕಿನಲ್ಲಿ ಇರುವ ಕೃಷಿ ಯಂತ್ರಧಾರೆ ಕೇಂದ್ರಗಳಿಗೆ ಹೊಸ ಮಾದರಿಯ ಗದ್ದೆ ನಾಟಿ, ಕಟಾವು ಮತ್ತು ಒಕ್ಕಣೆ ಯಂತ್ರಗಳನ್ನು ಒದಗಿಸಿದ್ದಾರೆ. ಇದೆಲ್ಲದರ ಸದುಪಯೋಗವಾಗಲಿ ಎಂದರು.

    ಈಶೀ ಲೈಪ್ ಸಂಸ್ಥೆಯ ವ್ಯವಹಾರ ಮುಖ್ಯಸ್ಥ ಕಾರ್ತಿಕ್ ಕುಮಾರ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಾಭಿವೃದ್ಧಿ ಮುಖ್ಯ ಯೋಜನಾಧಿಕಾರಿ ಹರೀಶ ಕುಮಾರ, ಕೃಷಿ ಯಾಂತ್ರೀಕರಣ ಉಡುಪಿ ಯೋಜನಾಧಿಕಾರಿ ಅಶೋಕ, ಶಿರಸಿ ವಿಭಾಗದ ಯೋಜನಾಧಿಕಾರಿ ರಾಘವೇಂದ್ರ ಭಟ್, ತಾಂತ್ರಿಕ ವಿಭಾಗದ ಮುಖ್ಯಸ್ಥ ರಾಜೇಶ, ಮೌನೇಶ ಬಡಿಗೇರ ಇತರರಿದ್ದರು.

    ಭಾಸ್ಕರ ಪಟಗಾರ ಕೂಜಳ್ಳಿ, ಬಳಲೆ ಕೃಷಿ ಯಂತ್ರಧಾರೆ ಕೇಂದ್ರದ ಪ್ರಬಂಧಕರಾದ ಕೃಷ್ಣಮೂರ್ತಿ ಎನ್. ಹಾಗೂ ರಾಘವೇಂದ್ರ ಭಟ್ ಕಾರ್ಯಕ್ರಮ ನಿರ್ವಹಿಸಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts