More

    ರಸ್ತೆ ಅಕ್ಕಪಕ್ಕ ಮದ್ಯದ ಪ್ಯಾಕೆಟ್​ಗಳು!

    ಸಿದ್ದಾಪುರ: ಪಟ್ಟಣದ ಬಾಲಿಕೊಪ್ಪ ಕ್ರಾಸ್​ನಿಂದ ವಡ್ಡಿನಗದ್ದೆ- ಐಗೋಡ- ಕಾನಗೋಡಿಗೆ ತೆರಳುವ ರಸ್ತೆಯ ಎರಡೂ ಕಡೆಗಳಲ್ಲಿ ಕುಡಿದು ಬಿಸಾಡಿದ ಬಾಟಲಿಗಳ ರಾಶಿ ಕಂಡುಬರುತ್ತಿದೆ.

    ಈ ರಸ್ತೆಯಲ್ಲಿ ಒಮ್ಮೆ ಸಂಚರಿಸಿದರೆ ಹಸಿರಿನಿಂದ ಕಂಗೊಳಿಸುವ ಪರಿಸರ ಕಂಡು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಎಲ್ಲ ಜಾತಿಯ ಗಿಡ- ಮರಗಳು ಇಲ್ಲಿ ಕಂಡು ಬರುತ್ತವೆ. ನಿತ್ಯ ಇಲ್ಲಿ ವಾಯು ವಿಹಾರಕ್ಕೆ ಪಟ್ಟಣದ ಜನತೆ ಬಂದು ಹೋಗುತ್ತಾರೆ. ಆದರೆ, ಇಲ್ಲಿ ಕುಡಿದು ಬಿಸಾಡಿದ ವಿವಿಧ ತರಹದ ಮದ್ಯ ಹಾಗೂ ಪ್ಲಾಸ್ಟಿಕ್ ಬಾಟಲಿಗಳು ಪರಿಸರ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.

    ಕರೊನಾ ಲಾಕ್​ಡೌನ್ ಸಡಿಲಿಕೆ ನಿಯಮಗಳ ಪ್ರಕಾರ ಪಟ್ಟಣದ ಮದ್ಯದಂಗಡಿಯಲ್ಲಿ ಕುಡಿಯಲು ಅವಕಾಶ ಇಲ್ಲ. ಹೀಗಾಗಿ ಪಾನಪ್ರಿಯರು ಇಲ್ಲಿನ ರಸ್ತೆಯ ಅಕ್ಕಪಕ್ಕದಲ್ಲಿ ಕುಳಿತು ಕುಡಿದು, ತಿಂದು ತ್ಯಾಜ್ಯವನ್ನು ಬಿಸಾಕುತ್ತಿದ್ದಾರೆ. ಇದರಿಂದ ನಿತ್ಯ ಸಂಜೆ ಸಮಯದಲ್ಲಿ ಒಂಟಿಯಾಗಿ ಓಡಾಡುವುದಕ್ಕೂ ಭಯ ಉಂಟಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

    ಇಂತಹ ಜಾಗದಲ್ಲಿ ಕುಳಿತು ಕುಡಿದು ಪರಿಸರ ನಾಶ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನಿತ್ಯ ಇಲ್ಲಿ ಯಾರು ಬರುತ್ತಾರೆ ಎಂದು ನೋಡಲಾಗುವುದು. ಪರಿಸರ ಉಳಿಸುವ ಜವಾಬ್ದಾರಿ ಎಲ್ಲರದ್ದಾಗಿದೆ. ಜನತೆ ಯಾವುದಕ್ಕೂ ಹೆದರುವುದು ಬೇಡ.

    | ಪ್ರಕಾಶ ಸಿಪಿಐ ಸಿದ್ದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts