More

    ಯುವಾ ಬ್ರಿಗೇಡ್ನಿಂದ ಸುಂದರಕಾಂಡ ಇಂದಿನಿಂದ

    ಹುಮನಾಬಾದ್: ಮಾಣಿಕನಗರದಲ್ಲಿ ಯುವಾ ಬ್ರಿಗೇಡ್ನಿಂದ ಸುಂದರಕಾಂಡ, ಸ್ವಾತಂತ್ರೃ ಶ್ರಾವಣ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು 13, 14 ಮತ್ತು 15ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಮೈಸೂರು ವಿಭಾಗದ ಸಂಚಾಲಕ ಚಂದ್ರಶೇಖರ ನಂಜನಗೂಡು ಹೇಳಿದರು.

    ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಶನಿವಾರ ಬೆಳಗ್ಗೆ 9.30ಕ್ಕೆ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಿಂದ ಥೇರ್ ಮೈದಾನದವರೆಗೆ ಭಾರತ ಮಾತೆಯ ಪಲ್ಲಕ್ಕಿ ಉತ್ಸವ ಹಾಗೂ ಕನ್ನಡ ತೇರು ಮೆರವಣಿಗೆ ನಡೆಯಲಿದೆ ಎಂದರು.

    ಥೇರ್ ಮೈದಾನದಲ್ಲಿ ಮಧ್ಯಾಹ್ನ 12ಕ್ಕೆ ನಡೆಯುವ ಸಭೆಯ ಸಾನ್ನಿಧ್ಯ ಸ್ಥಳೀಯ ಹಿರೇಮಠದ ರೇಣುಕಾ ವೀರಗಂಗಾಧರ ಶಿವಾಚಾರ್ಯರು, ಹಿರೇಹಡಗಲಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ವಹಿಸಲಿದ್ದಾರೆ. ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವತರ್ಿ ಸೂಲಿಬೆಲೆ ಭಾಷಣ ಮಾಡಲಿದ್ದಾರೆ. ಭಾನುವಾರ ಬ್ರಿಗೇಡ್ ಕಾರ್ಯಕರ್ತರು ಪಟ್ಟಣದ ಮನೆ ಮನೆಗೂ ಭೇಟಿ ನೀಡಿ ಪ್ಲಾಸ್ಟಿಕ್ ಭಿಕ್ಷೆ ಅಭಿಯಾನಕ್ಕೆ ಕರೆ ನೀಡಲಿದ್ದಾರೆ ಎಂದು ತಿಳಿಸಿದರು.

    15ರಂದು ಮಾಣಿಕಪ್ರಭು ದೇವಸ್ಥಾನದಿಂದ ಮಾಣಿಕ್ಯ ಸೌಧದವರೆಗೆ ಮೆರವಣಿಗೆ ಹಾಗೂ ವಿವಿಧ ಸಾಂಸ್ಕೃತಿಕ ಹಾಗೂ ಧಾಮರ್ಿಕ ಕಾರ್ಯಕ್ರಮ ಜರುಗಲಿವೆ. ಮಾಣಿಕಪ್ರಭು ಸಂಸ್ಥಾನದ ಶ್ರೀ ಡಾ.ಜ್ಞಾನರಾಜ ಪ್ರಭು, ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿ, ಕಾಶ್ಮೀರ ಪಂಡಿತ ಗಿಧರ್ಾರಿ ಲಾಲ್ ರೈನಾ, ಪತ್ರಕತರ್ೆ ಲಕ್ಷ್ಮೀ ರಾಜಕುಮಾರ, ಬಸವರಾಜ ಪಾಟೀಲ್ ಸೇಡಂ, ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವತರ್ಿ ಸೂಲಿಬೆಲೆ ಭಾಗವಹಿಸಲಿದ್ದಾರೆ ಎಂದರು.

    75ನೇ ಸ್ವಾತಂತೊ್ರೃತ್ಸವದ ಸಂಭ್ರಮವನ್ನು ಯುವಾ ಬ್ರಿಗೇಡ್ ಈ ಬಾರಿ ಜಯಸಿಂಹನಗರದಲ್ಲಿ (ಹುಮನಾಬಾದ್) ಆಚರಿಸುತ್ತಿದೆ. ಈ ಸಂಭ್ರಮಕ್ಕೆ 75 ವಾದ್ಯ ಮೇಳಗಳು, ಭಾರತ ಮಾತೆಯ ಮೆರವಣಗೆಯಲ್ಲಿ 75 ಪೂರ್ಣಕುಂಭಗಳು, 75 ಸೈನಿಕರು, ರೈತರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

    ದಕ್ಷಿಣ ರಾಜ್ಯ ಸಂಚಾಲಕ ಧರ್ಮ ಹೊನ್ನಾರಿ, ಉತ್ತರ ರಾಜ್ಯ ಸಂಚಾಲಕ ವರ್ಧಮಾನ ತ್ಯಾಗಿ, ವಿಜಯಪುರ ವಿಭಾಗೀಯ ಸಂಚಾಲಕ ಲಕ್ಷ್ಮೀಕಾಂತ ಹಿಂದೊಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts