More

    ರಮಿಲಾ ಪ್ರಶಾಂತಿ ಮಂದಿರದ ಉದ್ಘಾಟನೆ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಮಜೇಥಿಯಾ ಫೌಂಡೇಷನ್ ಹಾಗೂ ಕೆಸಿಟಿಆರ್​ಐ ಸಹಯೋಗದಲ್ಲಿ ನವನಗರದ ಕ್ಯಾನ್ಸರ್ ಆಸ್ಪತ್ರೆ ಆವರಣದಲ್ಲಿ ಉಚಿತ ಹಾಸ್ಪೈಸ್ -ಪ್ಯಾಲಿಯೇಟಿವ್ ಕೇಂದ್ರದ ರಮಿಲಾ ಪ್ರಶಾಂತಿ ಮಂದಿರ ಉದ್ಘಾಟನಾ ಸಮಾರಂಭವು ಏ. 6ರಂದು ಬೆಳಗ್ಗೆ 10.30ಕ್ಕೆ ಏರ್ಪಾಟಾಗಿದೆ ಎಂದು ಫೌಂಡೇಷನ್ ಟ್ರಸ್ಟಿ ಡಾ.ಕೆ. ರಮೇಶ ಬಾಬು ತಿಳಿಸಿದರು.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬೆಂಗಳೂರು ಕರುಣಾಶ್ರಯದ ಮ್ಯಾನೇಜಿಂಗ್ ಟ್ರಸ್ಟಿ ಗುರುಮಿತ್ ಸಿಂಗ್ ರಾಂಧವಾ, ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಕೆಸಿಟಿಆರ್​ಐ ಅಧ್ಯಕ್ಷ ಡಾ.ಬಿ.ಆರ್. ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಮಜೇಥಿಯಾ ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ ಅಧ್ಯಕ್ಷತೆ ವಹಿಸುವರು ಎಂದರು.

    ಟ್ರಸ್ಟಿ ಡಾ.ವಿ.ಬಿ. ನಿಟಾಲಿ ಮಾತನಾಡಿ, ಹಾಸ್ಪೈಸ್ ಮೂಲ ಉದ್ದೇಶ ಅನಾರೋಗ್ಯಪೀಡಿತ ಹಾಗೂ ಮಾನಸಿಕವಾಗಿ ನೊಂದ ರೋಗಿಗಳಿಗೆ ಆರೋಗ್ಯ ಸೌಲಭ್ಯ, ನೆಮ್ಮದಿ ಹಾಗೂ ಸಾಂತ್ವನ ನೀಡುವ ಕಾರ್ಯ ಮಾಡಲಿದೆ. ಕಳೆದ ವರ್ಷ ಹಾಸ್ಪೈಸ್ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಸುಮಾರು 30 ಜನರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಧ್ಯಾನ ಮಾಡಲು ರಮಿಲಾ ಪ್ರಶಾಂತಿ ಮಂದಿರ ಸಹ ಸ್ಥಾಪಿಸಲಾಗಿದೆ ಎಂದರು.

    ಧ್ಯಾನ, ಕೌನ್ಸೆಲಿಂಗ್, ಸ್ಪೂರ್ತಿ ಹಾಗೂ ಆಧ್ಯಾತ್ಮಿಕ, ಇನ್ನಿತರ ಮನೋರಂಜನಾ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ದಿನದ 24 ಗಂಟೆ ನರ್ಸಿಂಗ್ ಸೇವೆ, ಅನುಭವಿ ಉತ್ಸಾಹಿ ತಂಡ, ಸುಸಜ್ಜಿತ ಅಡುಗೆ ಮನೆ, ಆರ್​ಒ ನೀರಿನ ಘಟಕ, ಒಳಾಂಗಣ ಕ್ರೀಡಾಂಗಣ, ಸುಂದರವಾದ ಹಸಿರು ಪರಿಸರ, ವಿಶ್ರಾಂತಿ ಕೊಠಡಿಗಳು, ಅಂತಿಮ ಕಾರ್ಯಗಳಿಗೆ ಶವಾಗಾರ ನಿರ್ವಿುಸಲಾಗಿದೆ ಎಂದು ವಿವರಿಸಿದರು.

    ಹಾಸ್ಪೈಸ್ ಕೇಂದ್ರದ ವ್ಯವಸ್ಥಾಪಕ ಸಮಿತಿ ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಟ್ರಸ್ಟಿಗಳಾದ ಎಚ್.ಆರ್. ಪ್ರಹ್ಲಾದ ರಾವ್, ಸುನೀಲಕುಮಾರ, ಸಿಇಒ ಅಜಿತ್ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts