More

    ರಾಗಶ್ರೀ ಪ್ರಶಸ್ತಿ ಪ್ರದಾನ 29ರಂದು

    ಹೊನ್ನಾವರ: ತಾಲೂಕಿನ ಹಡಿನಬಾಳದ ರಾಗಶ್ರೀ ಸಂಗೀತ ಸಂಸ್ಥೆಯ 18ನೇ ವಾರ್ಷಿಕೋತ್ಸವದ ಅಂಗವಾಗಿ ಸಂಗೀತ ಗುರು ದಿ.ಪಂ. ಜಿ.ಆರ್. ಭಟ್ ಬಾಳೇಗದ್ದೆ ಸಂಸ್ಮರಣೆ, ರಾಗಶ್ರೀ ಪ್ರಶಸ್ತಿ ಪ್ರದಾನ ಹಾಗೂ ಸಂಗೀತ ಕಾರ್ಯಕ್ರಮ ಫೆ. 29ರಂದು ಹಡಿನಬಾಳದ ಶ್ರೀ ವಿಷ್ಣುಮೂರ್ತಿ ದೇವಾ ಲಯದ ಆವಾರದಲ್ಲಿ ನಡೆಯಲಿದೆ.

    ಮಧ್ಯಾಹ್ನ 3 ಗಂಟೆಯಿಂದ ರಾಗಶ್ರೀ ಸಂಗೀತ ಮಹಾವಿದ್ಯಾಲಯದ ಸಂಗೀತ ಮತ್ತು ವಾದನ ವಿಭಾಗದ ವಿದ್ಯಾರ್ಥಿಗಳಿಂದ ಸಂಗೀತ, ಸಂಜೆ 6 ಗಂಟೆಗೆ ಅಂಕಣಕಾರ ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಪೊ›. ಮಲ್ಲೇಪುರಂ ಜಿ. ವೆಂಕಟೇಶ, ಡಾ. ಗಿರೀಶ್ಚಂದ್ರ, ಸಾಹಿತಿ ಡಾ. ಶ್ರೀಧರ ಬಳಗಾರ, ಯಕ್ಷಗಾನ ಕಲಾವಿದ ಶಿವಾನಂದ ಹೆಗಡೆ ಕೆರೆಮನೆ, ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿದ್ವಾಂಸ ಶಿವರಾಮ ಭಟ್ಟ ಆಲೇಖ, ಸಂಗೀತ ಕಲಾವಿದ ಡಾ. ಅಶೋಕ ಹುಗ್ಗಣ್ಣವರ ಪಾಲ್ಗೊಳ್ಳುವರು. ಮುಂಬೈನ ವಿದುಷಿ ದೇವಕಿ ಪಂಡಿತ ಅವರಿಗೆ ರಾಗಶ್ರೀ ರಾಷ್ಟ್ರೀಯ ಪ್ರಶಸ್ತಿ ಮತ್ತು ವಿನಾಯಕ ಭಟ್ಟ ಹರಡಸೆ ಅವರಿಗೆ ರಾಗಶ್ರೀ ಪುರಸ್ಕಾರ ಪ್ರದಾನ ಮಾಡಲಾಗುವುದು. ಪಂ. ಕೃಷ್ಣ ಅವಧಾನಿ ರ್ಕ, ಪಂ. ಎಸ್.ಎಂ. ಭಟ್ಟ ಕಟ್ಟಿಗೆ, ಡಾ. ಟಿ.ವಿ. ಭಟ್ಟ ಕವಲಕ್ಕಿ, ವೇ.ಮೂ. ರಾಮಾ ಭಟ್ಟ ಹಡಿನಬಾಳ, ಎಸ್​ಆರ್​ಎಲ್ ಸಮೂಹ ಸಂಸ್ಥೆಯ ವೆಂಕಟ್ರಮಣ ಹೆಗಡೆ ಕವಲಕ್ಕಿ ಅವರನ್ನು ಸನ್ಮಾನಿಸಲಾಗುವುದು.

    ವಿದುಷಿ ದೇವಕಿ ಪಂಡಿತ ಸಂಗೀತ ಪ್ರಸ್ತುತಪಡಿಸುವರು. ಪಂ. ವ್ಯಾಸಮೂರ್ತಿ ಕಟ್ಟಿ ಬೆಳಗಾವಿ ಸಂವಾದಿನಿ, ಪಂ. ಶಂತನು ಶುಕ್ಲ ತಬಲಾ ಸಾಥ್ ನೀಡಲಿದ್ದಾರೆ. ವಿದುಷಿ ಕಾವ್ಯಾ ಜಿ. ಹೆಗಡೆ ದಿಬ್ಬಣಗಲ್ ಅವರಿಂದ ಭರತನಾಟ್ಯ ಮತ್ತು ಪ್ರಸನ್ನ ಆರ್. ಹೆಗಡೆ ಕಪ್ಪೆಕೇರಿ ಅವರಿಂದ ಕಿರು ಯಕ್ಷಗಾನ ಹಾಗೂ ಮಾಗದ ವಧೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ರಾಗಶ್ರೀ ಅಧ್ಯಕ್ಷ ವಿ. ಶಿವಾನಂದ ಭಟ್ಟ ಹಡಿನಬಾಳ ಮತ್ತು ಕಾರ್ಯದರ್ಶಿ ವಿದ್ವಾನ ಎನ್.ಜಿ. ಹೆಗಡೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts