More

    ಮೈನಾಳದಲ್ಲಿ ಭೂಮಿ ಬಿರುಕು

    ಕಲಬುರಗಿ: ಮೈನಾಳ ಗ್ರಾಮ ಹೊರವಲಯದಲ್ಲಿ ಭೂಮಿ ಬಿರುಕು ಬಿಟ್ಟಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಸುಮಾರು 60 ಗಜ ಆಳ ಭೂಮಿ ಬಾಯ್ತೆರೆದುಕೊಂಡಿದೆ. ದಿಢೀರ್ ಹೀಗೆ ಆಗಿರುವುದು ಜಮೀನಿನ ರೈತ ಸೇರಿ ಗ್ರಾಮಸ್ಥರಲ್ಲಿ ಭಯ ಮನೆ ಮಾಡುವಂತಾಗಿದೆ.
    ಭೂಗರ್ಭದಲ್ಲಿ ರಸಾನಿಯಕಗಳ ಕ್ರಿಯೆಯಿಂದಾಗಿ ಭೂಮಿಯೊಳಗೆ ಸಹಜವಾಗಿ ಬಿರುಕು ಕಾಣಿಸಿಕೊಳ್ಳಲಿದ್ದು, ಯಾರೊಬ್ಬರೂ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ.
    ಸುದ್ದಿ ತಿಳಿಯುತ್ತಲೇ ಜನರು ಜಮಾಯಿಸಿ ಮುಂದೇನು ಕಾದಿದೆಯೋ ಎಂದು ಕಳವಳದಿಂದ ಮಾತನಾಡಿಕೊಳ್ಳುತ್ತಿದ್ದರು. ಮೂರು ದಿನ ಹಿಂದೆಯೇ ಈ ಘಟನೆ ನಡೆದಿದ್ದು, ಜನರು ಕುತೂಹಲದಿಂದ ನೋಡಲು ಬರುತ್ತಿದ್ದಾರೆ.
    ಜನರಲ್ಲಿ ಉಂಟಾಗಿರುವ ಭಯ ಹೋಗಲಾಡಿಸುವಂಥ ಕೆಲಸ ಮಾಡಬೇಕು ಎಂದು ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಜಿಲ್ಲಾಡಳಿತಕ್ಕೆ ಪತ್ರ ಬರೆದು ಕೋರಿದ್ದಾರೆ. ತಜ್ಞರನ್ನು ಕೂಡಲೇ ಮೈನಾಳ ಗ್ರಾಮಕ್ಕೆ ಕಳುಹಿಸಿಕೊಡುವ ಮೂಲಕ ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಜನರು ಗಾಬರಿ ಆಗಬೇಕಿಲ್ಲ ಎಂದು ಧೈರ್ಯ ತುಂಬಿದ್ದಾರೆ.
    ಭೂಮಿಯಲ್ಲಿ ನಡೆಯುವ ಸಹಜ ಘಟನೆ ಇದು ಎಂದು ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಮತ್ತು ಹೆಚ್ಚುವರಿ ಡಿಸಿ ಡಾ.ಶಂಕರ ವಣಿಕ್ಯಾಳ ತಿಳಿಸಿದ್ದಾರೆ. ಸಹಾಯಕ ಆಯುಕ್ತ ರಾಮಚಂದ್ರಪ್ಪ ಮತ್ತು ಭೂಗರ್ಭ ಶಾಸ್ತ್ರ ತಜ್ಞರು ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಜನರಲ್ಲಿ ಧೈರ್ಯ ತುಂಬುವುದರ ಜತೆಗೆ ಅರಿವು ಮೂಡಿಸುವ ಕೆಲಸ ಮಾಡಿ ವರದಿ ಸಲ್ಲಿಸುವಂತೆ ಡಿಸಿ ಸೂಚನೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts