More

  ಆರ್ಯ ಈಡಿಗ ಸಮುದಾಯ ಸಂಘಟಿತವಾಗಬೇಕಿದೆ

  ಶ್ರೀರಂಗಪಟ್ಟಣ: ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಪ್ರಗತಿ ಕಾಣಲು ಬಿಡಿ ಬಿಡಿಯಾಗಿರುವ ಆರ್ಯ ಈಡಿಗ ಸಮುದಾಯ ಸಂಘಟನೆಯಾಗಬೇಕಿದೆ ಎಂದು ಮೈಸೂರಿನ ಆರ್ಯ ಈಡಿಗ ವಿದ್ಯಾರ್ಥಿನಿಲಯದ ಅಧ್ಯಕ್ಷ ಶ್ರೀಕಾಂತ್ ಹೇಳಿದರು.

  ಪಟ್ಟಣದ ಗೋವಿಂದಪ್ಪ ಬೀದಿಯ ರಾಮಮಂದಿರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಆರ್ಯ ಈಡಿಗ ತಾಲೂಕು ಸಂಘ ರಚನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

  ಸಮಾಜದಲ್ಲಿ ಬಹುತೇಕ ಎಲ್ಲ ಸಮುದಾಯಗಳು ಒಗ್ಗಟ್ಟಾಗಿ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿವೆ. ಆದರೆ, ಆರ್ಯ ಈಡಿಗ ಸಮುದಾಯ ಸಂಘಟಿತವಾಗಿಲ್ಲ. ಹೀಗಾಗಿ ಪ್ರತಿ ಜಿಲ್ಲೆ, ತಾಲೂಕು ಹಾಗೂ ಗ್ರಾಮೀಣ ಮಟ್ಟದಲ್ಲೂ ಒಕ್ಕೂಟ ರಚನೆಗೆ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.

  ಪದಾಧಿಕಾರಿಗಳ ಆಯ್ಕೆ: ತಾಲೂಕು ಆರ್ಯ ಈಡಿಗ ಸಂಘಕ್ಕೆ ಗೌರವ ಅಧ್ಯಕ್ಷರಾಗಿ ರೇವಣ್ಣ, ಅಧ್ಯಕ್ಷರಾಗಿ ಹುಲಿಕೆರೆ ಶ್ರೀನಿವಾಸ್, ಉಪಾಧ್ಯಕ್ಷ ಬೆಳಗೊಳ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಶ್ರೀರಂಗಪಟ್ಟಣ ವೆಂಕಟೇಶ್, ಸಹ ಕಾರ್ಯದರ್ಶಿ ರಾಘವೇಂದ್ರ, ಖಜಾಂಚಿ ರಾಜು, ಸಂಘಟನಾ ಕಾರ್ಯದರ್ಶಿ ರವಿ, ಗ್ರಾಮೀಣ ಸಂಘಟನಾ ಕಾರ್ಯದರ್ಶಿಗಳಾಗಿ ಕೃಷ್ಣಸ್ವಾಮಿ ಮತ್ತು ಉಮೇಶ್ ಅವರನ್ನು ಆಯ್ಕೆ ಮಾಡಲಾಯಿತು.

  ಮಂಡ್ಯ ಜಿಲ್ಲಾ ಆರ್ಯ ಈಡಿಗರ ಸಂಘದ ಉಪಾಧ್ಯಕ್ಷ ಅರುಣ್ ಕುಮಾರ್, ಮೈಸೂರಿನ ಯುವ ವೇದಿಕೆ ಅಧ್ಯಕ್ಷ ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಡಾ.ರಾಜು, ಮುಖಂಡರಾದ ಹುಲಿಕೆರೆ ಸಿದ್ದರಾಜಣ್ಣ, ಮುರಳಿ, ನಾರಾಯಣಪ್ಪ ಸಾದನಹಳ್ಳಿ, ಪುಟ್ಟಸ್ವಾಮಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts