More

    ರಸ್ತೆ ಮಧ್ಯೆಯೇ ತಡೆಗೋಡೆ ನಿರ್ಮಾಣ!

    ಚನ್ನಮ್ಮನ ಕಿತ್ತೂರು: ರಸ್ತೆ ನಿರ್ಮಾಣಕ್ಕೆ ನೂರೆಂಟು ವಿಘ್ನ ಎದುರಾದರೂ ಉತ್ತಮ ಮಾರ್ಗ ನಿರ್ಮಿಸಲು ಸರ್ಕಾರ ಪ್ರಯತ್ನಿಸುತ್ತದೆ. ಆದರೆ, ನಿರ್ಮಾಣವಾದ ರಸ್ತೆ ಮಧ್ಯೆಯೇ ತಡೆಗೋಡೆ ಕಟ್ಟಿರುವ ಘಟನೆ ಚನ್ನಮ್ಮ ಕಿತ್ತೂರು ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

    ಕಿತ್ತೂರು ಪಟ್ಟಣದ ಗದ್ದಿ ಓಣಿಯಿಂದ ಗುರುವಾರಪೇಟೆವರೆಗೆ ಸುಭದ್ರವಾದ ಸಿಸಿ ರಸ್ತೆ ನಿರ್ಮಿಸಲಾಗಿದೆ. ಆದರೆ, ಈ ರಸ್ತೆಯಲ್ಲಿ ಕೇವಲ ಒಬ್ಬರು ದಾಟುವಷ್ಟೇ ಜಾಗ ಬಿಟ್ಟು ಅಡ್ಡ ಗೋಡೆ ಕಟ್ಟಿ ಸಂಪೂರ್ಣವಾಗಿ ರಸ್ತೆ ಮುಚ್ಚಿದ್ದಾರೆ. ಸರ್ಕಾರಿ ರಸ್ತೆ ಅಂದಮೇಲೆ ಅದು ಸಾರ್ವಜನಿಕ ಸ್ವತ್ತು. ಆದರೆ, ರಸ್ತೆ ಮಧ್ಯೆಯೇ ಗೋಡೆ ಕಟ್ಟಿ ಯಾವ ವಾಹನವೂ ದಾಟದ ಹಾಗೆ ಬಂದ್ ಮಾಡಿದ್ದಾರೆ. ಆಸ್ಪತ್ರೆ, ಶಾಲೆ, ದೇವಸ್ಥಾನ, ಹಳ್ಳಿಗೆ ತೆರಳಲು ಇರುವ ಸರಳ ಮಾರ್ಗವನ್ನು ಬಂದ್ ಮಾಡಿದ್ದರಿಂದ ಸಾರ್ವಜನಿಕರು ರಸ್ತೆ ಇದ್ದರೂ ಪರದಾಡುವಂಥ ಸ್ಥಿತಿ ಬಂದೊದಗಿದೆ. ರಸ್ತೆ ಇರುವುದೇ ಸಾರ್ವಜನಿಕರ ಸಂಚಾರಕ್ಕೆ. ಆದರೆ, ಜನರಿಗಾಗಿ ನಿರ್ಮಿಸಿರುವ ರಸ್ತೆಯನ್ನು ಮುಚ್ಚಿರುವುದು ಎಷ್ಟು ಸರಿ ಎಂದು ಪ್ರಜ್ಞಾವಂತರು ಪ್ರಶ್ನಿಸಿದ್ದಾರೆ.

    ಅಧಿಕಾರಿಗಳು ಗಪ್‌ಚುಪ್: ಸರ್ಕಾರಿ ರಸ್ತೆ ಅಗೆಯಬೇಕಾದರೆ ಪರವಾನಗಿ ಪಡೆಯಬೇಕು. ಆದರೆ, ಈ ರಸ್ತೆಯನ್ನು ಗೋಡೆ ಕಟ್ಟಿ ವಾಹನ ಸಂಚಾರವನ್ನೇ ತಡೆಯಲಾಗಿದೆ. ಆದರೂ ಅಧಿಕಾರಿಗಳು ಸುಮ್ಮನಾಗಿರುವುದು ಏಕೆ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.

    ಅಧಿಕಾರಿಗಳು ಪ್ರಭಾವಿಗಳ ಒತ್ತಡದಿಂದ ಸುಮ್ಮನಿರಬಹುದೇ ಎಂಬ ಅನುಮಾನವನ್ನೂ ಜನರು ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಸಮಸ್ಯೆ ಸರಿ ಮಾಡಬೇಕು. ಅಕ್ರಮವಾಗಿ ಕಟ್ಟಿರುವ ಗೋಡೆ ತೆರವುಗೊಳಿಸಿ ಸಾರ್ವಜನಿಕರಿಗೆ ಸುಗಮವಾಗಿ ಸಂಚಾರಕ್ಕೆ

    ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ರಸ್ತೆ ಮಧ್ಯೆ ಗೋಡೆ ಕಟ್ಟಿರುವ ವಿಚಾರವನ್ನು ಸಾರ್ವಜನಿಕರು ಗಮನಕ್ಕೆ ತಂದಿದ್ದಾರೆ. ಆದಷ್ಟು ಬೇಗ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ.
    | ಪ್ರಕಾಶ ಮಠದ ಪಪಂ ಮುಖ್ಯಾಧಿಕಾರಿ, ಕಿತ್ತೂರು

    ರಸ್ತೆ ಮಧ್ಯೆ ಗೋಡೆ ನಿರ್ಮಿಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸ್ಥಳೀಯರ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ.
    | ಶಂಕರ ಬಡಿಗೇರ ಪಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts