More

    ರಾಜ್ಯ ಸರ್ಕಾರದಿಂದ ರೈತರಿಗೆ ಅನ್ಯಾಯ

    ಹಳಿಯಾಳ: ಹಿಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಘೊಷಿಸಿದ ಸಾಲ ಮನ್ನಾದ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಲಿಲ್ಲ. ಅಲ್ಲದೆ, ಕಾಂಗ್ರೆಸ್ ಸರ್ಕಾರ ಆರಂಭಿಸಿದ ಕೃಷಿ ಸಾಲದ ಯೋಜನೆಗೂ ಮೀತಿಯನ್ನು ಕಡಿಮೆ ಮಾಡಿ ರೈತರಿಗೆ ಅನ್ಯಾಯವೆಸಗಿದೆ ಎಂದ ಶಾಸಕ ಆರ್.ವಿ. ದೇಶಪಾಂಡೆ ಆರೋಪಿಸಿದರು.

    ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಕರೆ ಕೃಷಿ ಜಮೀನಿನು ಸಾಮೂಹಿಕ ಹೆಸರಿನಲ್ಲಿ ಇದ್ದರೂ ಖಾತೆಯಲ್ಲಿ ಇರುವ ಎಲ್ಲರಿಗೂ ತಲಾ 3 ಲಕ್ಷ ರೂ.ಗಳವರೆಗೆ ಕೃಷಿ ಸಾಲ ಸೌಲಭ್ಯವನ್ನು ನೀಡಲಾಗಿತ್ತು. ಆದರೆ, ಈ ಸರ್ಕಾರ ಸಾಲ ಸೌಲಭ್ಯ ಯೋಜನೆಯನ್ನು ಮರುಪರಿಶೀಲಿಸಿ ಕೇವಲ 3 ಲಕ್ಷ ರೂ.ಗೆ ಸೀಮಿತಗೊಳಿಸಿದೆ. ಹೆಚ್ಚುವರಿ ಸಾಲ ಪಡೆಯ ಬೇಕಾದರೇ ಈಗ ರೈತರು ತಮ್ಮ ಜಮೀನಿನ ಪೋಡಿ ಮಾಡಿ ತಮ್ಮ ಹೆಸರಿಗೆ ಜಮೀನು ಖಾತೆ ಪ್ರತ್ಯೇಕ ಮಾಡಿಕೊಂಡು ನಂತರ ಸಾಲ ಪಡೆಯಬೇಕಾಗಿದೆ ಎಂದು ಹೇಳಿದರು.

    ಸಾಲ ಮನ್ನಾದ ಹಣ ಬಿಡುಗಡೆ ಮಾಡದೇ ಇರುವುದರಿಂದ ರೈತರು ಸಾಲ ಮರು ಪಾವತಿಸದೆ ಇದ್ದಾರೆ. ಹೀಗಿರುವಾಗ ಸರ್ಕಾರ ಈಗ ಸಾಲ ಮರು ಪಾವತಿ ಅವಧಿ ಮುಗಿದಿರುವಾಗಿ ತಿಳಿಸಿ ಅದರ ಮೇಲೂ ಬಡ್ಡಿ ಆಕರಿಸಲು ಮುಂದಾಗಿರುವುದು ಸರಿಯಲ್ಲ ಎಂದರು.

    ತಾಂತ್ರಿಕ ಸಮಸ್ಯೆ ನಿವಾರಣೆಗೆ ಕ್ರಮ: ಪಟ್ಟಣದಲ್ಲಿ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆಯಡಿಯಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ. ಕರ್ಕಾ ನೀರು ಸಂಸ್ಕರಣಾ ಘಟಕ ಮತ್ತು ದಾಂಡೇಲಿ ಜಾಕ್​ವೆಲ್ ಬಳಿ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಹೆಸ್ಕಾಂಗೆ ಸೂಚಿಸಲಾಗಿದೆ. ಮಳೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿನ ಎಲ್ಲಾ ಚರಂಡಿಗಳನ್ನು ಸ್ವಚ್ಛಗೊಳಿಸಲು ಪುರಸಭೆಗೆ ತಿಳಿಸಲಾಗಿದೆ. ಲಾಕ್ ಡೌನ್​ದಿಂದ ಬ್ಯಾಂಕ್​ಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿರುವುದರಿಂದ ಹಿರಿಯ ನಾಗರಿಕರಿಗೆ ಪ್ರತ್ಯೇಕ ಕೌಂಟರ್ ಆರಂಭಿಸಲು ಸಂಬಂಧ ಪಟ್ಟವರಿಗೆ ತಿಳಿಸಿದ್ದೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts