More

    ರಂಜಾನ್​ಗೂ ವಿನಾಯಿತಿ ಇಲ್ಲ

    ಭಟ್ಕಳ: ಮೆ 3ರ ತನಕ ಭಟ್ಕಳದಲ್ಲಿ ನಿಯಮ ಸಡಿಲಿಕೆ ಮತ್ತು ರಂಜಾನ್​ಗೂ ವಿನಾಯಿತಿ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಹಿರಿಯ ಅಧಿಕರಿಗಳ ಸಭೆ ನಡೆಸಿ ಅವರು ಮಾತನಾಡಿದರು.

    ರಂಜಾನ್ ಹಬ್ಬಕ್ಕಾಗಿ ತಮಗೆ ದಿನದಲ್ಲಿ ಕನಿಷ್ಠ 2 ಗಂಟೆಯಾದರೂ ವಿನಾಯಿತಿ ನೀಡಬೇಕು ಎಂದು ತಂಜಿಂ ಸಂಸ್ಥೆ ನೀಡಿದ ಮನವಿಯನ್ನು ತಿರಸ್ಕರಿಸಿದ ಅವರು, ಮುಸ್ಲಿಂ ಮಾತ್ರವಲ್ಲ ಹಿಂದು, ಕ್ರಿಶ್ಚಿಯನ್, ಸಿಖ್ ಸೇರಿ ಯಾವುದೆ ಧರ್ಮಕ್ಕೂ ಸಾರ್ವಜನಿಕವಾಗಿ ಧಾರ್ವಿುಕ ಆಚರಣೆಗೆ ಅವಕಾಶವಿಲ್ಲ. ಮೇ 3ರ ವರೆಗೂ ನಿಯಮಗಳು ಜಾರಿಯಲ್ಲಿರಲಿದೆ. ನಂತರದ ದಿನಗಳಲ್ಲಿ ಜಿಲ್ಲೆಯ ಮತ್ತು ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿ ತೀರ್ಮಾನ ತಿಳಿಸಲಾಗುವುದು ಎಂದರು. ಏ.26, 27ರೊಳಗೆ ನಮ್ಮ ಉತ್ತರ ಕನ್ನಡ ಜಿಲ್ಲೆ ಕರೊನಾ ಮುಕ್ತವಾಗಲು ಎಲ್ಲ ಹೋರಾಟ ನಡೆಸುತ್ತಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದರು.

    ಡಿಸ್ಚಾರ್ಜ್ ಸಮರಿ ವಿತರಣೆ: ಭಟ್ಕಳದಲ್ಲಿ ಪತ್ತೆಯಾದ ಮೊದಲ 3 ಪ್ರಕರಣಗಳ ಸೋಂಕಿತರು ಗುಣಮುಖರಾಗಿ ಬಂದಿದ್ದು ಅವರಿಗೆ ಸಚಿವ ಹೆಬ್ಬಾರ ಅವರು ಡಿಸ್ಚಾರ್ಜ್ ಸಮರಿ ವಿತರಿಸಿ ಅಭಿನಂದಿಸಿದರು. ಮನೆಯಲ್ಲಿದ್ದು ಇತರರಲ್ಲೂ ಜಾಗೃತಿ ಮೂಡಿಸುವಂತೆ ಮನವಿ ಮಾಡಿದರು. ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ನೋಡಲ್ ಅಧಿಕಾರಿ ಡಾ. ಶರದ್ ನಾಯಕ, ವೈದ್ಯಾಧಿಕಾರಿ ಡಾ. ಸವಿತಾ ಕಾಮತ, ಟಿಎಚ್​ಒ ಡಾ. ಮೂರ್ತಿರಾಜ್ ಭಟ್, ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts