More

    ರೈತರ ಋಣ ತೀರಿಸುವೆ

    ಮುಳಗುಂದ: ಲಾಕ್ ಡೌನ್​ನಿಂದ ಕಷ್ಟದಲ್ಲಿ ದಿನ ಕಳೆಯುತ್ತಿರುವ ಬಡ, ನಿರ್ಗತಿಕರ ನೆರವಿಗೆ ಸ್ಪಂದಿಸಿರುವ ರೈತರ ಋಣವನ್ನು ಬರುವ ದಿನಗಳಲ್ಲಿ ತೀರಿಸುವ ಕೆಲಸ ಮಾಡುತ್ತೇನೆ ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಹೇಳಿದರು.

    ಪಟ್ಟಣದ ರೈತರ ಮನೆ ಬಾಗಿಲಿಗೆ ತೆರಳಿ ಧಾನ್ಯ ಸಂಗ್ರಹಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಕರೊನಾ ವೈರಸ್ ಮನುಕುಲವನ್ನೇ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಗದಗ ವಿಧಾನಸಭಾ ಮತಕ್ಷೇತ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಬಡ ಹಾಗೂ ನಿರ್ಗತಿಕರಿಗೆ ಲಾಕ್​ಡೌನ್​ನಿಂದ ಆಹಾರದ ಸಮಸ್ಯೆಯಾಗಿದೆ. ಅವರಿಗೆ ಆಹಾರ ಧಾನ್ಯ ಒದಗಿಸುವುದಕ್ಕಾಗಿ ಮನುಕುಲಕ್ಕಾಗಿ ಭಿಕ್ಷೆ ಅಭಿಯಾನ ಆರಂಭಿಸಿದ್ದೇನೆ. ಗ್ರಾಮೀಣ ಭಾಗದಲ್ಲಿರುವ ರೈತರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು ತಾವು ಬೆಳೆದ ಜೋಳ, ಕಡಲೆ, ಹೆಸರು ಸೇರಿ ದವಸ ಧಾನ್ಯಗಳನ್ನ ನೀಡುತ್ತಿದ್ದಾರೆ. ಇಲ್ಲಿಯವರೆಗೂ ನೂರಾರು ಕ್ವಿಂಟಾಲ್ ಧಾನ್ಯ ಸಂಗ್ರಹವಾಗಿದೆ. ಹಲವು ದಿನಸಿ ವ್ಯಾಪಾರಸ್ಥರು ಅಡುಗೆ ಎಣ್ಣೆ, ಸಕ್ಕರೆ, ಬೆಲ್ಲ, ಚಹಾ ಪುಡಿ, ಜೀರಿಗೆ, ಸಾಸಿವೆ ಸೇರಿ ಹಲವು ಆಹಾರ ಸಾಮಗ್ರಿಗಳನ್ನ ಸ್ವಯಂ ಪ್ರೇರಣೆಯಿಂದ ಕೊಡುತ್ತಿದ್ದಾರೆ ಎಂದರು.

    ಗದಗ ಮತಕ್ಷೇತ್ರದಲ್ಲಿ ಸುಮಾರು 12 ಸಾವಿರ ಬಡ, ನಿರ್ಗತಿಕ ಕುಟುಂಬಗಳನ್ನ ಗುರುತಿಸಲಾಗಿದ್ದು ಈಗಾಗಲೇ ಸಂಗ್ರಹಿಸಿದ ಧಾನ್ಯಗಳನ್ನು ಏ.26 ರಿಂದ ವಿತರಣೆ ಮಾಡಲಾಗುವುದು. ಇದಕ್ಕಾಗಿ ನೂರಾರು ಯುವಕರು ಸ್ವಯಂ ಪ್ರೇರಣೆಯಿಂದ ಆಹಾರ ದಿನಸಿ ಕಿಟ್ ತಯಾರಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನಷ್ಟು ಗ್ರಾಮಗಳಿಗೆ ಸಂಚರಿಸಿ ಧಾನ್ಯ ಸಂಗ್ರಹಿಸುತ್ತೇವೆ ಎಂದರು.

    ಪಟ್ಟಣ ಪಂಚಾಯಿತಿ ಸದಸ್ಯ ದ್ಯಾಮಣ್ಣ ನೀಲಗುಂದ, ಗದಗ ಗ್ರಾಮೀಣ ಬಿಜೆಪಿ ಮಂಡಳ ಅಧ್ಯಕ್ಷ ಮಹೇಶ ಶಿರಹಟ್ಟಿ, ಮುಖಂಡರಾದ ಬಸವಣ್ಣೆಯ್ಯ ಹಿರೇಮಠ, ಮಹೇಶ ದಾಸರ, ಮೋಹನ ಮದ್ದಿನ, ಸಿ.ಎಸ್. ಪತ್ರಿ, ಪ್ರಮೋದ ಡಂಬಳ, ಮಹೇಶ ಮಟ್ಟಿ, ಬಸವರಾಜ ಮೆಣಸಿನಕಾಯಿ ಇತರರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts