More

    ಯುಎಸ್ ಓಪನ್ ಗ್ರಾಂಡ್ ಸ್ಲಾಂ: ಒಸಾಕಾ-ಅಜರೆಂಕಾ ನಡುವೆ ಪ್ರಶಸ್ತಿ ಕದನ 

    ನ್ಯೂಯಾರ್ಕ್: ತಾಯಿಯಾದ ಬಳಿಕ ಚೊಚ್ಚಲ ಗ್ರಾಂಡ್ ಸ್ಲಾಂ ಪ್ರಶಸ್ತಿ ಕನಸಿನಲ್ಲಿರುವ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಹಾಗೂ ಜಪಾನ್‌ನ 4ನೇ ಶ್ರೇಯಾಂಕಿತ ಆಟಗಾರ್ತಿ ನವೊಮಿ ಒಸಾಕಾ ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಸುತ್ತಿಗೇರಿದರು. ಮತ್ತೊಂದೆಡೆ, ತಾಯಿಯಾದ ಬಳಿಕ ಚೊಚ್ಚಲ ಗ್ರಾಂಡ್ ಸ್ಲಾಂ ಕನಸಿನಲ್ಲಿದ್ದ ಸ್ಥಳೀಯ ಸ್ಟಾರ್ ಆಟಗಾರ್ತಿ ಸೆರೇನಾ ವಿಲಿಯಮ್ಸ್ ನಿರಾಸೆ ಮುಂದುವರಿಸಿದರು. ಜತೆಗೆ 24ನೇ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಅವಕಾಶದಿಂದ ವಂಚಿತರಾದರು. ಕರೊನಾ ಕಾಲದಲ್ಲಿ ನಡೆಯುತ್ತಿರುವ ಮೊದಲ ಗ್ರಾಂಡ್ ಸ್ಲಾಂ ಟೂರ್ನಿಯ ಮೊದಲ ಮಹಿಳಾ ಚಾಂಪಿಯನ್‌ಪಟ್ಟ ಶನಿವಾರ ವೇದಿಕೆ ಸಜ್ಜಾಗಿದೆ.
    * ಅಮ್ಮಂದಿರ ಕದನ ಗೆದ್ದ ಅಜರೆಂಕಾ
    ಆರ್ಥರ್ ಆ್ಯಶೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಅಮ್ಮಂದಿರ ಕದನದಲ್ಲಿ ವಿಕ್ಟೋರಿಯಾ ಅಜರೆಂಕಾ 1-6, 6-3, 6-3 ಸೆಟ್‌ಗಳಿಂದ ಟೂರ್ನಿಯ 6 ಬಾರಿ ಚಾಂಪಿಯನ್ ಸೆರೇನಾ ಅವರನ್ನು ಮಣಿಸುವ ಮೂಲಕ 7 ವರ್ಷಗಳ ಬಳಿಕ ಗ್ರಾಂಡ್ ಸ್ಲಾಂ ಟೂರ್ನಿಯೊಂದಿಗೆ ೈನಲ್‌ಗೇರಿದ ಸಾಧನೆ ಮಾಡಿದರು. ಮೊದಲ ಸೆಟ್‌ನಲ್ಲಿ ಸೆರೇನಾಗೆ ಸುಲಭವಾಗಿ ಬಿಟ್ಟಕೊಟ್ಟ ಅಜರೆಂಕಾ, ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡುವ ಮೂಲಕ ಪಂದ್ಯದಲ್ಲಿ ಸಮಬಲ ಸಾಧಿಸಿದರು ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಕಾಲು ನೋವಿಗೆ ತುತ್ತಾದರು. ಬಳಿಕ ಪಂದ್ಯದಲ್ಲಿ ಪ್ರಭುತ್ವ ಸಾಧಿಸಿದ ಅಜರೆಂಕಾ ಸುಲಭ ಗೆಲುವಿನೊಂದಿಗೆ ಪ್ರಶಸ್ತಿ ಸುತ್ತಿಗೇರಿದರು. ಈ ಸೋಲಿನೊಂದಿಗೆ ಸೆರೇನಾ ತವರಿನಲ್ಲಿ 4ನೇ ಬಾರಿಗೆ ಸೆಮಿೈನಲ್‌ನಲ್ಲೇ ಮುಗ್ಗರಿಸಿದರು. * 2ನೇ ಪ್ರಶಸ್ತಿಯತ್ತ ಒಸಾಕಾ
    2018ರ ಚಾಂಪಿಯನ್ ನವೊಮಿ ಒಸಾಕಾ ದಿನದ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಸ್ಥಳೀಯ ಪ್ರತಿಭೆ ಜೆನ್ನಿರ್ ಬ್ರಾಡಿ ಅವರನ್ನು 7-6, 3-6, 6-3 ಸೆಟ್‌ಗಳಿಂದ ಮಣಿಸಿದರು. ಇದರೊಂದಿಗೆ ಎರಡನೇ ಬಾರಿಗೆ ಫ್ಲೆಷಿಂಗ್ ಮೆಡೋಸ್‌ನಲ್ಲಿ ಪ್ರಶಸ್ತಿ ಸನಿಹಕ್ಕೇರಿದರು. 22 ವರ್ಷದ ಒಸಾಕ 3ನೇ ಗ್ರಾಂಡ್ ಸ್ಲಾಂ ಪ್ರಶಸ್ತಿಯತ್ತ ದಿಟ್ಟ ಹೆಜ್ಜೆಹಾಕಿದರು. ಮತ್ತೊಂದೆಡೆ, ಚೊಚ್ಚಲ ಗ್ರಾಂಡ್ ಸೆಮಿೈನಲ್ ಆಡಿದ ಬ್ರಾಡಿ, ಜಪಾನ್ ಆಟಗಾರ್ತಿ ಎದುರು ಪ್ರಬಲ ಪೈಪೋಟಿ ನಡುವೆಯೂ ನಿರಾಸೆ ಕಂಡರು. ಸೆರೇನಾ ಹಾಗೂ ಜಿನ್ನಿರ್ ಬ್ರಾಡಿ ಸೋಲಿನೊಂದಿಗೆ ಯುಎಸ್ ಅಂಗಳದಲ್ಲಿ ಸ್ಥಳೀಯರ ಅಬ್ಬರ ಸೆಮಿೈನಲ್‌ನಲ್ಲೇ ಅಂತ್ಯಗೊಂಡಂತಾಗಿದೆ.

    * ವಿಕ್ಟೋರಿಯಾ ಅಜರೆಂಕಾ 2013ರ ಬಳಿಕ ಗ್ರಾಂಡ್ ಸ್ಲಾಂ ಟೂರ್ನಿಗಳಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದರು. 2012ರಲ್ಲಿ ಆಸ್ಟ್ರೇಲಿಯನ್ ಓಪನ್ ಹಾಗೂ 2013ರಲ್ಲಿ ಯುಎಸ್ ಓಪನ್ ಫೈನಲ್ ಪಂದ್ಯಗಳಲ್ಲಿ ಸೆರೇನಾ ವಿಲಿಯಮ್ಸ್‌ಗೆ ಶರಣಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts