More

    ಯಾತ್ರೆ ಅತ್ಯಂಥ ಅದ್ದೂರಿ ಸ್ವಾಗತಿಸಲು ಸಭೆ


    ಯಾದಗಿರಿ: ಗಡಿ ಜಿಲ್ಲೆಯಲ್ಲಿನ ಕನ್ನಡದ ಕಂಪನ್ನು ಮತ್ತಷ್ಟು ಪಸರಿಸಲು ಸಾಹಿತ್ಯ ಪರಿಷತ್ತು ರಚನಾತ್ಮಕ ನೆಲೆಗಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ಸಿದ್ದಪ್ಪ ಹೊಟ್ಟಿ ತಿಳಿಸಿದರು.

    ಶನಿವಾರ ಇಲ್ಲಿನ ಜಿಲ್ಲಾ ಕಸಾಪ ಭವನದಲ್ಲಿ ಕರೆದಿದ್ದ ಪ್ರಥಮ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು ಮತ್ತು ಪರಿಷತ್ ಸದಸ್ಯರ ಆಶಯದಂತೆ ಕಳೆದ ಆರೇಳು ವರ್ಷಗಳಿಂದ ಜಿಲ್ಲೆಯಲ್ಲಿ ಸಾಹಿತ್ಯಿಕ ಚಟುವಟಿಕೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಯೋಜಿಸುತ್ತ ಬರಲಾಗಿದೆ. ಜಿಲ್ಲಾ ಮಟ್ಟದ 4 ಸಮ್ಮೇಳನಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ ಎಂದು ವಿವರಿಸಿದರು.

    ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆ ಡಿ.7ರಂದು ಯಾದಗಿರಿ ಜಿಲ್ಲೆಯ ಶಹಾಪುರ ನಗರವನ್ನು ಪ್ರವೇಶಿಸುತ್ತಿದೆ. ಜಿಲ್ಲಾ ಮತ್ತು ತಾಲೂಕು ಪರಿಷತ್ತಿನಿಂದ ಯಾತ್ರೆಯನ್ನು ಅತ್ಯಂಥ ಅದ್ದೂರಿಯಾಗಿ ಸ್ವಾಗತಿಸಲು ಸಭೆ ನಿರ್ಣಯಿಸಿದೆ ಎಂದರು.

    ಬೆಳಗ್ಗೆ 10.30ಕ್ಕೆ ಶಹಾಪುರ ನಗರದ ಚರಬಸವೇಶ್ವರ ಕಮಾನ್ನಿಂದ ರಥಯಾತ್ರೆ ಸ್ವಾಗತಿಸುವ ಮೂಲಕ ಮೆರವಣಿಗೆಯ ಮೂಲಕ ಬೀಳ್ಕೊಡಲಾಗುವುದು. ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರು ಇತರ ಜನ ಪ್ರತಿನಿಗಳು, ಕನ್ನಡಪರ, ರೈತಪರ, ಪ್ರಗತಿಪರ ಸಂಘಟನೆಗಳ ಎಲ್ಲ ಪದಾಕಾರಿಗಳು ಹಾಗೂ ಶಾಲಾ ಕಾಲೇಜುಗಳ ವಿದ್ಯಾಥರ್ಿಗಳು ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ ಅವರು, 5ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಹಾಪುರ ತಾಲೂಕಿನ ಪರಿಷತ್ತಿನ ಪದಾಕಾರಿಗಳ ಬೇಡಿಕೆಯಂತೆ ಮಾಚರ್್ 31ರ ಒಳಗಾಗಿ ಶಹಾಪುರದಲ್ಲಿ ಅತ್ಯಂತ ಅದ್ದೂರಿಯಾಗಿ ನಡೆಸಲು ಸಭೆಯು ನಿರ್ಣಯ ಕೈಗೊಂಡಿದೆ ಎಂದರು.
    ಜಿಲ್ಲಾ ಗೌರವ ಕಾರ್ಯದಶರ್ಿ ಡಾ.ಸಿದ್ದರಾಜ ರೆಡ್ಡಿ, ಡಾ.ಭೀಮರಾಯ ಲಿಂಗೇರಿ, ಪ್ರಾಂಶುಪಾಲರಾದ ಡಾ. ಸುಭಾಷಚಂದ್ರ ಕೌಲಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕಿ ಉತ್ತರಾದೇವಿ ಮಠಪತಿ, ಡಿಡಿಪಿಯು ಎಂ.ಮರಿಸ್ವಾಮಿ, ಹಿರಿಯ ಸಾಹಿತಿ ಸಿದ್ದರಾಮ ಹೊನ್ಕಲ್, ಅಯ್ಯಣ್ಣ ಹುಂಡೆಕಾರ್, ಶಾಂತಪ್ಪ ಬೂದಿಹಾಳ, ಡಾ.ಗಾಳೆಪ್ಪ, ಪೂಜಾರಿ ತಾಲೂಕ ಅಧ್ಯಕ್ಷರಾದ ವೆಂಕಟೇಶ್ ಕಲ್ಕಂಬ, ಮಲ್ಲಿಕಾಜರ್ುನ್ ಕರ್ಕಳ್ಳಿ, ಬಸರೆಡ್ಡಿ ಎಂ.ಟಿ.ಪಲ್ಲಿ, ಶರಣಬಸವ ಎಳ್ವಾರ್, ವೆಂಕಟಗಿರಿ ದೇಶಪಾಂಡೆ, ಭಾಗ್ಯವಂತಿ ಕೆಂಬಾವಿ, ಸೆಫೇ ತುನ್ನೂರ್, ನೀಲಕಂಠ ಬಡಿಗೇರ್, ಮಹಿಪಾಲರೆಡ್ಡಿ ಜೋಳದಡಗಿ, ರಾಜಶೇಖರ್ ಪಾಟೀಲ್, ಎಂ.ಕೆ.ಬೀರನೂರ, ಸ್ವಾಮಿದೇವ ದಾಸನಕೆರಿ, ಎಸ್.ಪಿ ನಾಡೆಕರ್, ದೇವರಾಜ ವರ್ಕನಳ್ಳಿ, ನೂರುಂದಪ್ಪ ಲೆವಡಿ, ಬಸವಂತರಾಯ ಮಾಲಿ ಪಾಟೀಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts