More

    ರಸ್ತೆ ಮರು ರಿಪೇರಿ ಆರಂಭ

    ಹಳಿಯಾಳ: ಖಾನಾಪುರ- ತಾಳಗುಪ್ಪ ರಾಜ್ಯ ಹೆದ್ದಾರಿಯಲ್ಲಿ ಬರುವ ಕೆಸರೊಳ್ಳಿ- ತೇರಗಾಂವ ಗ್ರಾಮದ ಮಧ್ಯೆ ಇತ್ತೀಚೆಗೆ ಡಾಂಬರೀಕರಣ ಮಾಡಿರುವ ರಸ್ತೆಯನ್ನು ಮರು ದುರಸ್ತಿ ಮಾಡಲು ಶಾಸಕ ಆರ್.ವಿ. ದೇಶಪಾಂಡೆ ಆದೇಶಿಸಿದ್ದಾರೆ.

    ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ತಾಲೂಕಿನಲ್ಲಿ ಆದ ಆತಿವೃಷ್ಟಿಯಿಂದಾಗಿ ಖಾನಾಪುರ- ತಾಳಗುಪ್ಪ ರಾಜ್ಯ ಹೆದ್ದಾರಿಯಲ್ಲಿ ತೇರಗಾಂವ ಮತ್ತು ಕೆಸರೊಳ್ಳಿ ಬಳಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದವು. ಈ ರಸ್ತೆ ದುರಸ್ತಿಗೆ ಶಾಸಕ ಆರ್.ವಿ. ದೇಶಪಾಂಡೆ ಅವರು 5 ಕೋ.ಟಿ ಅನುದಾನ ಮಂಜೂರು ಮಾಡಿದ್ದರು. ಈ ಹಿನ್ನೆಲೆಯಲ್ಲಿ ತೇರಗಾಂವ ಗ್ರಾಮದಿಂದ ಗುತ್ತಿಗೆರೆ ಕೆರೆ ಹಾಗೂ ಪಟ್ಟಣದ ಕೆ.ಎಲ್.ಎಸ್. ಪಿಯು ಕಾಲೇಜ್ ಕ್ರಾಸ್​ನಿಂದ ಕೆಸರೊಳ್ಳಿವರೆಗೆ 6.5 ಕಿ.ಮೀ. ರಸ್ತೆ ದುರಸ್ತಿ ಮಾಡಲು 5 ಕೋ.ರೂ. ಟೆಂಡರ್ ಕರೆಯಲಾಗಿದೆ. ಅದು 4.20 ಕೋ.ರೂ.ಗೆ ಟೆಂಡರ್ ನಿಗದಿಯಾಯಿತು. ಈ ರಸ್ತೆ ಡಾಂಬರೀಕರಣ ಮಾಡಿದ ಕೆಲ ದಿನಗಳಲ್ಲಿಯೇ ರಸ್ತೆಯ ಅಂಚಿನಲ್ಲಿ ಡಾಂಬರು ಕಿತ್ತು ಹೋಗಲಾರಂಭಿಸಿತು. ಇದರಿಂದ ತಾಲೂಕಿನ ಜನರು ಶಾಸಕ ದೇಶಪಾಂಡೆ ಅವರಿಗೆ ರಸ್ತೆಯ ಗುಣಮಟ್ಟದ ಬಗ್ಗೆ ದೂರು ನೀಡಿದ್ದರು. ಅದಕ್ಕೆ ತಕ್ಷಣ ಸ್ಪಂದಿಸಿದ ಶಾಸಕ ದೇಶಪಾಂಡೆ ರಸ್ತೆ ದುರಸ್ತಿ ಮಾಡದ ಹೊರತು ಬಿಲ್ ಮಾಡಬಾರದು ಎಂದು ಆದೇಶಿದ್ದರು. ಈ ಹಿನ್ನೆಲೆಯಲ್ಲಿ ಹಳಿಯಾಳ ಲೋಕೋಪಯೋಗಿ ಇಲಾಖೆಯು ಗುತ್ತಿಗೆದಾರನಿಗೆ ನೋಟಿಸ್ ನೀಡಿ ರಸ್ತೆ ದುರಸ್ತಿ ಮಾಡಲು ಆದೇಶಿಸಿತು. ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿರುವ ಹಳಿಯಾಳ ಲೋಕೋಪಯೋಗಿ ಎಇಇ ಆರ್.ಎಚ್. ಕುಲಕರ್ಣಿ, ಮಳೆ ನೀರು ಸರಾಗವಾಗಿ ಚರಂಡಿಗೆ ಹರಿದು ಹೋಗದೇ ರಸ್ತೆ ಅಂಚಿನಲ್ಲಿಯೇ ಇಂಗುತ್ತಿತ್ತು. ಇದರಿಂದ ಡಾಂಬರೀಕರಣ ಮಾಡಿದ ರಸ್ತೆಯ ಅಂಚು ಕಿತ್ತು ಹೋಗುತ್ತಿದೆ. ಈಗಾಗಲೇ ಗುತ್ತಿಗೆದಾರನಿಗೆ ನೋಟಿಸ್ ನೀಡಲಾಗಿದೆ. ಡಾಂಬರು ಕಿತ್ತು ಹೋಗಿರುವ ರಸ್ತೆಯ ಅಂಚನ್ನು ಸಂಪೂರ್ಣ ದುರಸ್ತಿ ಮಾಡಿ ಕೊಡುವುದಾಗಿ ತಿಳಿಸಿದ್ದಾರೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts