More

    ರಸ್ತೆ ಬದಿ ತರಕಾರಿ ಮಾರಾಟಕ್ಕೆ ನಿರ್ಬಂಧ

    ರಾಯಚೂರು: ನಗರದ ಎಂ.ಈರಣ್ಣ ವೃತ್ತದಲ್ಲಿ ರಸ್ತೆ ಬದಿ ತರಕಾರಿ ಮಾರಾಟಗಾರರನ್ನು ಪೊಲೀಸರ ನೆರವಿನೊಂದಿಗೆ ನಗರಸಭೆ ಅಧಿಕಾರಿಗಳು ಭಾನುವಾರ ತೆರವುಗೊಳಿಸಿದರು.

    ಕರೊನಾ ಸಂದರ್ಭದಲ್ಲಿ ಎಂ.ಈರಣ್ಣ ವೃತ್ತದಲ್ಲಿ ತರಕಾರಿ ಮಾರಾಟಕ್ಕೆ ತಾತ್ಕಾಲಿಕವಾಗಿ ಅವಕಾಶ ನೀಡಲಾಗಿತ್ತು. ಮಾರಾಟ ಮುಂದುವರಿಸಿದ್ದಕ್ಕೆ ತರಕಾರಿ ಮಾರಾಟಗಾರರ ಸಂಘ ವಿರೋಧ ವ್ಯಕ್ತಪಡಿಸಿತ್ತು. ತರಕಾರಿ ಮಾರುಕಟ್ಟೆ ಹೊರತುಪಡಿಸಿ ಬೇರೆಡೆ ಮಾರಾಟಕ್ಕೆ ಅವಕಾಶ ನೀಡದಂತೆ ಒತ್ತಾಯಿಸಲಾಗಿತ್ತು.

    ನಗರಸಭೆ ಸಾಮಾನ್ಯ ಸಭೆಯಲ್ಲಿ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯೊಂದಿಗೆ ಇತರೆಡೆ ತರಕಾರಿ ಮಾರುಕಟ್ಟೆ ಆರಂಭಕ್ಕೆ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ಎಂ.ಈರಣ್ಣ ವೃತ್ತದಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ನೀಡಿದರೆ ವಾಹನ ಸಂಚಾರಕ್ಕೆ ತೊಂದರೆಯಾಗಲಿದೆ ಎಂದು ಎಸ್ಪಿಗೆ ಸಂಚಾರ ಠಾಣೆ ಪೊಲೀಸರು ವರದಿ ನೀಡಿದ್ದರು.

    ವರದಿ ಆಧರಿಸಿ ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿ ಚಂದ್ರಶೇಖರ ನಾಯಕ ಎಂ.ಈರಣ್ಣ ವೃತ್ತದಲ್ಲಿ ತರಕಾರಿ ಮಾರಾಟ ನಿರ್ಬಂಧಿಸಿ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ನಗರಸಭೆ ಪ್ರಭಾರ ಪೌರಾಯುಕ್ತ ಮಹೆಬೂಬ್ ಜಿಲಾನಿ ಪೊಲೀಸರ ನೆರವಿನೊಂದಿಗೆ ಬೆಳಗ್ಗೆ ತರಕಾರಿ ವ್ಯಾಪಾರಸ್ಥರನ್ನು ತೆರವುಗೊಳಿಸಿದರು.

    ಇದನ್ನೂ ಓದಿ: ಗುಡ್ಡ ಕುಸಿದು ಈ ಎರಡೂ ರಸ್ತೆಗಳು ಬಂದ್!!

    ನಗರಸಭೆ ಮಾಜಿ ಸದಸ್ಯ ಹರೀಶ ನಾಡಗೌಡ ಮತ್ತು ಮುಖಂಡ ರವೀಂದ್ರ ಜಲ್ದಾರ್ ಸ್ಥಳಕ್ಕೆ ಆಗಮಿಸಿ ತರಕಾರಿ ಮಾರಾಟ ನಿರ್ಬಂಧಕ್ಕೆ ವಿರೋಧಿ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದಾಗ ವಾಗ್ವಾದ ನಡೆಯಿತು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts