More

    ರಸ್ತೆ ಬದಿಯಲ್ಲಿ ಆಸ್ಪತ್ರೆ ತ್ಯಾಜ್ಯ !

    ಹುಮನಾಬಾದ್: ಚಿಟಗುಪ್ಪ ತಾಲೂಕಿನ ವಿಠಲಪುರ ಗ್ರಾಮದ ಶಿವಾರದ ರಸ್ತೆ ಅಕ್ಕಪಕ್ಕದಲ್ಲಿ ಆಸ್ಪತ್ರೆಗಳಲ್ಲಿ ಕರೊನಾ ರೋಗಿಗಳಿಗೆ ಉಪಯೋಗಿಸಿದ ಮಾಸ್ಕ, ಹ್ಯಾಂಡ್ ಗ್ಲೌಜ್, ಪಿಪಿಇ ಕಿಟ್, ಸಿರಿಂಜ್, ಔಷಧಿ ಬಾಟಲ್ ಸೇರಿ ಇತರ ವೈದ್ಯಕೀಯ ಪರಿಕರ ತ್ಯಾಜ್ಯ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಎಸೆಯಲಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
    ಕರೊನಾದಿಂದ ಎಲ್ಲೆಡೆ ಭಯದ ಸ್ಥಿತಿ ನಿರ್ಮಾಣವಾಗಿದೆ. ಇಂಥ ಸಂದರ್ಭದಲ್ಲಿ ತೆಲಂಗಾಣದ ಗಡಿ ಭಾಗದ ವಿಠಲಪುರದಿಂದ ಮರಕುಂದ ಗ್ರಾಮದ ಕಡೆಗೆ ಹೋಗುವ ರಸ್ತೆಯ ಅಕ್ಕಪಕ್ಕದಲ್ಲಿ ವೈದ್ಯಕೀಯ ತ್ಯಾಜ್ಯಗಳನ್ನು ಹೊಂದಿರುವ ಮೂಟೆಗಳನ್ನು ತಂದು ಎಸೆದಿರುವುದು ಸಹಜವೇ ಜನರ ನೆಮ್ಮದಿ ಹಾಳು ಮಾಡಿದೆ.
    ವಿವಿಧೆಡೆ ಆಸ್ಪತ್ರೆಗಳಲ್ಲಿ ಬಳಸಿರುವ ತ್ಯಾಜ್ಯ ವಸ್ತುಗಳು ಇವಾಗಿವೆ. ಇವು ಇಲ್ಲಿ ಏಕೆ ತಂದು ಎಸೆಯಲಾಗಿದೆ ಎಂಬ ಪ್ರಶ್ನೆಗಳು ಜನರಿಗೆ ಕಾಡುತ್ತಿವೆ. ಇವು ಎಲ್ಲಿಂದ ತಂದು ಇಲ್ಲಿ ಹಾಕಲಾಗಿದೆ ಎಂಬ ಬಗ್ಗೆ ಖಚಿತವಾಗಿ ಮಾಹಿತಿ ಸಿಕ್ಕಿಲ್ಲ. ಆದರೆ ತೆಲಂಗಾಣದಿಂದ ವಾಹನಗಳಲ್ಲಿ ತಂದು ಇಲ್ಲಿ ಈ ತ್ಯಾಜ್ಯ ಎಸೆಯಲಾಗುತ್ತಿದೆ ಎನ್ನಲಾಗುತ್ತಿದೆ. ಸದ್ಯ ಮಳೆ ಬರರುತ್ತಿದ್ದು, ಈ ತ್ಯಾಜ್ಯ ವಿವಿಧೆಡೆ ಪಸರಿಸಿ ಸಾಂಕ್ರಮಿಕ ರೋಗ ಹರಡುವ ಅಪಾಯವಿದೆ. ಸಂಬಂಧಿತರು ಇತ್ತ ಚಿತ್ತ ಹರಿಸಿ, ತ್ಯಾಜ್ಯ ಎಸೆದವರಿಗೆ ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts