More

    ಯೂರಿಯಾಕ್ಕಾಗಿ ಮುಗಿಬಿದ್ದ ರೈತರು

    ಅಣ್ಣಿಗೇರಿ: ಪರಸ್ಪರ ಅಂತರ ಕಾಯ್ದುಕೊಳ್ಳದೆ ಪಟ್ಟಣದ ನವಲಗುಂದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಆವರಣದಲ್ಲಿ ಯೂರಿಯಾ ಗೊಬ್ಬರಕ್ಕಾಗಿ ಗುರುವಾರ ರೈತರು ಮುಗಿಬಿದ್ದಿದ್ದರು.

    ತಾಲೂಕಿನಾದ್ಯಂತ ಉತ್ತಮ ಮಳೆ ಸುರಿಯುತ್ತಿದ್ದು, ಬೆಳೆಗಳಿಗೆ ನೀಡಲು ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ಇದರಿಂದಾಗಿ ರೈತರು ಪರದಾಡುತ್ತಿದ್ದಾರೆ. ಯೂರಿಯಾಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಸಾಕಾಗುವಷ್ಟು ಪೂರೈಕೆ ಆಗುತ್ತಿಲ್ಲ.

    ಬುಧವಾರ ಗೊಬ್ಬರ ಬಂದಿದೆ ಎಂಬ ಸುದ್ದಿ ತಿಳಿದ ರೈತರು ಗುರುವಾರ ಬೆಳಗ್ಗೆ 6 ಗಂಟೆಗೇ ಪಟ್ಟಣಕ್ಕೆ ಆಗಮಿಸಿದ್ದರು. ತಹಸೀಲ್ದಾರ್ ಕೊಟ್ರೇಶ ಗಾಳಿ ಸ್ಥಳಕ್ಕೆ ಭೇಟಿ ನೀಡಿ ಬಂದಿರುವ ಗೊಬ್ಬರ ಪರಿಶೀಲಿಸಿದರು. 340 ಚೀಲ ಗೊಬ್ಬರ ಬಂದಿದ್ದರಿಂದ ಪ್ರತಿ ರೈತನಿಗೆ ಒಂದು ಚೀಲ ನೀಡಲು ಸೊಸೈಟಿ ಸಂಘದವರಿಗೆ ಸೂಚಿಸಿದರು.

    ತಾಲೂಕಿನಲ್ಲಿ ಮೆಣಸಿನಕಾಯಿ ಮತ್ತು ಬಿಟಿ ಹತ್ತಿಯನ್ನು ಹೆಚ್ಚಾಗಿ ಬೆಳೆಯಲಾಗಿದೆ. ಸದ್ಯ ಉತ್ತಮ ಮಳೆಯಾಗುತ್ತಿದ್ದರಿಂದ ರೋಗಬಾಧೆ ನಿಯಂತ್ರಣ ಮತ್ತು ಅಧಿಕ ಇಳುವರಿ ಪಡೆಯಲು ಯೂರಿಯಾ ಗೊಬ್ಬರದ ಅವಶ್ಯಕತೆ ಇದೆ. ಹೀಗಾಗಿ ಜನಪ್ರತಿನಿಧಿಗಳು, ಕೃಷಿ ಅಧಿಕಾರಿಗಳು ಮುತುವರ್ಜಿವಹಿಸಿ ರಸಗೊಬ್ಬರ ಪೂರೈಸಬೇಕು ಎಂಬುದು ರೈತರ ಒತ್ತಾಯವಾಗಿದೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts