More

    ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಪರಿವರ್ತನೆ

    ಬೆಳಗಾವಿ: ರಾಷ್ಟ್ರೀಯ ಶಿಕ್ಷಣ ನೀತಿ-2020 ಶಾಲಾ ಹಂತದಲ್ಲಿ ಸುಧಾರಣೆ ಮತ್ತು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಪರಿವರ್ತನೆಗೆ ದಾರಿ ಮಾಡಿಕೊಡುತ್ತದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕರಿಸಿದ್ದಪ್ಪ ಅಭಿಪ್ರಾಯಪಟ್ಟಿದ್ದಾರೆ.

    ನಗರದ ಅಂಗಡಿ ತಾಂತ್ರಿಕ, ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಗುರುವಾರ ಆಯೋಜಿಸಿದ್ದ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಜಾರಿ ಮತ್ತು ಕಾರ್ಯಗತಗೊಳಿಸುವ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಎನ್‌ಇಪಿ 2030ರ ವೇಳೆಗೆ ಶಾಲಾ ಪೂರ್ವದಿಂದ ಮಾಧ್ಯಮಿಕ ಹಂತದವರೆಗೆ ಶಿಕ್ಷಣದ ಸಾರ್ವತ್ರೀಕರಣ ಗುರಿ ಹೊಂದಿದೆ. ಅಲ್ಲದೆ, ಶಾಲೆಯಿಂದ ಹೊರಗುಳಿದ ಸುಮಾರು 2 ಕೋಟಿ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶ ಹೊಂದಿದೆ. ಹೀಗಾಗಿ, ಪ್ರಾಥಮಿಕ ಶಾಲಾ ಶಿಕ್ಷಕರಿಂದ ಉನ್ನತ ವಿಶ್ವವಿದ್ಯಾಲಯದ ಅಧ್ಯಾಪಕರು ಹೆಚ್ಚಿನ ಜವಾಬ್ದಾರಿ ಮತ್ತು ಬದ್ಧತೆಯಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕು ಎಂದರು.

    ಉನ್ನತ ಶಿಕ್ಷಣದಲ್ಲಿ 2035ರ ವೇಳೆಗೆ ಶೈಕ್ಷಣಿಕ ಬಜೆಟ್ ಅನ್ನು 50ಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಯಾವುದೆ ವಿದ್ಯಾರ್ಥಿಯು ಕಲಿಕೆಯ ಮಧ್ಯೆ ಕಾರಣಾಂತರಗಳಿಂದ ಶಿಕ್ಷಣ ಮೊಟಕುಗೊಳಿಸಿದರೂ ಅವರಿಗೆ ಪುನಃ ಶಿಕ್ಷಣ ಮುಂದುವರಿಸಲು ಎನ್‌ಇಪಿ ಅವಕಾಶ ಮಾಡಿಕೊಟ್ಟಿದೆ. ಭವಿಷ್ಯದಲ್ಲಿ ಶಿಕ್ಷಣ ಮತ್ತು ಸಂಶೋಧನೆಗಳು ಒಂದಕ್ಕೊಂದು ಪೂರಕವಾಗಿರುತ್ತವೆ ಎಂದು ಹೇಳಿದರು.

    ಸಂಸದೆ ಮಂಗಲ ಅಂಗಡಿ, ಸಂಸ್ಥೆಯ ನಿರ್ದೇಶಕಿ ಡಾ.ಸ್ಫೂರ್ತಿ ಪಾಟೀಲ, ನಿರ್ದೇಶಕಿ ಶ್ರದ್ಧಾ ಅಂಗಡಿ, ಆಡಳಿತಾಧಿಕಾರಿ ರಾಜು ಜೋಶಿ, ಪ್ರಾಚಾರ್ಯ ಡಾ.ಆನಂದ ದೇಶಪಾಂಡೆ, ಪ್ರೊ. ಎಚ್. ಎಸ್. ಪಾಟೀಲ, ಆಶಾ ರಜಪೂತ, ಪ್ರೊ.ಧನಶ್ರೀ ಕುಲಕರ್ಣಿ, ಪ್ರೊ.ಸಂಗೀತಾ ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts