More

    ರಸ್ತೆ ವಿಸ್ತರಣೆಗೆ ಸಾವಿರಕ್ಕೂ ಅಧಿಕ ಮರಗಳ ಬಲಿ

    ಶಿರಹಟ್ಟಿ: ಗದಗ-ಹೊನ್ನಳ್ಳಿ ರಸ್ತೆ ವಿಸ್ತರಣೆಗಾಗಿ ಸಾವಿರಕ್ಕೂ ಅಧಿಕ ವಿವಿಧ ಜಾತಿಯ ಮರಗಳನ್ನು ಬಲಿಕೊಡಲಾಗಿದೆ.

    ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮ (ಕೆ-ಶಿಪ್) ಅಡಿ ಗದಗ-ಹೊನ್ನಳ್ಳಿ ರಸ್ತೆ ವಿಸ್ತರಣೆ ಕಾಮಗಾರಿ ಆರಂಭಿಸುವ ಸಂಬಂಧ ಶಿರಹಟ್ಟಿ-ಬೆಳ್ಳಟ್ಟಿ ರಸ್ತೆ ಬದಿಯ ಮರಗಳನ್ನು ತೆರವುಗೊಳಿಸಲಾಗಿದೆ. ಪರಿಸರ ಉಳಿಸಿ ಬೆಳೆಸುವ ಅರಣ್ಯ ಇಲಾಖೆಯೇ ಮರ ಕಡಿಯಲು ಸಮ್ಮತಿಸಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

    ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ, ರಸ್ತೆ ವಿಸ್ತರಣೆಗೆ ಮರಗಳನ್ನು ಕಡಿಯಲು ಸರ್ಕಾರದ ಆದೇಶ ಇರುವುದರಿಂದ ನಾವೇನು ಮಾಡಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸುತ್ತಾರೆ.

    ರಸ್ತೆ ವಿಸ್ತರಣೆ, ನೀರು, ವಿದ್ಯುಚ್ಛಕ್ತಿ ಪೂರೈಕೆ ಯೋಜನೆಗಳಿಗೆ ಅಗತ್ಯವಿದ್ದಲ್ಲಿ ಮರಗಳನ್ನು ಕಡಿಯಬಹುದಾಗಿದೆ. ಅದೇ ರೀತಿ ಗದಗ-ಹೊನ್ನಳ್ಳಿ ರಸ್ತೆ ವಿಸ್ತರಣೆಗಾಗಿ ಅಗತ್ಯವಿದ್ದಲ್ಲಿ ಮಾತ್ರ ಮರಗಳನ್ನು ಕಡಿಯಲಾಗುತ್ತಿದೆ. ಅವುಗಳನ್ನು ಅರಣ್ಯ ಇಲಾಖೆಯಿಂದ ಕೆ-ಶಿಪ್ ಖರೀದಿಸಿದೆ. ಇಲಾಖೆಗೆ ಸಂದಾಯವಾಗುವ ಆ ಹಣದಲ್ಲಿ ರಸ್ತೆ ನಿರ್ವಣದ ನಂತರ ಒಂದು ಮರದ ಬದಲು ಹತ್ತು ಮರಗಳನ್ನು ಎರಡು ಬದಿಯಲ್ಲಿ ನೆಟ್ಟು ಬೆಳೆಸಲಾಗುತ್ತದೆ. ಈ ಬಗ್ಗೆ ಆತಂಕಪಡಬೇಕಿಲ್ಲ.

    | ಸೂರ್ಯಸೇನ ಡಿಎಫ್​ಒ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts