More

    ರಾಜ್ಯದಲ್ಲಿ ಒಂದು ಕೋಟಿ ಸದಸ್ಯತ್ವ ಗುರಿ, ಮಾಜಿ ಸಿಎಂ ಎಂ. ವೀರಪ್ಪಮೊಯ್ಲಿ ಮಾಹಿತಿ, ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ

    ದೇವನಹಳ್ಳಿ: ಪಕ್ಷದಲ್ಲಿ ಗುರಿತಿಸಿಕೊಳ್ಳದವರಿಗೂ ಸದಸ್ಯತ್ವ ನೀಡಿ ಮುಂಬರುವ ಜಿಪಂ, ತಾಪಂ ಮತ್ತು ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಭದ್ರ ಬುನಾದಿ ಹಾಕಲಿದೆ ಎಂದು ಮಾಜಿ ಸಿಎಂ ಎ.ವೀರಪ್ಪಮೊಯ್ಲಿ ಹೇಳಿದರು.

    ನಗರದ ಚಿಕ್ಕಸಣ್ಣೆ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕೆಪಿಸಿಸಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಡಿಜಿಟಲ್ ಸದಸ್ಯತ್ವ ಅಭಿಯಾನ ನೋಂದಣಿ ಕಾರ್ಯಾಗಾರದಲ್ಲಿ ಮಾತನಾಡಿದರು.

    ರಾಜ್ಯದಲ್ಲಿ ಒಂದು ಕೋಟಿ ಸದಸ್ಯತ್ವ ಗುರಿ ಹೊಂದಲಾಗಿದ್ದು, ಜಿಲ್ಲೆಯಲ್ಲಿಯೂ ಹೆಚ್ಚಿನ ಸದಸ್ಯತ್ವ ನೋಂದಣಿ ಮಾಡಬೇಕು.ಬಿಜೆಪಿ ವಂಚನೆ, ತಂತ್ರಗಾರಿಕೆಯಿಂದ ಆಡಳಿತ ಮಾಡುತ್ತಿದೆ. ಮುಂದೆ ಅದಕ್ಕೆ ಅವಕಾಶ ನೀಡಬಾರದು ಎಂದರು.

    ಮಾಜಿ ಶಾಸಕ ವೆಂಕಟಸ್ವಾಮಿ ಮಾತನಾಡಿ, ಸ್ವಾತಂತ್ರ್ಯ ಆಂದೋಲನಕ್ಕೆ ಹೆಸರಾದ ಪಕ್ಷ ಕಾಂಗ್ರೆಸ್. ಎಲ್ಲರೂ ಒಗ್ಗಟ್ಟಾಗಿ ಮನೆಮನೆಗೂ ಹೋಗಿ ಮನೆವೊಲಿಸಿ ಕಾಂಗ್ರೆಸ್ ಗೆಲ್ಲಿಸುವುದು ನಮ್ಮ ಗುರಿಯಾಗಬೇಕು ಎಂದರು.

    ಎಂಎಲ್‌ಸಿ ಎಸ್.ರವಿ ಮಾತನಾಡಿ, ನಮ್ಮನಮ್ಮಲ್ಲಿನ ಆಂತರಿಕ ಭಿನ್ನಮತ, ಕಚ್ಚಾಟ ಪ್ರದರ್ಶಿಸುವ ಸಮಯ ಇದಲ್ಲ. ಗ್ರಾಮಾಂತರ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲೇಬೇಕು. ಆ ನಿಟ್ಟಿನಲ್ಲಿ ಸದಸ್ಯತ್ವ ನೋಂದಣಿ ಹೆಚ್ಚಳವಾಗಬೇಕು ಎಂದರು.

    ಜಿಲ್ಲಾ ಅಧ್ಯಕ್ಷ ಮುನಿಶಾಮಣ್ಣ ಮಾತನಾಡಿ, ಹೊಸಕೋಟೆಯಲ್ಲಿ ಮೂಲ, ವಲಸೆ ಕಾಂಗ್ರೆಸ್ಸಿಗರೆಂದೇನಿಲ್ಲ. ಈಗಿನ ಶಾಸಕರನ್ನು 80 ಸಾವಿರ ಜನ ಬೆಂಬಲಿಸಿದ್ದಾರೆ. ತೆಗೆ ನಮ್ಮ ಬೆಂಬಲಕ್ಕೆ 40 ಸಾವಿರ ಜನ ಸೇರಿ ಒಟ್ಟು 1.20 ಲಕ್ಷ ಜನರೆಲ್ಲ ಒಂದೇ ಎಂದರು.

    ಕೆಪಿಸಿಸಿ ಕಾರ್ಯದರ್ಶಿ ಎಸಿ ಶ್ರೀನಿವಾಸ್, ಪುರಸಭೆ ಮಾಜಿ ಅಧ್ಯಕ್ಷ ಸಿ.ಜಗನ್ನಾಥ್, ಜಿಲ್ಲಾ ಉಸ್ತುವಾರಿಗಳಾದ ರಾಣಿ ಸತೀಶ್, ಮಹಿಳಾ ಅಧ್ಯಕ್ಷೆ ನಾಗಲಕ್ಷ್ಮೀ, ರೇವತಿ, ಮಾಜಿ ಶಾಸಕರಾದ ವೆಂಕಟಸ್ವಾಮಿ, ಮುನಿನರಸಿಂಹಯ್ಯ, ಜಿಲ್ಲಾಧ್ಯಕ್ಷ ಮುನಿಶಾಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಉಪಾಧ್ಯಕ್ಷ ದ್ಯಾವರಹಳ್ಳಿ ಶಾಂತಕುಮಾರ, ಕೆಪಿಸಿಸಿ ಸದಸ್ಯರಾದ ಎ.ಚಿನ್ನಪ್ಪ, ಚೇತನಗೌಡ, ಎಸ್.ಆರ್.ರವಿ, ಜಿಪಂ ಮಾಜಿ ಸದಸ್ಯರಾದ ಅನಂತಕುಮಾರಿ, ಕೆ.ಸಿ. ಮಂಜುನಾಥ್, ಎಸ್.ಪಿ. ಮುನಿರಾಜ್ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts