More

    ಗುಡ್ಡ ಕುಸಿದು ಈ ಎರಡೂ ರಸ್ತೆಗಳು ಬಂದ್!!

    ಶಿರಸಿ/ಸಿದ್ದಾಪುರ: ಭಾರಿ ಮಳೆಯಿಂದ ಉತ್ತರ ಕನ್ನಡದಲ್ಲಿ ಗುಡ್ಡ ಕುಸಿತವೂ ಶುರುವಾಗಿದೆ.

    ಭಾನುವಾರ ರಾತ್ರಿ ಶಿರಸಿ ತಾಲೂಕಿನ ರಾಗಿ ಹೊಸಳ್ಳಿ‌ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು, ಶಿರಸಿ- ಕುಮಟಾ ನಡುವಿನ ವಾಹನ ಸಂಚಾರ ಬಂದಾಗಿತ್ತು.

    ರಸ್ತೆಯ ಮೇಲೆ ಬಿದ್ದ ಮಣ್ಣನ್ನು ತೆರವು ಮಾಡಿ ಬೆಳಗಿನ ಹೊತ್ತಿಗೆ ಲಘು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹೊರತುಪಡಿಸಿ ಬೇರೆ ವಾಹನ ಸಂಚಾರಕ್ಕೆ‌ ಅವಕಾಶವಿಲ್ಲ. ಈಗ ಸಿದ್ದಾಪುರ- ಕುಮಟಾ ರಸ್ತೆಯಲ್ಲೂ ಕುಸಿತವಾಗಿದೆ.‌

    ಇದನ್ನೂ ಓದಿ: ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆ! ಎಲ್ಲೆಲ್ಲಿ ಶಾಲಾ ಕಾಲೇಜುಗಳಿಗೆ ರಜೆ?

    ಬಿಳಗಿ ಸಮೀಪ ಭಾರಿ ಪ್ರಮಾಣದಲ್ಲಿ ಮಣ್ಣು‌ ಬಿದ್ದಿದ್ದು, ವಾಹನ ಸಂಚಾರ ಸ್ಥಗಿತವಾಗಿತ್ತು. 7 ತಾರು ವಾಹನ ಸಂಚಾರ ಬಂದಾಗಿತ್ತು. ಸೋಮವಾರ ಬೆಳಗ್ಗೆ 11 ಗಂಟೆಯ ಹಿತ್ತಿಗೆ ಮಣ್ಣು ತೆರವು ಮಾಡಿ, ವಾಹನ ಸಂಚಾರ ಮತ್ತೆ ಪ್ರಾರಂಭವಾಗಿದೆ.

    ಎರಡೂ ರಸ್ತೆಗಳ ಎರಡೂ ದಿಕ್ಕಿನಲ್ಲಿ ನೂರಾರು ವಾಹನಗಳು ನಿಂತಿದ್ದವು.

    ಇಲ್ಲೂ ಸಮಸ್ಯೆ:

    ಉತ್ತರ ಕನ್ನಡ ಜಿಲ್ಲೆಯ ಕರಾವಳಿಯನ್ನು ಘಟ್ಟದ ಮೇಲಿನ ತಾಲೂಕುಗಳಿಗೆ ಬೆಸೆಯುವ ಅಣಶಿ, ಅರಬೈಲ್ ಘಟ್ಟದ ಪ್ರದೇಶದ ರಸ್ತೆಗಳಲ್ಲೂ ಗುಡ್ಡ ಕುಸಿಯುವ ಭೀತಿ ಇದೆ.‌ಯಾವುದಕ್ಕೂ ಸಂಚಾರಕ್ಕೆ ಹೊರಡುವ ಮೊದಲು ಒಮ್ಮೆ ಪರಿಶೀಲಿಕೊಳ್ಳುವುದು ಒಳಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts