More

    ಜಿಲ್ಲೆಯ ರೈತರ ನಾಲ್ಕು ವರ್ಷಗಳ ಬೇಡಿಕೆ ಈಡೇರಿಸಿದ ಮುಖ್ಯಮಂತ್ರಿ; ಜಿಲ್ಲೆಯ 9,204 ರೈತರ 16.52ಕೋಟಿ ರೂ. ಬೆಳೆವಿಮೆ ಬಾಕಿ ಮೊತ್ತ ಬಿಡುಗಡೆ

    ಹಾವೇರಿ: ಬಹು ವರ್ಷಗಳಿಂದ ತಾಂತ್ರಿಕ ಕಾರಣಗಳಿಗಾಗಿ ಬಾಕಿ ಉಳಿದಿದ್ದ ಜಿಲ್ಲೆಯ ರೈತರ ಬೆಳೆವಿಮೆ ಹಣ ಬಿಡುಗಡೆಯ ಬೇಡಿಕೆಯನ್ನು ಸಿಎಂ ಈಡೇರಿಸಿದ್ದು, ಜಿಲ್ಲೆಯ 9,204 ರೈತರಿಗೆ ಪಾವತಿಸಬೇಕಾದ ಬೆಳೆವಿಮೆ ಬಾಕಿ ಮೊತ್ತ 16,52,71,712 ರೂ. ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
    ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ಬೆಳೆವಿಮೆ ತುಂಬಿ, ಬೆಳೆ ಸಮೀಕ್ಷೆ ವಿವರಗಳು ಹೊಂದಾಣಿಕೆಯಾಗದ (ತಾಳೆಯಾಗದ) ಕಾರಣ 9,204 ರೈತರ 16,52,71,712 ರೂ. ಬಿಡುಗಡೆಯಾಗದೇ ಬಹುದಿನಗಳಿಂದ ನೆನೆಗುದಿಗೆ ಬಿದ್ದಿತ್ತು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೆಳೆವಿಮಾ ಕಂಪನಿಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಿ ಬಾಕಿ ಬೆಳೆವಿಮೆ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವುದರ ಮೂಲಕ ರೈತರ ಬಹುದಿನಗಳ ಬೇಡಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಂದಿಸಿದ್ದಾರೆ. ಬಿಡುಗಡೆಯಾದ ವಿಮಾ ಮೊತ್ತವನ್ನು ಸಂಬಂಧಪಟ್ಟ ರೈತರ ಬ್ಯಾಂಕ್ ಖಾತೆಗೆ ಕೂಡಲೇ ಜಮೆ ಮಾಡುವಂತೆ ಕೃಷಿ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.
    ತಾಲೂಕುವಾರು ವಿವರ…
    ಸವಣೂರ ತಾಲೂಕಿನ 1,307ರೈತರಿಗೆ 2,11,30,063ರೂ., ಶಿಗ್ಗಾಂವಿ ತಾಲೂಕಿನ 580 ರೈತರಿಗೆ 1,51,01,823ರೂ, ಹಾವೇರಿ ತಾಲೂಕಿನ 2,341 ರೈತರಿಗೆ 4,01,03,716ರೂ, ಹಾನಗಲ್ಲ ತಾಲೂಕಿನ 1,120 ರೈತರಿಗೆ 2,65,61,164ರೂ, ಬ್ಯಾಡಗಿ ತಾಲೂಕಿನ 1,788 ರೈತರಿಗೆ 4,18,18,746ರೂ, ಹಿರೇಕೆರೂರು ತಾಲೂಕಿನ 1,330 ರೈತರಿಗೆ 73,09,232ರೂ. ಹಾಗೂ ರಾಣೆಬೆನ್ನೂರ ತಾಲೂಕಿನ 738 ರೈತರಿಗೆ 1,32,46,712ರೂ. ಮೊತ್ತ ಬಿಡುಗಡೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts