More

    ರಸ್ತೆ ಮೇಲೆ ಒಳಚರಂಡಿ ನೀರು

    ಹುಬ್ಬಳ್ಳಿ: ದೇಶಪಾಂಡೆನಗರ ಬ್ಯಾಹಟ್ಟಿ ಪ್ಲಾಟ್ ರಸ್ತೆಯಲ್ಲಿ ನಿತ್ಯವೂ ಒಳಚರಂಡಿ ನೀರು ಹರಿಯುತ್ತಿದ್ದು ಅಸಹ್ಯಕರ ವಾತಾವರಣ ಸೃಷ್ಟಿಸಿದೆ.

    ಟಿ.ಬಿ. ರಸ್ತೆಯಿಂದ ಬಿಜೆಪಿ ಕಚೇರಿಗೆ ತೆರಳುವ ಮಾರ್ಗದಲ್ಲಿನ ಬ್ಯಾಹಟ್ಟಿ ಪ್ಲಾಟ್ ರಾಧಿಕಾ-ಬಿ ಅಪಾರ್ಟ್ ಮೆಂಟ್ ಬಳಿ ರಸ್ತೆ ತಿರುವಿನಲ್ಲಿ ಒಳಚರಂಡಿ ಬ್ಲಾಕ್ ಆಗಿದೆ. ಮಲೀನ ನೀರು ರಸ್ತೆಯ ಮೇಲೆ ನಿರಂತರ ಹರಿಯುತ್ತಿದೆ. ಇದು ಜನನಿಬಿಡ ಪ್ರದೇಶ. ದಿನವಿಡಿ ಸಾವಿರಾರು ಜನರು, ವಾಹನ ಸವಾರರು ಓಡಾಡುತ್ತಾರೆ. ಮಲಿನ ನೀರು ತುಳಿದುಕೊಂಡೇ ಮುಂದೆ ಸಾಗಬೇಕಿದೆ.

    ಇದು ಕಳೆದ 2-3 ವರ್ಷಗಳ ಸಮಸ್ಯೆ. ಮೊದಲು 15-20 ದಿನಕ್ಕೊಮ್ಮೆ ಹೀಗೆ ಆಗುತ್ತಿದ್ದವು. ಈಗ ಜನವಸತಿ, ವಾಣಿಜ್ಯ ಮಳಿಗೆಗಳ ಸಂಖ್ಯೆ ಹೆಚ್ಚಿರುವುದರಿಂದ ನಿತ್ಯವೂ ಒಳಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ.

    ‘ನಿತ್ಯವೂ ಇದೇ ಸಮಸ್ಯೆ. ದೂರು ನೀಡಿದಾಗ ಪಾಲಿಕೆ ಸಿಬ್ಬಂದಿ ಬಂದು ಚೇಂಬರ್ ಓಪನ್ ಮಾಡಿ ಸರಿಪಡಿಸಿ ಹೋಗುತ್ತಾರೆ. ಆದಾದ ಕೆಲವೇ ಗಂಟೆಗಳಲ್ಲಿ ಮತ್ತೆ ರಸ್ತೆಯ ಮೇಲೆ ಒಳಚರಂಡಿ ನೀರು ಹರಿಯುತ್ತದೆ. ನಮಗಂತೂ ದೂರು ನೀಡಿ ಸಾಕಾಗಿ ಹೋಗಿದೆ. ಎರಡು ಚೇಂಬರ್​ಗಳ ನಡುವೆ ಬ್ಲಾಕ್ ಆಗಿದೆ. ಹೊಸದಾಗಿ ಕೊಳವೆ ಮಾರ್ಗ ಹಾಕಿದ್ರೆ ಸರಿಯಾಗುತ್ತೆ. ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಬೇಕು’ ಎಂದು ಸ್ಥಳೀಯರಾದ ರಾಧಿಕಾ ಅಪಾರ್ಟ್​ವೆುಂಟ್ ನಿವಾಸಿಗಳ ಸಂಘದ ಕಾರ್ಯದರ್ಶಿ ವಿಠ್ಠಲ ಕುಲಕರ್ಣಿ ಆಗ್ರಹಿಸಿದ್ದಾರೆ.

    ರಾಧಿಕಾ-ಬಿ ಅಪಾರ್ಟ್​ವೆುಂಟ್​ನ ನೆಲಮಹಡಿ ಯಲ್ಲಿರುವ ಮನೆಯೊಂದರ ಒಳಗೆ ಒಳಚರಂಡಿ ನೀರು ರಿವರ್ಸ್ ಬಂದಿದ್ದರಿಂದ ನಿವಾಸಿಗಳು ಮನೆ ಖಾಲಿ ಮಾಡಿದ್ದಾರೆ. ಕೆಲವು ತಿಂಗಳಿಂದ ಈಗ ಅಲ್ಲಿ ಯಾರೂ ವಾಸ್ತವ್ಯ ಮಾಡಿಲ್ಲ. ಸುತ್ತಮುತ್ತಲಿನ ಪರಿಸರ ಗಬ್ಬು ವಾಸನೆ ಹರಡಿದೆ. ಗಟಾರ, ತಗ್ಗು ಪ್ರದೇಶದಲ್ಲಿ ಕೊಳಚೆ ನೀರು ಸಂಗ್ರಹವಾಗಿ ಕೆರೆ ನಿರ್ವಣವಾಗಿದೆ. ರೋಗ ರುಜಿನಗಳ ತಾಣವಾಗಿದೆ. ಪಾಲಿಕೆಯವರು ತಾತ್ಕಾಲಿಕ ಕೆಲಸ ಮಾಡುವುದನ್ನು ಬಿಟ್ಟು ಶಾಶ್ವತ ಕಾಮಗಾರಿ ಕೈಗೊಳ್ಳಬೇಕಿದೆ.

    ಗುತ್ತಿಗೆದಾರರ ಗಮನಕ್ಕೆ ತಂದಿದ್ದೇವೆ. ದೇಶಪಾಂಡೆನಗರ ಬ್ಯಾಹಟ್ಟಿ ಪ್ಲಾಟ್​ನಲ್ಲಿ ಒಳಚರಂಡಿ ನೀರು ಸರಾಗವಾಗಿ ಹರಿದು ಹೋಗಲು ಶೀಘ್ರದಲ್ಲೇ ಶಾಶ್ವತ ಕಾಮಗಾರಿ ಕೈಗೊಳ್ಳಲಿದ್ದೇವೆ.

    | ಅನಂದಕುಮಾರ ಜಳಕಿ ಪಾಲಿಕೆ ವಲಯ

    ಕಚೇರಿ (ನಂ.5) ಸಹಾಯಕ ಆಯುಕ್ತ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts