More

    ಯಳಂದೂರಿನಲ್ಲೂ ಗ್ರಾಮೀಣ ದಸರಾ ವೈಭವ

    ಯಳಂದೂರು: ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಗ್ರಾಮೀಣ ದಸರಾ ಕಾರ್ಯಕ್ರಮಗಳು ಗಮನ ಸೆಳೆದವು.


    ಷಡಕ್ಷರ ದೇವರ ಗದ್ದುಗೆ ಮುಂಭಾಗ ಬೆಳಗ್ಗೆ ವಿವಿಧ ಸಾಂಸ್ಕೃತಿಕ ಕಲಾತಂಡಗಳ ಮೆರವಣಿಗೆಗೆ ಶಾಸಕ ಎನ್. ಮಹೇಶ್ ಚಾಲನೆ ನೀಡಿದರು. ಗೊರವರ ಕುಣಿತ, ನಾದಸ್ವರ, ದೊಣ್ಣೆವರಸೆ, ವೀರಗಾಸೆ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾತಂಡದ ಸದಸ್ಯರು ಕಲೆಯನ್ನು ಪ್ರದರ್ಶಿಸಿದರು.


    ಸಂಜೆ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಕೆಸ್ತೂರು ಪ್ರೌಢಶಾಲೆಯ ಕನ್ನಡ ಶಿಕ್ಷಕ ಶಿವಕುಮಾರ್ ಮಾತನಾಡಿ, ಮೈಸೂರು ಸಂಸ್ಥಾನ ನೀರಾವರಿ, ಶಿಕ್ಷಣ, ಕೈಗಾರಿಕೆಗೆ ನೀಡಿದ ಮಹತ್ವ, ರಾಜ್ಯಕ್ಕೆ ಮೈಸೂರು ಸಂಸ್ಥಾನದ ಕೊಡುಗೆ, ವಿಜಯದಶಮಿ ಹಬ್ಬದ ಸಂಭ್ರಮ, ದಸರಾದ ಪ್ರಾರಂಭ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ವಿಚಾರ ಮಂಡಿಸಿದರು.


    ಶಾಸಕ ಎನ್. ಮಹೇಶ್, ಮಾತನಾಡಿ, ಈ ನೆಲಕ್ಕೂ ದಸರಾಕ್ಕೂ ಅವಿನಾಭಾವ ಸಂಬಂಧ ಇದೆ ಎಂದು ಹೇಳಿದರು.


    ತಾಲೂಕಿನ ಸ್ಥಳೀಯ ಕಲಾವಿದರು ನಡೆಸಿಕೊಟ್ಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳು ನಡೆಸಿಕೊಟ್ಟ ನೃತ್ಯ ರೂಪಕಗಳು ಅಕರ್ಷಣೀಯವಾಗಿತ್ತು. ಮಲೆ ಮಹದೇಶ್ವರ, ಬಿಳಿಗಿರಿರಂಗಸ್ವಾಮಿ, ಸಿದ್ದಪ್ಪಸ್ವಾಮಿ, ಮಂಟೇಸ್ವಾಮಿಗಳ ಜಾನಪದ ಗೀತಗಾಯನ, ಭಜನೆ, ದೇವರ ಗೀತೆಗಳು, ಸುಗಮ ಸಂಗೀತ, ಚಲನ ಚಿತ್ರಗೀತೆಗಳು ಹಾಗೂ ರಸಮಂಜರಿ ಕಾರ್ಯಕ್ರಮಗಳು ನೆರೆದಿದ್ದ ಪ್ರೇಕ್ಷಕರಿಗೆ ರಸದೌತಣ ಬಡಿಸಿದವು.


    ಪಪಂ ಅಧ್ಯಕ್ಷೆ ಪ್ರಭಾವತಿ, ಉಪಾಧ್ಯಕ್ಷೆ ಲಕ್ಷ್ಮೀ, ಸದಸ್ಯರಾದ ಕೆ.ಮಲ್ಲಯ್ಯ, ಶಾಂತಮ್ಮ, ಸವಿತಾ, ಸುಶೀಲಾ, ನಾಮ ನಿರ್ದೇಶಿತ ಸದಸ್ಯರಾದ ನಿಂಗರಾಜು, ಮಹೇಶ್, ರಘು, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವೈ.ಎಂ. ಮಂಜುನಾಥ್, ತಹಸೀಲ್ದಾರ್ ಆನಂದಪ್ಪ ನಾಯಕ್, ಇಒ ಉಮೇಶ್, ಬಿಇಒ ಕೆ. ಕಾಂತರಾಜು ಕಸಾಪ ಅಧ್ಯಕ್ಷ ಎನ್.ನಾಗೇಂದ್ರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts